ಹೋಟೆಲ್ ಕನ್ನಡ, ಬೆಂಗಳೂರು: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ತನ್ನ ಸದಸ್ಯರಿಗೆ ಈ ಸಲ 2,500 ರೂ. ಮೊತ್ತದ ಷೇರುಗಳನ್ನು ಉಚಿತವಾಗಿ ನೀಡುವ ಮೂಲಕ ಗಮನ ಸೆಳೆದಿದೆ. ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತದ 60ನೇ ವಾರ್ಷಿಕ ಸಾಮಾನ್ಯ ಸಭೆ ಪ್ರಯುಕ್ತ ಸದಸ್ಯರಿಗೆ ಈ ಕೊಡುಗೆ ನೀಡಲಾಗಿದೆ.
ಬೆಂಗಳೂರಿನ ಬಸವನಗುಡಿ ರಸ್ತೆಯ ಮರಾಠ ಹಾಸ್ಟೆಲ್ ಚೌಲ್ಟ್ರಿಯಲ್ಲಿ ಸೆಪ್ಟೆಂಬರ್ 20ರಂದು ನಡೆದ ಈ ಕಾರ್ಯಕ್ರಮವನ್ನು ಮಾಜಿ ಸಂಸದ-ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. ʼಥಟ್ ಅಂತ ಹೇಳಿʼ ಕಾರ್ಯಕ್ರಮದ ಖ್ಯಾತಿಯ ಡಾ.ನಾ.ಸೋಮೇಶ್ವರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ಪ್ರತಿ ಹತ್ತು ವರ್ಷಗಳಿಗೊಮ್ಮೆ ತನ್ನ ಸದಸ್ಯರಿಗೆ ವಿಶೇಷ ಕೊಡುಗೆ ನೀಡಲಾರಂಭಿಸಿದ್ದು, ಈ ಹಿಂದೆ 50ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರತಿ ಸದಸ್ಯರಿಗೆ ಬೆಳ್ಳಿಯ ಲೋಟ ಕೊಡುಗೆಯಾಗಿ ನೀಡಲಾಗಿತ್ತು. ಈ ಸಲ 60ನೇ ವಾರ್ಷಿಕ ಸಭೆ ಪ್ರಯುಕ್ತ ಬರೋಬ್ಬರಿ 2,500 ರೂ. ಮೊತ್ತದ ಷೇರು ನೀಡಲಾಗಿದೆ.
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ
ಬ್ಯಾಂಕ್‌ನ ಈ ವಾರ್ಷಿಕ ಸಾಮಾನ್ಯ ಸಭೆಗೆ ಕಳೆದ ವರ್ಷಕ್ಕಿಂತ ನೂರು ಮಂದಿ ಅಧಿಕ ಅಂದರೆ ಒಟ್ಟು 5,861 ಸದಸ್ಯರು ಆಗಮಿಸಿದ್ದರು. ಸಭೆ ಬಳಿಕ ಸಂಜೆ 5ಕ್ಕೆ ಯಕ್ಷ ಕಲಾರಂಗ ಹಾಗೂ ಬ್ರಹ್ಮಶ್ರೀ ಕಲಾವೇದಿಕೆ ತಂಡದವರಿಂದ ʼಭೀಷ್ಮ ವಿಜಯʼ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಿ ಪಡಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಪಿ. ಎನ್.ಶ್ರೀಪತಿ ರಾವ್, ಆಡಳಿತ ಮಂಡಳಿ ಸದಸ್ಯರು ಹಾಗೂ ಭಾರಿ ಸಂಖ್ಯೆಯಲ್ಲಿ ಸದಸ್ಯರು ಆಗಮಿಸಿದ್ದರು.

ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್
ಪ್ರತಿಭಾ ಪುರಸ್ಕಾರ: ಬ್ಯಾಂಕ್‌ನ ಸದಸ್ಯರ ಪ್ರತಿಭಾವಂತ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನೂ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಲ ಒಟ್ಟು 105 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗಿದೆ. ʼಥಟ್ ಅಂತ ಹೇಳಿʼ ಕಾರ್ಯಕ್ರಮದ ಖ್ಯಾತಿಯ ಡಾ.ನಾ.ಸೋಮೇಶ್ವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಿದರು.
8000 ಮಂದಿಗೆ ಉಪಾಹಾರ: ವಾರ್ಷಿಕ ಸಾಮಾನ್ಯ ಸಭೆಗೆ ಆಗಮಿಸಿದ ಸದಸ್ಯರು ಸೇರಿದಂತೆ ಒಟ್ಟು 8,000 ಮಂದಿಗೆ ಬ್ಯಾಂಕ್ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ʼಯುಡಿ ರೋಟಿಘರ್ʼ ಅವರಿಗೆ ಕೇಟರಿಂಗ್ ಆರ್ಡರ್ ನೀಡಲಾಗಿತ್ತು.
ಇದೂ ಓದಿ: ಮಾಜಿ ಸಚಿವ ದಿನೇಶ್ ಗುಂಡೂರಾವ್, ಐಎಎಸ್ ಅಧಿಕಾರಿ ಜಗದೀಶ್ ಅವರಿಂದ ʼಡರ್ಬಿಸ್ ಕ್ಲಬ್ ಸಂಡೇಸ್ʼ ಉದ್ಘಾಟನೆ
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಎಫ್‌ಕೆಸಿಸಿಐ ಚುನಾವಣೆಯಲ್ಲಿ ಆತಿಥ್ಯ ಕ್ಷೇತ್ರದ ನಾಲ್ವರು ನಿರ್ದೇಶಕರಾಗಿ ಆಯ್ಕೆ



