ಒಳಗೇನಿದೆ!?

ವಾಣಿಜ್ಯ ಬಳಕೆ ಎಲ್‌ಪಿಜಿ ಬೆಲೆ ಸಿಲಿಂಡರ್‌ಗೆ 67 ರೂಪಾಯಿ ಏರಿಕೆ, ಗೃಹಬಳಕೆಯ ದರದಲ್ಲಿ ಯಥಾಸ್ಥಿತಿ

ಹೋಟೆಲ್‌ ಕನ್ನಡ, ಬೆಂಗಳೂರು:  ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬೆಲೆ ಗುರುವಾರದಿಂದ 19 ಕೆ.ಜಿ.ಗೆ 67 ರೂಪಾಯಿ ಏರಿಕೆ ಆಗಿದೆ. ಅಂತಾರಾಷ್ಟ್ರೀಯ ದರ ಹಾಗೂ ರೂಪಾಯಿ-ಡಾಲರ್ ವಿನಿಮಯ ದರದ ಬದಲಾವಣೆಗೆ ಅನುಗುಣವಾಗಿ ತೈಲ ಕಂಪನಿಗಳು ಬೆಲೆ ಪರಿಷ್ಕರಿಸಿವೆ.

ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…

ಈ ಪರಿಷ್ಕರಣೆಯೊಂದಿಗೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ ಈ ಹಿಂದೆ 2,831 ರೂಪಾಯಿ ಇದ್ದಿದ್ದು ಈಗ 2,898 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ 67 ರೂಪಾಯಿ ಏರಿಕೆಯಾಗಿದ್ದರೆ, ದೆಹಲಿಯಲ್ಲಿ ಇದು 62.50 ರೂಪಾಯಿಯಷ್ಟು ಏರಿಕೆಯಾಗಿದೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಗೃಹಬಳಕೆ ಎಲ್‌ಪಿಜಿ ಬೆಲೆ 14.2 ಕೆ.ಜಿ. ಸಿಲಿಂಡರ್‌ಗೆ 942 ರೂ. ಇದ್ದು, ಯಾವುದೇ ಬದಲಾವಣೆ ಆಗದೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಹಾಗೆಯೇ ಪೆಟ್ರೋಲ್-ಡೀಸೆಲ್ ದರದಲ್ಲೂ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ವಿಮಾನ ಇಂಧನ ಎಟಿಎಫ್ ಬೆಲೆ ಲೀಟರ್‌ಗೆ 121 ರೂ.ನಿಂದ 137 ರೂ.ಗೆ, ಅಂದರೆ 16 ರೂ. ಏರಿಕೆಯಾಗಿದೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಇದೂ ಓದಿ: ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಡಾ.ದೀಪಕ್‌ ಶೆಟ್ಟಿ, ಉಪಾಧ್ಯಕ್ಷರಾಗಿ ಉದ್ಯಮಿ ಮಧುಕರ್‌ ಶೆಟ್ಟಿ ಆಯ್ಕೆ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ