ಒಳಗೇನಿದೆ!?

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೂಲಕ ಈಡೇರಿತು ಹೋಟೆಲಿಗರ ಮಹತ್ವದ ಬೇಡಿಕೆ; ಬಿಎಚ್‌ಎ ಮನವಿಗೆ ಸ್ಪಂದನೆ

ಹೋಟೆಲ್​ ಕನ್ನಡ, ಬೆಂಗಳೂರು: ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್​ಎ)ದ ಮಹತ್ವದ ಬೇಡಿಕೆಯೊಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮುಖೇನ ಈಡೇರಿದೆ. ಬಹುಕಾಲದ ಬೇಡಿಕೆಯೊಂದರ ಬಗ್ಗೆ ಜೋಶಿ ಅವರಿಗೆ ಬಿಎಚ್​ಎ ಮನವಿ ಮಾಡಿಕೊಂಡಿದ್ದು, ಅದೀಗ ಕಾರ್ಯಗತಗೊಂಡಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್​ಎಸ್​ಎಸ್​​ಎ) ನೀಡುವ ಪ್ರಮಾಣಪತ್ರ ಹಾಗೂ ಪರವಾನಗಿಗಳನ್ನು ಪದೇಪದೇ ನವೀಕರಣಗೊಳಿಸುವ ಬದಲು ಅವುಗಳನ್ನು ಜೀವಿತಾವಧಿಗೆ ಜಾಲ್ತಿಯಲ್ಲಿ ಇರುವಂತೆ ಮಾಡಬೇಕು ಎಂಬುದು ಬೆಂಗಳೂರು ಹೋಟೆಲುಗಳ ಸಂಘದ ಮಹತ್ವದ ಬೇಡಿಕೆಯಾಗಿತ್ತು.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಈ ಕುರಿತು ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್. ವೀರೇಂದ್ರ ಕಾಮತ್ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ 2022ರ ಮಾರ್ಚ್​ನಲ್ಲಿ ಲಿಖಿತ ಮನವಿ ಸಲ್ಲಿಸಿದ್ದರು.

ಬೆಂಗಳೂರು ಹೋಟೆಲುಗಳ ಸಂಘದ ಈ ಮನವಿಯನ್ನು ಸಚಿವ ಜೋಶಿಯವರು ಕೇಂದ್ರ ಆರೋಗ್ಯ ಸಚಿವರಿಗೆ ಶಿಫಾರಸು ಮಾಡಿದ್ದರು. ಇದೀಗ ಎಫ್​ಎಸ್​ಎಸ್​​ಎ ನಿಯಮಗಳಲ್ಲಿ ಸುಧಾರಣೆಯಾಗಿದ್ದು, ಪರಿಷ್ಕೃತ ನಿಯಮಗಳಲ್ಲಿ ಹೋಟೆಲಿಗರ ಮನವಿಗೂ ಸಕಾತಾತ್ಮಕ ಸ್ಪಂದನೆ ಸಿಕ್ಕಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಬಿಎಚ್‌ಎ ಮನವಿ ಸಲ್ಲಿಸಿದ್ದ ಸಂದರ್ಭದ ಚಿತ್ರ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ವ್ಯಾಪಾರ ವಹಿವಾಟು ಇನ್ನಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ತರಲಾಗಿರುವ ಸುಧಾರಣೆಗಳ ಕುರಿತು ಎಫ್​ಎಸ್​ಎಸ್​ಎಐ ಶುಕ್ರವಾರ ಸುತ್ತೋಲೆ ಹೊರಡಿಸಿದ್ದು, ಎಫ್​ಎಸ್​ಎಸ್​ಎಐ ಪ್ರಮಾಣಪತ್ರ ಹಾಗೂ ಪರವಾನಗಿಗಳನ್ನು ಜೀವಿತಾವಧಿಗೊಳಿಸಿರುವ ಬಗ್ಗೆ ಅದರಲ್ಲಿ ಉಲ್ಲೇಖಿಸಿದೆ.

ಹೀಗಾಗಿ ಇನ್ಮುಂದೆ ಎಫ್​ಎಸ್​ಎಸ್​ಎಐ ಪ್ರಮಾಣಪತ್ರ/ಪರವಾನಗಿಗಳನ್ನು ನಿಯಮಿತವಾಗಿ ನವೀಕರಣಗೊಳಿಸಬೇಕಾಗಿಲ್ಲ, ಒಮ್ಮೆ ಪಡೆದರೆ ಅದು ಜೀವಿತಾವಧಿಗೆ ಜಾರಿಯಲ್ಲಿರಲಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಉದ್ಯೋಗಿಗಳಿಗೆ ಸರ್ಕಾರದಿಂದ ಸಂತಸದ ಸುದ್ದಿ; ಇನ್ಮುಂದೆ ಪೂರ್ತಿ ಹಣ ಪಡೆಯುವ ಅವಕಾಶ..

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?



ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ