ಶ್ರೀಮಂತ ಭಾರತೀಯ ಆಹಾರ ಸಂಸ್ಕೃತಿಗೆ ಜಗತ್ತನ್ನು ಪರಿಚಯಿಸುವ ಉದ್ದೇಶದಿಂದ ಮತ್ತು ದೇಶದ ವೈವಿಧ್ಯಮಯ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು 2017ರಲ್ಲಿ ವರ್ಲ್ಡ್ ಫುಡ್ ಇಂಡಿಯಾ ಪ್ರಾರಂಭಿಸಿತು. ಈ ವರ್ಷ ವರ್ಲ್ಡ್ ಫುಡ್ ಇಂಡಿಯಾ ಸೆಪ್ಟೆಂಬರ್ 19ರಿಂದ 22ರ ವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿನ ಭಾರತ ಮಂಟಪದಲ್ಲಿ ನಡೆಯಲಿದೆ. ಈ ಕುರಿತ ವಿವರಗಳನ್ನು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವ ಚಿರಾಗ್ ಪಾಸ್ವಾನ್ ಜೂ.19ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹಂಚಿಕೊಂಡಿದ್ದಾರೆ.