ಹೋಟೆಲ್ ಕನ್ನಡ, ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರದ ಬಸ್ರೂರು ಸಮೀಪದ ಬೃಹತ್ ದೇವತಾ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಹೋಟೆಲೋದ್ಯಮಿಯೊಬ್ಬರು ಇದರ ನೇತೃತ್ವ ವಹಿಸಿದ್ದಾರೆ. ಅರ್ಥಾತ್, ಕಂದಾವರ ಗ್ರಾಮದ ಕೊಳನಕೋಡು ಶ್ರೀ ಮಹಾಗಣಪತಿ ಉಮಾಮಹೇಶ್ವರ ಪಾರ್ವತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಇದೇ ಏ.19ರ ಶನಿವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ.
ಹೋಟೆಲೋದ್ಯಮಿ ಬಿ.ಎಸ್.ಮಂಜುನಾಥ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಜೀರ್ಣೋದ್ಧಾರ ಕಾರ್ಯದ ಸಲುವಾಗಿ ನೀಲನಕ್ಷೆ ಅನಾವರಣ ಸಮಾರಂಭವನ್ನು ʼಶಿವೋಹಂʼ ಎಂಬ ಹೆಸರಿನಲ್ಲಿ ಶನಿವಾರ ಅದ್ಧೂರಿಯಾಗಿ ಆಯೋಜಿಸಲಾಯಿತು. ಈ ದೇವಸ್ಥಾನದ ಧರ್ಮದರ್ಶಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಬಿ.ಎಸ್. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆರವೇರಿತು. ಕಂದಾವರದ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಬಿ.ವೆಂಕಟರಾಮ ಉಡುಪ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಬೆಂಗಳೂರಿನ ಹೋಟೆಲ್ ಉದ್ಯಮಿ ಶ್ರೀ ಬಿ.ಎ. ನರಸಿಂಹಮೂರ್ತಿ ಅವರು ದೇವಸ್ಥಾನದ ಜೀರ್ಣೋದ್ಧಾರದ ನೀಲನಕ್ಷೆ ಅನಾವರಣಗೊಳಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಜ್ಯೋತಿಷಿಗಳಾದ ವಿದ್ವಾನ್ ಮಾಧವ ಅಡಿಗ ಅವರು ನೆರೆದಿದ್ದ ಭಕ್ತಾದಿಗಳಿಗೆ ಧಾರ್ಮಿಕ ಪ್ರವಚನ ನೀಡಿ ಆಶೀರ್ವಚನಗೈದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಪ್ತಿಯ ಕೃಷ್ಣ ಕೃಪಾ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಜಯಪ್ರಕಾಶ್ ಶೆಟ್ಟಿ, ಬಳ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀಧರ ಉಡುಪ, ಕಾಡಿನಕೋಡದ ತಾಯಿ ಸನ್ನಿಧಿಯ ಯೋಗೀಶ ಪುರಾಣಿಕ, ಹುಬ್ಬಳ್ಳಿ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್‌ನ ವಿಜಯ ಪೂಜಾರಿ, ದೇವಸ್ಥಾನದ ಅರ್ಚಕರಾದ ಶಂಕರನಾರಾಯಣ ಉಡುಪ (ಬಾಬಣ್ಣ) ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಖಜಾಂಚಿ ಬಿ.ಎಂ. ಧನಂಜಯ ಅವರು ಸರ್ವರನ್ನೂ ಸ್ವಾಗತಿಸಿದ್ದು, ಮಣಿಕಂಠ ಶೆಟ್ಟಿ ಅವರು ಕಾರ್ಯಕ್ರಮದ ನಿರ್ವಹಣೆ ವಹಿಸಿದ್ದರು. ರವೀಂದ್ರ ದೇವಾಡಿಗ ವಂದನಾರ್ಪಣೆ ಸಲ್ಲಿಸಿದರು. ದಿನೇಶ್ ದೇವಾಡಿಗ, ಮಹಾಲಿಂಗ ಮೊಗವೀರ, ಕರುಣಾಕರ ದೇವಾಡಿಗ ಮುಂತಾದವರು ಸಹಕರಿಸಿದರು.
ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಜೆ ಬಸ್ರೂರಿನ ನಾಟ್ಯಾಂಜಲಿ ಕಲಾನಿಕೇತನದ ವಿದ್ಯಾರ್ಥಿಗಳಿಂದ ‘ಭರತ ಕಲಾ ವೈಭವ’ ನೃತ್ಯ ಸಿಂಚನ (ನೃತ್ಯ ನಿರ್ದೇಶನ: ವಿದುಷಿ ಕಲಾಶ್ರೀ ಪುನೀತ್) ಪ್ರೇಕ್ಷಕರ ಮನಸೂರೆಗೊಂಡಿತು. ಆಗಮಿಸಿದ ಭಕ್ತಾದಿಗಳಿಗೆ ಸಭಾ ಕಾರ್ಯಕ್ರಮದ ನಂತರ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 8 ಗಂಟೆಗೆ ಕನ್ನುಕೆರೆ-ತೆಕ್ಕಟ್ಟೆಯ ಓಂಕಾರ ಕಲಾವಿದರಿಂದ “ಕಥೆ ಈಗ ಶುರು…” ಎಂಬ ಕುತೂಹಲಭರಿತ ಹಾಸ್ಯಮಯ ಸಾಮಾಜಿಕ ನಾಟಕ ಪ್ರದರ್ಶನಗೊಂಡು ನೆರೆದಿದ್ದವರನ್ನು ರಂಜಿಸಿತು.
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ
ದೇವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ಊರ-ಪರವೂರ ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಅಂದಾಜು ಹತ್ತು ಕೋಟಿ ರೂ. ಯೋಜನೆ
ಕೊಳನಕೋಡು ಶ್ರೀಮಹಾಗಣಪತಿ ಉಮಾಮಹೇಶ್ವರ ಪಾರ್ವತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಅಂದಾಜು ಹತ್ತು ಕೋಟಿ ರೂ. ವೆಚ್ಚದಲ್ಲಿ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸುಮಾರು 2-3 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದ್ದು, ಜೀರ್ಣೋದ್ಧಾರದ ವೆಚ್ಚ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ
ಬಿ.ಎಸ್.ಮಂಜುನಾಥ ಅವರ ಕಿರುಪರಿಚಯ

ಮೂಲತಃ ಸ್ಥಳೀಯರೇ ಆಗಿರುವ ಬಿ.ಎಸ್. ಮಂಜುನಾಥ ಅವರು ಬೆಂಗಳೂರಿನಲ್ಲಿ ಹೋಟೆಲೋದ್ಯಮಿ ಆಗಿದ್ದು, ಬೆಂಗಳೂರಿನ ಯಡಿಯೂರು ವೃತ್ತ ಬಳಿ ʼವೈಭವ್ ರೆಸ್ಟೋರೆಂಟ್ʼ ಹೊಂದಿದ್ದಾರೆ. ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರಿ ಬ್ಯಾಂಕ್‌ನಲ್ಲಿ ಸುಮಾರು 27 ವರ್ಷಗಳ ಕಾಲ ನಿರ್ದೇಶಕರಾಗಿದ್ದ ಮಂಜುನಾಥ ಅವರು, ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕರಲ್ಲೊಬ್ಬರಾಗಿ, ಅದರ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಲ್ಲದೆ, ಇನ್ನೂ ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿ ಜನಾನುರಾಗಿ ಆಗಿದ್ದಾರೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಮಂಜುನಾಥ ಅವರ ಈ ದೇವತಾ ಕಾರ್ಯಕ್ಕೆ ಅವರ ಪುತ್ರ ಬಿ.ಎಂ. ಧನಂಜಯ ಅವರು ಹೆಗಲು ಕೊಟ್ಟಿದ್ದು, ಜೀರ್ಣೋದ್ಧಾರ ಸಮಿತಿಯ ಖಜಾಂಚಿಯಾಗಿ ದೊಡ್ಡ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಬೆಂಗಳೂರಿನ ʼಸೌತ್ ತಿಂಡೀಸ್ʼ ಮಾಲೀಕರಾಗಿರುವ ಬಿ.ಎಂ. ಧನಂಜಯ ಅವರು ಬೆಂಗಳೂರು ಹೋಟೆಲುಗಳ ಸಂಘದ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇವರಿಬ್ಬರ ನೇತೃತ್ವದಲ್ಲಿ ನಡೆಯುತ್ತಿರುವ ಈ ದೇವತಾ ಕಾರ್ಯಕ್ಕೆ ಸ್ಥಳೀಯ ಹಾಗೂ ಸುತ್ತಮುತ್ತಲ ಊರಿನ ಗಣ್ಯರು, ಊರ ಸಮಸ್ತರು ತನುಮನಧನ ಸಹಿತವಾಗಿ ಸಹಕರಿಸುತ್ತಿದ್ದಾರೆ.





ಇದೂ ಓದಿ: ಸದ್ಯದಲ್ಲೇ ಎಟಿಎಂ-ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವ ವ್ಯವಸ್ಥೆ; ಎಂದಿನಿಂದ ಜಾರಿ?
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದಿಂದ ಸಿಎಂ ಸಿದ್ದರಾಮಯ್ಯಗೆ ಮನವಿ; ಏನಿದು ಬೇಡಿಕೆ?
ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್



