ಬೆಂಗಳೂರಿನ ಬಸವನಗುಡಿಯ ಆಚಾರ್ಯ ಪಾಠಶಾಲೆ, ನ್ಯಾಷನಲ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು ಆರಂಭವಾದ ಹೋಟೆಲ್ ʼವಿದ್ಯಾರ್ಥಿ ಭವನʼ. ಮಸಾಲೆ ದೋಸೆಗೆ ಪ್ರಸಿದ್ಧಿ ಪಡೆದಿರುವ ಈ ಹೋಟೆಲ್ ಆರಂಭವಾಗಿದ್ದು 1943ರಲ್ಲಿ. ಡಾ.ರಾಜ್‌ಕುಮಾರ್, ಅಂಬರೀಷ್, ದ್ವಾರಕೀಶ್, ಇನ್‌ಫೊಸಿಸ್ ನಾರಾಯಣಮೂರ್ತಿ, ಸುಧಾಮೂರ್ತಿ.. ಹೀಗೆ ಹಲವು ಗಣ್ಯಾತಿಗಣ್ಯರು ಈ ಹೋಟೆಲ್‌ನಲ್ಲಿ ತಿನಿಸು ಸವಿದಿದ್ದಾರೆ.
ಪ್ರತಿದಿನ: ಬೆಳಗ್ಗೆ 6.30-12, ಮಧ್ಯಾಹ್ನ 2-8
ಶುಕ್ರವಾರ ರಜಾ ದಿನ