ಹೋಟೆಲ್ ಕನ್ನಡ, ಬೆಂಗಳೂರು: ಹೋಟೆಲ್ ಉದ್ಯಮವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯೊಂದರ ಪರಿಹಾರದ ಸಲುವಾಗಿ ಬೆಂಗಳೂರು ಹೋಟೆಲುಗಳ ಸಂಘದವರು ಸೋಮವಾರ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಪ್ರಧಾನ ಕಚೇರಿಗೆ ತೆರಳಿ, ಪ್ರಮುಖ ಅಧಿಕಾರಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್ಎ)ದ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ಜಂಟಿ ಕಾರ್ಯದರ್ಶಿಗಳಾದ ಬಿ.ಎಂ. ಧನಂಜಯ, ಕೃಷ್ಣರಾಜ್ ಅವರು ಸೋಮವಾರ ಆರ್ಬಿಐನ ಇಷ್ಯೂ ಇಲಾಖೆಯ ಡಿಜಿಎಂ ಸಂತೋಷ್ ಕುಮಾರ್ ಅವರ ಜೊತೆ ಚಿಲ್ಲರೆ ಸಮಸ್ಯೆ ಪರಿಹಾರ ಸಲುವಾಗಿ ಚರ್ಚಿಸಿದ್ದಾರೆ.
ಇದೂ ಓದಿ: ವಿತ್ತ ಸಚಿವೆ ಜೊತೆ ಹೋಟೆಲೋದ್ಯಮಿಗಳ ಸಂವಾದ; ಗಮನ ಸೆಳೆದ ಸಂಗತಿ ಇದು…
ರಾಜಧಾನಿ ಬೆಂಗಳೂರಿನ ಹೋಟೆಲುಗಳಲ್ಲಿ ಆಗಾಗ ಕಾಡುತ್ತಿರುವ ಚಿಲ್ಲರೆ ಕೊರತೆ ಸಮಸ್ಯೆ ಮತ್ತೆ ಬಾಧಿಸಲಾರಂಭಿಸಿದ್ದರಿಂದ ಈ ಮಾತುಕತೆ ನಡೆದಿದೆ. ಚಿಲ್ಲರೆ ಕೊರತೆ ಎದುರಿಸಲು ಈ ಹಿಂದೆ ಬೇರೆ ರಾಜ್ಯಗಳಿಂದ ಚಿಲ್ಲರೆ ತರಿಸಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಈಗ ಆ ಮೂಲಕವೂ ಚಿಲ್ಲರೆ ಸರಿಯಾಗಿ ಲಭಿಸದ್ದರಿಂದ ಮತ್ತೆ ಆರ್ಬಿಐ ಮೊರೆ ಹೋಗಬೇಕಾಗಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಚಿಲ್ಲರೆ ಸಮಸ್ಯೆ ಕೊರತೆಯಿಂದ ಹೋಟೆಲಿಗರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಿಎಚ್ಎ ಪದಾಧಿಕಾರಿಗಳು ಡಿಜಿಎಂ ಸಂತೋಷ್ ಅವರ ಗಮನಕ್ಕೆ ತಂದು ಮನವರಿಕೆ ಮಾಡಿಸಿದ್ದು, ಅವರು ಸಮಸ್ಯೆ ಬಗೆಹರಿಸಲು ಆರ್ಬಿಐ ಕಡೆಯಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ಶೀಘ್ರದಲ್ಲೇ ಜರುಗಿಸುವ ಭರವಸೆ ನೀಡಿದ್ದಾರೆ.
ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್ ದೇವತಾ ಕಾರ್ಯ, ನೀಲನಕ್ಷೆ ಅನಾವರಣ
ಯಾವ ಸದಸ್ಯರಿಗೆ ತಮ್ಮ ಬ್ಯಾಂಕ್ ಶಾಖೆಯಿಂದ ಚಿಲ್ಲರೆ ಸಿಗುತ್ತಿಲ್ಲವೋ ಅವರು ತಮ್ಮ ಬ್ಯಾಂಕ್ ಶಾಖೆ-ಖಾತೆ ವಿವರ ಸಹಿತ ಬೆಂಗಳೂರು ಹೋಟೆಲುಗಳ ಸಂಘಕ್ಕೆ ಇ-ಮೇಲ್ (bangalorehotelsassn@gmail.com) ಮಾಡಿದರೆ ಅದನ್ನು ಮುಂದಿನ ಕ್ರಮಕ್ಕಾಗಿ ಆರ್ಬಿಐಗೆ ಫಾರ್ವರ್ಡ್ ಮಾಡಲಾಗುವುದು ಎಂದು ಬಿಎಚ್ಎ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಫೀನಿಕ್ಸ್ನಂತೆ ಮತ್ತೆ ಎದ್ದು ನಿಂತ ‘ಶುದ್ಧ ತಿಂಡಿ’: ಸುಟ್ಟು ಹೋಗಿದ್ದ ಹೋಟೆಲ್ ಮರು ಆರಂಭ



