ಹೋಟೆಲ್ ಕನ್ನಡ, ಬೆಂಗಳೂರು: ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ತನ್ನ ಕೆಲವು ಉತ್ಪನ್ನಗಳ ಬೆಲೆಯನ್ನು ಪರಿಷ್ಕರಿಸಿದ್ದು, ನೂತನ ದರ ತಕ್ಷಣದಿಂದಲೇ ಜಾರಿಗೆ ಬಂದಿದೆ. ಪರಿಣಾಮವಾಗಿ ಬಮೂಲ್ನ ವಿವಿಧ ತುಪ್ಪ ಹಾಗೂ ಬೆಣ್ಣೆ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಆಗಿದೆ.
ಈ ದರ ಪರಿಷ್ಕರಣೆಯಿಂದಾಗಿ ತುಪ್ಪದ ವಿವಿಧ ಪ್ಯಾಕ್ಗಳ ಬೆಲೆಯಲ್ಲಿ 5ರಿಂದ 35 ರೂಪಾಯಿವರೆಗೆ ಏರಿಕೆಯಾಗಿದೆ. ಜಿಎಸ್ಟಿ ಸೇರಿದಂತೆ ಪರಿಷ್ಕೃತ ದರಗಳನ್ನು ಪ್ರಕಟಿಸಿರುವ ಬಮೂಲ್, ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಬೆಲೆ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಇದೂ ಓದಿ: ಫೀನಿಕ್ಸ್ನಂತೆ ಮತ್ತೆ ಎದ್ದು ನಿಂತ ‘ಶುದ್ಧ ತಿಂಡಿ’: ಸುಟ್ಟು ಹೋಗಿದ್ದ ಹೋಟೆಲ್ ಮರು ಆರಂಭ
ಹೊಸ ದರಗಳ ಪ್ರಕಾರ, 200 ಮಿ.ಲೀ. ತುಪ್ಪದ ಬೆಲೆ 145ರಿಂದ 160 ರೂಪಾಯಿಗೆ ಏರಿಕೆ ಆಗಿದೆ. 500 ಮಿ.ಲೀ. ತುಪ್ಪದ ಬೆಲೆ 325ರಿಂದ 358 ಹಾಗೂ 1 ಲೀಟರ್ ತುಪ್ಪದ ಬೆಲೆ 650ರಿಂದ 715ಕ್ಕೆ ಏರಿಕೆಯಾಗಿದೆ.
ಪೆಟ್ ಜಾರ್ನಲ್ಲಿ 1 ಲೀಟರ್ ತುಪ್ಪ 735 ಹಾಗೂ 5 ಲೀಟರ್ ತುಪ್ಪ 3,575ಕ್ಕೆ ಮಾರಾಟವಾಗಲಿದೆ. ಅದೇ ರೀತಿ, 1 ಲೀಟರ್ ಟಿನ್ ತುಪ್ಪದ ದರ 669.64ರಿಂದ 750 ಹಾಗೂ 15 ಕೆ.ಜಿ. ಟಿನ್ ದರ 10,864.49ರಿಂದ 11,625 ರೂಪಾಯಿಗೆ ಏರಿಕೆಯಾಗಿದೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಬೆಣ್ಣೆ ಬೆಲೆಯಲ್ಲೂ ಹೆಚ್ಚಳ: ತುಪ್ಪ ಮಾತ್ರವಲ್ಲದೆ ಬೆಣ್ಣೆಯ ದರದಲ್ಲಿಯೂ ಏರಿಕೆ ಮಾಡಲಾಗಿದ್ದು, ಫ್ಯಾಮಿಲಿ ಪ್ಯಾಕ್ 71.43ರಿಂದ 80 ರೂಪಾಯಿಗೆ ಏರಿಕೆ ಆಗಿದೆ. ಉಪ್ಪು ಮಿಶ್ರಿತ ಬೆಣ್ಣೆ 100 ಗ್ರಾಮ್ಗೆ 62.50ರಿಂದ 70 ರೂಪಾಯಿಗೆ, 500 ಗ್ರಾಮ್ಗೆ 276.79ರಿಂದ 310 ರೂಪಾಯಿಗೆ ಹೆಚ್ಚಳವಾಗಿದೆ. ಹಾಗೆಯೇ ಉಪ್ಪುರಹಿತ ಬೆಣ್ಣೆ 200 ಗ್ರಾಮ್ಗೆ 220.54ರಿಂದ 235 ರೂಪಾಯಿಗೆ ಹಾಗೂ 500 ಗ್ರಾಮ್ಗೆ 294.84ರಿಂದ 330 ರೂಪಾಯಿಗೆ ಹೆಚ್ಚಳಗೊಂಡಿದೆ.
ಇದೂ ಓದಿ: ಕರಾವಳಿಯಲ್ಲಿ ಉತ್ತಮ ಪಂಚತಾರಾ ಹೋಟೆಲ್ಗಳಾಗಲಿ: ಸಿಎಂ ಸಿದ್ದರಾಮಯ್ಯ
ಇದೂ ಓದಿ: ಆಹಾರ ತಯಾರಕರಿಗೆ ಎಫ್ಎಸ್ಎಸ್ಎಐನಿಂದ ಮತ್ತೊಂದು ಮಹತ್ವದ ಆದೇಶ
ಇದೂ ಓದಿ: ʼಬ್ರಾಹ್ಮಣರ ಕಾಫಿ ಬಾರ್ʼ ನನ್ನ ಬದುಕಿನ ಗತಿ ಬದಲಿಸಿದ ಸ್ಥಳ: ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್



