ಒಳಗೇನಿದೆ!?

ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಡಾ.ದೀಪಕ್‌ ಶೆಟ್ಟಿ, ಉಪಾಧ್ಯಕ್ಷರಾಗಿ ಉದ್ಯಮಿ ಮಧುಕರ್‌ ಶೆಟ್ಟಿ ಆಯ್ಕೆ

ಬಂಟರ ಸಂಘದ ನೂತನ ಪದಾಧಿಕಾರಿಗಳು

ಹೋಟೆಲ್‌ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ʼಬಂಟರ ಸಂಘʼದ ನೂತನ ಅಧ್ಯಕ್ಷರಾಗಿ ಡಾ.ದೀಪಕ್‌ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಹೋಟೆಲೋದ್ಯಮಿ ಮಧುಕರ್‌ ಎಂ. ಶೆಟ್ಟಿ ಮತ್ತು ಸೌಮ್ಯಪ್ರಿಯಾ ಹೆಗ್ಡೆ ಆಯ್ಕೆ ಆಗಿದ್ದಾರೆ.

ಬೆಂಗಳೂರು ಬಂಟರ ಸಂಘದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ. ಬಂಟರ ಸಂಘದ ಆವರಣ ಹಾಗೂ ಮುಲ್ಕಿ ಸುಂದರರಾಮ್ ಶೆಟ್ಟಿ ಮೆಮೋರಿಯಲ್ ಎಂ.ಎಸ್.ಆರ್.ಎಸ್. ನಗರ ಟ್ರಸ್ಟ್ ಹಾಲ್‌ನಲ್ಲಿ ಏಕಕಾಲದಲ್ಲಿ ಈ ಚುನಾವಣೆ ನಡೆಸಲಾಯಿತು.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಸಂಘದ ನೂತನ ಗೌರವ ಕಾರ್ಯದರ್ಶಿ ಆಗಿ ಅಮರನಾಥ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸುರೇಖಾ ಶೆಟ್ಟಿ, ಖಜಾಂಚಿಯಾಗಿ ರಮಿತ್ ಬಿ. ಶೆಟ್ಟಿ ಅವರು ಆಯ್ಕೆ ಆಗಿರುತ್ತಾರೆ. ಡಾ.ದೀಪಕ್‌ ಶೆಟ್ಟಿ ಅವರು ʼಕುಂದಾಪ್ರ ಕನ್ನಡ ಪ್ರತಿಷ್ಠಾನʼದ ಅಧ್ಯಕ್ಷರಾಗಿ ಮತ್ತು ಮಧುಕರ್‌ ಶೆಟ್ಟಿ ಅವರು ʼಕರ್ನಾಟಕ ರಾಜ್ಯ ಹೋಟೆಲುಗಳ ಸಂಘʼದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷ ಡಾ.ದೀಪಕ್‌ ಶೆಟ್ಟಿ.

ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅನಿತಾ ಪಿ. ಭಂಡಾರಿ, ಅರುಣ್ ಕುಮಾರ್ ಶೆಟ್ಟಿ ಹೆಚ್., ಸಿಎ ಚಂದ್ರಶೇಖರ್ ಶೆಟ್ಟಿ, ಹೀರಾ ಅನೂಪ್ ಹೆಗ್ಡೆ, ಕೀರ್ತನ್ ಶೆಟ್ಟಿ, ಸಿಎ ಕಿಶೋರ್ ಶೆಟ್ಟಿ, ಮಾಲತಿ ಜೆ. ಶೆಟ್ಟಿ, ನಿತ್ಯರಂಜನ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಎಸ್., ಪ್ರತಾಪ್ ಶೆಟ್ಟಿ, ರಾಮ್‌ದಾಸ್ ಶೆಟ್ಟಿ ಕೆ.ಎಸ್., ಶಕುಂತಲ ಶೆಟ್ಟಿ, ಸುರೇಂದ್ರ ಶೆಟ್ಟಿ ಹೆಚ್. ಮತ್ತು  ಉಮೇಶ್ ಪೂಂಜ ಡಿ. ಆಯ್ಕೆ ಆಗಿರುತ್ತಾರೆ.

ಇದೂ ಓದಿ: ಉದ್ಯಮಿ ಪ್ರಕಾಶ್‌ ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌

ಸಂಘ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ವಿವಿಧ ಯೋಜನೆಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು ಸಂಘ ತಿಳಿಸಿದೆ.

ಬೆಂಗಳೂರು ಬಂಟರ ಸಂಘದ 2026-29ನೇ ಸಾಲಿನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳು.

ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಅಮೂಲ್ಯ ಸಹಕಾರ ಹಾಗೂ ಬೆಂಬಲ ನೀಡಿದ ಎಲ್ಲ ಸದಸ್ಯರಿಗೆ ಸಮಿತಿಯು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದೆ.  ನೂತನ ಅವಧಿಯಲ್ಲಿಯೂ ಸದಸ್ಯರು ಇದೇ ರೀತಿಯ ಸಹಕಾರ ಹಾಗೂ ಬೆಂಬಲವನ್ನು ಮುಂದುವರಿಸುವಂತೆ ಮನವಿ ಸಂಘದ ಗೌರವ ಕಾರ್ಯದರ್ಶಿ ಅಮರನಾಥ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

ಇದೂ ಓದಿ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಗೌರವಾಧ್ಯಕ್ಷರಾಗಿ ಎಂ. ರಾಜೇಂದ್ರ ಪುನರಾಯ್ಕೆ

ಇದೂ ಓದಿ: ಬೇಕರಿ-ಕಾಂಡಿಮೆಂಟ್ಸ್‌ ಮಾಲೀಕರ ಪರ ಹಮ್ಮಿಕೊಂಡಿರುವ ಬೃಹತ್‌ ಸಭೆಗೆ ಬಂಟರ ಸಂಘದ ಬೆಂಬಲ

ಇದೂ ಓದಿ: ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕರಾಗಿ ಬೇಳೂರು ರಾಘವೇಂದ್ರ ಶೆಟ್ಟಿ ನೇಮಕ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ