ಒಳಗೇನಿದೆ!?

ಹೋಟೆಲ್‌ ವ್ಯವಹಾರ ತಿಳಿಯಲು ಬಂದಿದ್ದ ವ್ಯಕ್ತಿ ಹೋಟೆಲ್‌ ಲಿಫ್ಟ್‌ಗೆ ಸಿಲುಕಿ ಸಾವು

ಹೋಟೆಲ್‌ ಕನ್ನಡ, ಬೆಂಗಳೂರು: ಹೋಟೆಲ್‌ ಮಾಲೀಕ ಆಗುವ ಕನಸು ಕಂಡಿದ್ದ ವ್ಯಕ್ತಿಯ ಬದುಕು ಹೋಟೆಲ್‌ ಲಿಫ್ಟ್‌ನಲ್ಲಿಯೇ ಅಂತ್ಯ ಕಂಡ ಘಟನೆ ರಾಜಧಾನಿ ಬೆಂಗಳೂರಿನ ಹೋಟೆಲೊಂದರಲ್ಲಿ ಸಂಭವಿಸಿದೆ.

ಹುಬ್ಬಳ್ಳಿ ಮೂಲದ ರಾಜೇಶ್‌ (22) ಸಾವಿಗೀಡಾದ ದುರ್ದೈವಿ. ಬೆಂಗಳೂರಿನ ಜಯನಗರದ ʼದಕ್ಷಿಣ ಉಪಾಹಾರʼ ಎಂಬ ಹೋಟೆಲ್‌ನಲ್ಲಿ ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಹೋಟೆಲ್‌  ಆರಂಭಿಸುವ ಆಲೋಚನೆಯಲ್ಲಿದ್ದ ರಾಜೇಶ್‌ ತಮ್ಮ ಸ್ನೇಹಿತರಾದ ಅವಿನಾಶ್‌ ಅವರ ಹೋಟೆಲ್‌ನಲ್ಲಿ ಆ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಆಗಮಿಸಿದ್ದರು.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಹೋಟೆಲ್‌ ನಿರ್ವಹಣೆ, ಆಹಾರ ಪದಾರ್ಥಗಳ ತಯಾರಿ, ಕಾರ್ಯವೈಖರಿ ಹಾಗೂ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಲು ಹೋಟೆಲ್‌ಗೆ ಬಂದಿದ್ದ ರಾಜೇಶ್‌, ಸರಕು ಸಾಗಣೆಗೆ ಅಳವಡಿಸಿದ್ದ ಲಿಫ್ಟ್‌ನಲ್ಲಿ ಸಾಗುವಾಗ ಈ ಅವಘಡ ನಡೆದಿದೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ರಾಜೇಶ್‌ ತೆರಳುವಾಗ ಲಿಫ್ಟ್‌ ಬಾಗಿಲು ಮಧ್ಯದಲ್ಲೇ ತೆರೆದುಕೊಂಡಿದ್ದು, ಅವರು ಹೊರಬರಲು ಮುಂದಾದಾಗ ಬಾಗಿಲಿಗೆ ತಲೆ ಸಿಲುಕಿ ಸಜ್ಜಾಗೆ ಬಡಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. 

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಈ ಸಂಬಂಧ ಹೋಟೆಲ್‌ ಮಾಲೀಕರಾದ ಮಾಲಿನಿ ಎಂಬವರ ವಿರುದ್ದ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದೂ ಓದಿ: ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರ ಜೊತೆ ಚರ್ಚಿಸಿದ ಸಿಎಂ; ಇಲ್ಲಿದೆ ಸಂಪೂರ್ಣ ವಿವರ..

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ