ʼದಿ ಲ್ಯಾಂಡ್ ಮಾರ್ಕ್ ಆಫ್ ಗಾಂಧಿ ಬಜಾರ್ʼ ಎಂದೇ ಹೆಸರಾಗಿರುವ ʼಯುಡಿ-ರೋಟಿಘರ್ʼ ಬೆಂಗಳೂರಿನ ʼಉಪಾಹಾರ ದರ್ಶಿನಿʼ ಹೋಟೆಲ್ ಸಮೂಹದ ಪ್ರಮುಖ ರೆಸ್ಟೋರೆಂಟ್. ವಾರವಿಡೀ ಸಿಗುವ ಭರ್ಜರಿ ಊಟ, ವಾರಾಂತ್ಯದಲ್ಲಿ ಸಿಗುವ ಭರ್ಜರಿ ಟಿಫಿನ್ ಇಲ್ಲಿನ ಪ್ರಮುಖ ಆಕರ್ಷಣೆ. ಇದರ ಅಕ್ಕಪಕ್ಕದಲ್ಲೇ ಇವರದ್ದೇ ಆದ ʼಕೇಕ್ ಘರ್ʼ, ʼಮಿಠಾಯಿ ಘರ್ʼ ಕೂಡ ಇರುವುದರಿಂದ ಇದು ಸಿಹಿತಿನಿಸು ಹಾಗೂ ಬೇಕರಿ ತಿಂಡಿಗಳ ಪ್ರಿಯರಿಗೂ ಅಚ್ಚುಮೆಚ್ಚಿನ ತಾಣ. ಇಲ್ಲಿ ಪಾರ್ಟಿ ಹಾಲ್/ಕೇಟರಿಂಗ್ ಸೌಲಭ್ಯವೂ ಇದೆ.