ಒಳಗೇನಿದೆ!?

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷರಾಗಿ ಮಧುಕರ್‌ ಶೆಟ್ಟಿ ಆಯ್ಕೆ

ಕೆಎಸ್‌ಎಚ್‌ಎ ನೂತನ ಅಧ್ಯಕ್ಷ ಮಧುಕರ್‌ ಶೆಟ್ಟಿ

ಹೋಟೆಲ್‌ ಕನ್ನಡ, ಬೆಂಗಳೂರು: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ(ಕೆಎಸ್‌ಎಚ್‌ಎ)ದ 2026-2029ನೇ ಸಾಲಿನ ಪದಾಧಿಕಾರಿಗಳ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಮಧುಕರ್‌ ಎಂ. ಶೆಟ್ಟಿ ಆಯ್ಕೆಆಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷರಾದ ಜಿ.ಕೆ.ಶೆಟ್ಟಿ ಗೌರವ ಅಧ್ಯಕ್ಷರಾಗಿ ಹಾಗೂ ಗೌರವ ಕಾರ್ಯದರ್ಶಿ ಆಗಿ ವೀರೇಂದ್ರ ಎನ್.‌ ಕಾಮತ್‌ ಆಯ್ಕೆ ಆಗಿದ್ದಾರೆ. ಖಜಾಂಚಿಯಾಗಿ ರಾಮಮೂರ್ತಿ, ಜಂಟಿ ಕಾರ್ಯದರ್ಶಿ ಆಗಿ ಶೇಖರ್‌ ನಾಯ್ಡು ಆಯ್ಕೆ ಆಗಿದ್ದಾರೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಉದ್ಯಮಿಗಳಾದ ಪಿ.ಸಿ. ರಾವ್‌, ಎಂ.ವಿ. ರಾಘವೇಂದ್ರ ರಾವ್‌, ನಾರಾಯಣ ಗೌಡ, ಎಚ್‌.ಎನ್. ಉಮೇಶ್‌, ಸತ್ಯನಾಥ ಶೆಟ್ಟಿ ಹಾಗೂ ಜಿ.ಎ. ದೀಪಾನಂದ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಇದೂ ಓದಿ: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಹೋಟೆಲ್ ವಲಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದ್ದ ಸರ್ಕಾರದ ವಿವಿಧ ಅವೈಜ್ಞಾನಿಕ ತೆರಿಗೆಗಳು, ನೀತಿಗಳು, ಕಾರ್ಮಿಕ ಕಾನೂನುಗಳು, ಕನಿಷ್ಠ ವೇತನ ನೀತಿ, ಕೆಲಸದ ಅವಧಿ ಮುಂತಾದವುಗಳ ವಿರುದ್ಧ ಹೋರಾಡಲು ಹಾಗೂ ಅಸಂಘಟಿತ ಹೋಟೆಲ್ ಮತ್ತು ರೆಸ್ಟೋರೆಂಟ್ ವಲಯವನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ 1954ರಲ್ಲಿ ಈ ಸಂಘ ಸ್ಥಾಪಿಸಲಾಯಿತು.

ಇದೂ ಓದಿ: ಎಫ್‌ಕೆಸಿಸಿಐ ಚುನಾವಣೆಯಲ್ಲಿ ಆತಿಥ್ಯ ಕ್ಷೇತ್ರದ ನಾಲ್ವರು ನಿರ್ದೇಶಕರಾಗಿ ಆಯ್ಕೆ

ಇದಕ್ಕೂ ಮುನ್ನ ʼಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘʼ ಎಂದು ಕರೆಯಲಾಗುತ್ತಿದ್ದ ಈ ಸಂಘವನ್ನು, ನಂತರ ʼಕರ್ನಾಟಕ ರಾಜ್ಯ ಹೋಟೆಲುಗಳ ಸಂಘʼ ಎಂದು ಬದಲಿಸಲಾಯಿತು.

ಕೆಎಸ್‌ಎಚ್‌ಎ ನೂತನ ಪದಾಧಿಕಾರಿಗಳ ವಿವರ
(ಚಿತ್ರ-ವಿವರ ಕೃಪೆ: ಅತಿಥಿ ದೇವೋಭವ)

ಇದೂ ಓದಿ: ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಡಾ.ದೀಪಕ್‌ ಶೆಟ್ಟಿ, ಉಪಾಧ್ಯಕ್ಷರಾಗಿ ಉದ್ಯಮಿ ಮಧುಕರ್‌ ಶೆಟ್ಟಿ ಆಯ್ಕೆ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ