ಒಳಗೇನಿದೆ!?

ಬೆಂಗಳೂರಿನಲ್ಲಿ ನಾಳೆಯಿಂದ ಬೇಕರಿ-ಕಾಂಡಿಮೆಂಟ್ಸ್‌ ಅನಿರ್ದಿಷ್ಟಾವಧಿಗೆ ಬಂದ್

ಹೋಟೆಲ್‌ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೇಕರಿ ಹಾಗೂ ಕಾಂಡಿಮೆಂಟ್ಸ್‌ ಜೂನ್‌ 18ರ ಗುರುವಾರದಿಂದ ಅನಿರ್ದಿಷ್ಟಾವಧಿಗೆ ಬಂದ್‌ ಆಗಿರಲಿವೆ.

ಪರಿಣಾಮವಾಗಿ.. ಹಾಲು, ಕಾಫಿ-ಟೀ, ತಿಂಡಿ-ತಿನಿಸು ಮುಂತಾದ ದಿನನಿತ್ಯದ ಅಗತ್ಯಗಳಿಗೆ ಇವುಗಳನ್ನು ಅವಲಂಬಿಸಿರುವ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಬಹುದು.

ಹಫ್ತಾ ವಸೂಲಿ, ಅಧಿಕಾರಿಗಳ ಕಿರುಕುಳ ಹಾಗೂ ಪುಡಿ ರೌಡಿಗಳ ದಬ್ಬಾಳಿಕೆಗೆ ಬೇಸತ್ತಿರುವ ವ್ಯಾಪಾರಿಗಳು ಅನಿವಾರ್ಯವಾಗಿ ಈ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ರವಿ ಶೆಟ್ಟಿ ಬೈಂದೂರು ಅವರ ಕರ್ನಾಟಕ ಕಾರ್ಮಿಕ ಪರಿಷತ್ ನೇತೃತ್ವದಲ್ಲಿ ಈ ಮುಷ್ಕರ ನಡೆಯಲಿದ್ದು, ನಗರದ ವಿವಿಧ ಭಾಗಗಳ ಬೇಕರಿ, ಕಾಂಡಿಮೆಂಟ್, ಟೀ ಸ್ಟಾಲ್‌ಗಳು ಹಾಗೂ ಸಣ್ಣ ಉಪಾಹಾರ ಕೇಂದ್ರಗಳು ಗುರುವಾರದಿಂದ ವ್ಯಾಪಾರ ಸ್ಥಗಿತಗೊಳಿಸಲಿವೆ.

ಇದೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಉಪಟಳ-ಹಲ್ಲೆ: ಸದ್ಯದಲ್ಲೇ ಬೇಕರಿ-ಕಾಂಡಿಮೆಂಟ್ಸ್‌ ಮಾಲೀಕರ ಮಹತ್ವದ ಸಭೆ

ಹಫ್ತಾ ವಸೂಲಿ ಕಾಟ, ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳ ನಿರಂತರ ತಪಾಸಣೆ ಹೆಸರಿನ ಕಿರುಕುಳ ಹಾಗೂ ತಂಬಾಕು ಉತ್ಪನ್ನಗಳ ಜಪ್ತಿ ಕ್ರಮಗಳಿಂದ ವ್ಯಾಪಾರ ನಡೆಸುವುದೇ ಕಷ್ಟಕರವಾಗಿದೆ ಎಂದು ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೂ ಓದಿ:ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಸರ್ಕಾರ ಗೊಂದಲ ನಿವಾರಿಸಲಿ

ಸರ್ಕಾರವೇ ಪರವಾನಗಿ ನೀಡಿರುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೆ, ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಒಂದು ಕಡೆ ಮಾರಾಟಕ್ಕೆ ಅವಕಾಶವಿದ್ದು, ಮತ್ತೊಂದೆಡೆ ಜಪ್ತಿ ನಡೆಯುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಸ್ಪಷ್ಟ ನೀತಿ ಪ್ರಕಟಿಸಬೇಕೆಂದು ಮಾಲೀಕರು ಆಗ್ರಹಿಸಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ನಗರದಲ್ಲಿ ಬೇಕರಿ-ಕಾಂಡಿಮೆಂಟ್ಸ್‌ ಮೇಲೆ ದಾಳಿ, ಅವುಗಳ ಮಾಲೀಕರ ಮೇಲೆ ಹಲ್ಲೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಸಣ್ಣ ಬಂಡವಾಳ ಹೂಡಿ ಕುಟುಂಬ ನಿರ್ವಹಿಸುತ್ತಿರುವ ಸಾವಿರಾರು ಬೇಕರಿ ಮತ್ತು ಕಾಂಡಿಮೆಂಟ್ ಮಾಲೀಕರಿಗೆ ಭದ್ರತಾ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎಂದು ಕಾರ್ಮಿಕ ಪರಿಷತ್ ಹೇಳಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಫೀನಿಕ್ಸ್‌ನಂತೆ ಮತ್ತೆ ಎದ್ದು ನಿಂತ ‘ಶುದ್ಧ ತಿಂಡಿ’: ಸುಟ್ಟು‌ ಹೋಗಿದ್ದ ಹೋಟೆಲ್‌ ಮರು ಆರಂಭ

ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್‌ ಹೋಟೆಲ್‌ ಎಂಬ ಮೆಚ್ಚುಗೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ