ಬೆಂಗಳೂರು: ʼವರ್ಲ್ಡ್ ಆಫ್ ಹಾಸ್ಪಿಟಾಲಿಟಿʼ ಆಯೋಜಿಸಿರುವ ದಕ್ಷಿಣ ಭಾರತದ ಅತಿ ದೊಡ್ಡ ಆಹಾರ ಮತ್ತು ಆತಿಥ್ಯ ಉದ್ಯಮದ ವಾಣಿಜ್ಯ ಪ್ರದರ್ಶನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಇಂದು ಆರಂಭವಾಗಿರುವ ಬೃಹತ್ ಪ್ರದರ್ಶನ ನಾಳೆ (ಜೂ.13) ಮತ್ತು ನಾಡಿದ್ದು (ಜೂ.14) ಕೂಡ ಇರಲಿದೆ.
ಹೋಟೆಲ್, ರೆಸ್ಟೋರೆಂಟ್ ಹಾಗೂ ಕೇಟರಿಂಗ್ ಉದ್ಯಮದವರನ್ನು ಒಂದೇ ಸೂರಿನಡಿ ಉದ್ಯಮ ಸಮೂಹವಾಗಿ ಬೆಳವಣಿಗೆ ಹೊಂದಲು ಪೂರಕವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಬೃಹತ್ ಪ್ರದರ್ಶನದಲ್ಲಿ 250ಕ್ಕೂ ಅಧಿಕ ಪ್ರದರ್ಶಕರು, 500ಕ್ಕೂ ಅಧಿಕ ಬ್ರ್ಯಾಂಡ್ಗಳು, 10 ಸಾವಿರಕ್ಕೂ ಅಧಿಕ ಉದ್ಯಮ ಅತಿಥಿಗಳು ಹಾಗೂ 200ಕ್ಕೂ ಅಧಿಕ ಆತಿಥೇಯ ಗ್ರಾಹಕರ ಉಪಸ್ಥಿತಿ ಇದೆ. ಹೆಚ್ಚಿನ ಮಾಹಿತಿಗಾಗಿ ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ವೆಬ್ಸೈಟ್ ವೀಕ್ಷಿಸಿ.


ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಸುಖ್ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥಾಪಕ ಸುರೇಶ್ ಎಸ್. ಪೂಜಾರಿ ವಿಧಿವಶ
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್ಎ ಜೀವಮಾನದ ಸಾಧನೆ ಪ್ರಶಸ್ತಿʼ



