ಹೋಟೆಲ್ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೋಟೆಲೊಂದರ ಮುಂದೆ ಸುಮಾರು ಐದು ಗಂಟೆಗಳ ಕಾಲ ನಿಂತಿದ್ದ ಐಷಾರಾಮಿ ಕಾರಿನಲ್ಲಿ ಉದ್ಯಮಿಯೊಬ್ಬರ ಶವ ಪತ್ತೆಯಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಿಂದ ಸುಮಾರು 400 ಮೀ. ದೂರದಲ್ಲಿ ಈ ಪ್ರಕರಣ ನಡೆದಿದೆ.
ಕೋರಮಂಗಲದ 8ನೇ ಬ್ಲಾಕ್ನ ʼಸಾಗರ್ ಫಾಸ್ಟ್ಫುಡ್ʼ ಎಂಬ ಹೋಟೆಲ್ ಮುಂಭಾಗ ನಿಂತಿದ್ದ ʼಆಡಿʼ ಕಾರಿನಲ್ಲಿದ್ದ ಉದ್ಯಮಿ ಸಾವಿಗೀಡಾಗಿ ಕೆಲವು ಗಂಟೆಗಳ ಬಳಿಕ ಇದು ಗಮನ ಸೆಳೆದಿದೆ. ಮೃತಪಟ್ಟ ಉದ್ಯಮಿಯನ್ನು ಮೂಲತಃ ಕೊಡಗು ಜಿಲ್ಲೆಯ ವೀರಾಜಪೇಟೆಯ ಸಲೀಂ ಅಕ್ಬರ್ (46) ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಅಕ್ಭರ್, ಭಾನುವಾರ ಬೆಳಗಿನ ಜಾವ ಕಾರು ಚಲಾಯಿಸಿಕೊಂಡು ಕೋರಮಂಗಲಕ್ಕೆ ಬಂದಿದ್ದು, ಕಾರಿನಲ್ಲಿ ಕುಳಿತ ಸ್ಥಿತಿಯಲ್ಲೇ ಸಾವಿಗೀಡಾಗಿದ್ದರು. ಅವರು ಮಲಗಿರಬಹುದು ಎಂದು ಹೋಟೆಲ್ ಸಿಬ್ಬಂದಿ ಹಾಗೂ ಸ್ಥಳೀಯರು ಭಾವಿಸಿದ್ದರು. ಅಲ್ಲಿಂದ ಕಾರು ತೆರವುಗೊಳಿಸುವ ಸಲುವಾಗಿ ಬೆಳಗ್ಗೆ 8 ಗಂಟೆಗೆ ಅವರನ್ನು ಎಬ್ಬಿಸಲು ಕಾರಿನ ಕಿಟಕಿ ಬಡಿದು ಸಪ್ಪಳ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು.
ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನ ಬಾಗಿಲು ತೆಗೆಸಿದಾಗ ಅದರಲ್ಲಿದ್ದ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ. ಮರಣೋತ್ತರ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಈ ಕಾರು ಬೆಳಗಿನ ಜಾವ 2.30ರ ಸುಮಾರಿಗೆ ಹೋಟೆಲ್ ಬಳಿ ಬಂದು ನಿಂತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಸಲೀಂ ಅಕ್ಬರ್ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ ಎಂದಿರುವ ಪೊಲೀಸರು, ಕೊಲೆ ಅಥವಾ ಯಾವುದೇ ಶಂಕಾಸ್ಪದ ಕೃತ್ಯವನ್ನು ಅಲ್ಲಗಳೆದಿದ್ದಾರೆ.
ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..
ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವಿಶ್ಲೇಷಣೆ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಈ ಕುರಿತು ಕೋರಮಂಗಲ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಅಕ್ಬರ್ ಹಲವು ವರ್ಷಗಳಿಂದ ಬೆಂಗಳೂರಿನ ಎಂ.ಜಿ. ರಸ್ತೆ ಸಮೀಪ ವಾಸವಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇದೂ ಓದಿ: ಮಾಜಿ ಸಚಿವ ದಿನೇಶ್ ಗುಂಡೂರಾವ್, ಐಎಎಸ್ ಅಧಿಕಾರಿ ಜಗದೀಶ್ ಅವರಿಂದ ʼಡರ್ಬಿಸ್ ಕ್ಲಬ್ ಸಂಡೇಸ್ʼ ಉದ್ಘಾಟನೆ
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?



