ಒಳಗೇನಿದೆ!?

ಕಾವೇರಿ ಕಾರ್ಸ್‌@34: ಒಂದು ಲ್ಯಾಂಡ್‌ಲೈನ್‌ನಿಂದ ಆರಂಭ, ಇಂದು ಪ್ರತಿಷ್ಠಿತ ಕಾರ್ಪೋರೇಟ್‌ ಸಾರಿಗೆ ಸೇವಾ ಸಂಸ್ಥೆ

ಹೋಟೆಲ್‌ ಕನ್ನಡ, ಬೆಂಗಳೂರು: ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ವಾಹನ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಜನಜನಿತವಾಗಿರುವ ಹೆಸರೆಂದರೆ ‘ಕಾವೇರಿ ಕಾರ್ಸ್’. ರಾಜಧಾನಿ ಬೆಂಗಳೂರಿನ ಅತ್ಯಂತ ಮುಂಚೂಣಿಯ ಕಾರ್ಪೋರೇಟ್‌ ಸಾರಿಗೆ ಸೇವಾ ಸಂಸ್ಥೆಯಾಗಿಯೂ ʼಕಾವೇರಿ ಕಾರ್ಸ್‌ʼ ಜನಪ್ರಿಯ ಹೆಸರು.

ಲಯನ್‌ ಕಯ್ಯಾರು ರಾಧಾಕೃಷ್ಣ ಹೊಳ್ಳ ಅವರ ಮಾಲೀಕತ್ವದ ಈ ಸಂಸ್ಥೆ ಇದೀಗ 34ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಮೂರು ದಶಕಗಳಿಗೂ ಅಧಿಕ ಕಾಲದಿಂದ ಪ್ರವಾಸಿ ಹಾಗೂ ಕಾರ್ಪೋರೇಟ್‌ ಸಾರಿಗೆ ಸೇವೆಯಲ್ಲಿರುವ ‌ʼಕಾವೇರಿ ಕಾರ್ಸ್ʼ ಈಗಲೂ ಅದೇ ಸೇವೆ-ಜನಪ್ರಿಯತೆಯನ್ನು ಉಳಿಸಿಕೊಂಡಿದೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಬೆಂಗಳೂರಿನ ಸಂಪಂಗಿರಾಮನಗರದ ಮನೆಯಲ್ಲಿ 1993ರಲ್ಲಿ ಒಂದು ಲ್ಯಾಂಡ್‌ಲೈನ್ ದೂರವಾಣಿಯಿಂದ ಆರಂಭವಾದ ʼಕಾವೇರಿ ಕಾರ್ಸ್ʼ ಸಂಸ್ಥೆ ಇಂದು ಐವತ್ತಕ್ಕೂ ಹೆಚ್ಚು ಸ್ವಂತ ವಾಹನಗಳನ್ನು ಹೊಂದಿರುವ ಪ್ರತಿಷ್ಠಿತ ಕಾರ್ಪೊರೇಟ್ ಸಾರಿಗೆ ಸೇವಾ ಸಂಸ್ಥೆಯಾಗಿ ಬೆಳೆದಿದೆ ಎಂದು ಸಂಸ್ಥಾಪಕ ಲಯನ್ ಕೆ. ರಾಧಾಕೃಷ್ಣ ಹೊಳ್ಳ  ತಿಳಿಸಿದ್ದಾರೆ.

ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳಿಗೆ ನುರಿತ ಚಾಲಕರನ್ನು ಒಳಗೊಂಡು  ವಾಹನ ಸೇವೆ ಒದಗಿಸುತ್ತಿರುವ ʼಕಾವೇರಿ ಕಾರ್ಸ್‌ʼನ ಮೊದಲ ಕಾರ್ಪೊರೇಟ್ ಗ್ರಾಹಕ ʼನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿʼ ಆಗಿತ್ತು. ನಂತರ ಉದ್ಯಮದಲ್ಲಿ ದಾಪುಗಾಲು ಇಡುತ್ತಲೇ ಹೋದ ಸಂಸ್ಥೆ ಮೂಲಸೌಕರ್ಯ, ಐಟಿ, ಆರೋಗ್ಯ, ಫ್ಯಾಷನ್, ಉತ್ಪಾದನೆ ಹಾಗೂ ಚಿಲ್ಲರೆ ವ್ಯಾಪಾರ ಕ್ಷೇತ್ರದ ಅನೇಕ ಕಂಪನಿಗಳಿಗೆ ಸೇವೆ ನೀಡಿದೆ.

ಐಷಾರಾಮಿ ಕಾರುಗಳು

ಸಂಸ್ಥೆಯ ವಾಹನ ಬಳಗದಲ್ಲಿ ಮರ್ಸಿಡಿಸ್-ಬೆನ್ಜ್ ಎಸ್‌-ಕ್ಲಾಸ್, ಇ-ಕ್ಲಾಸ್, ಬಿಎಂಡಬ್ಲ್ಯು 7 ಸೀರಿಸ್‌ ಸೇರಿದಂತೆ ಐಷಾರಾಮಿ ಸೆಡಾನ್‌ಗಳು, ಮರ್ಸಿಡೆಸ್‌ ಬೆನ್ಜ್‌ ಜಿಎಲ್‌ಎಸ್‌, ಜಿಎಲ್‌ಸಿ, ಟೊಯೊಟ ಫಾರ್ಚೂನರ್‌, ಇನೋವಾ ಹೈಕ್ರಾಸ್‌, ಇನ್ನೋವಾ ಕ್ರಿಸ್ಟ್‌ ಮುಂತಾದ ಎಸ್‌ಯುವಿ ಹಾಗೂ ಪ್ರೀಮಿಯಂ ವಾಹನಗಳಿವೆ. ಜೊತೆಗೆ ಟೊಯೊಟ ಕಮ್ಯೂಟರ್‌, ಕಿಯಾ ಕಾರ್ನಿವಲ್‌ ಮೂಲಕ ಗುಂಪು ಪ್ರಯಾಣ ಸೇವೆಯೂ ಒದಗಿಸಲಾಗುತ್ತಿದೆ.

ಎಕ್ಸಿಕ್ಯೂಟಿವ್ಸ್‌, ಮೀಟಿಂಗ್ಸ್‌ ಮತ್ತು ಗೆಸ್ಟ್ಸ್‌ ಮುಂತಾದ ಕಾರ್ಪೊರೇಟ್  ಸೇವೆಗಳು, ವಿಮಾನ ನಿಲ್ದಾಣ ಐಷಾರಾಮಿ ಹೋಟೆಲ್‌ಗಳ ಮಧ್ಯೆ  ವಿಐಪಿ ಅತಿಥಿಗಳ ಸಂಚಾರ, ಮದುವೆ ಹಾಗೂ ವಿಶೇಷ ಕಾರ್ಯಕ್ರಮಗಳು, ನಗರ ಮತ್ತು ಹೊರನಾಡು ಪ್ರವಾಸಗಳು, ದೀರ್ಘಾವಧಿ ವಾಹನ ಬಾಡಿಗೆ ಸೇರಿದಂತೆ ವಿವಿಧ ಸೇವೆಗಳನ್ನು ಕಾವೇರಿ ಕಾರ್ಸ್ ನೀಡುತ್ತಿದೆ.

ದೇಶಾದ್ಯಂತ 180ಕ್ಕೂ ಹೆಚ್ಚು ಟ್ರಾವೆಲ್ ಆಪರೇಟರ್‌ಗಳೊಂದಿಗೆ ಸಹಭಾಗಿತ್ವ ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಯೂ ಕಾವೇರಿ ಕಾರ್ಸ್‌ಗಿದೆ. ಅಲ್ಲದೆ ಕಳೆದ 25 ವರ್ಷಗಳಿಂದ ಏರ್‌ಶೋ ಹಾಗೂ ಅಂತಾರಾಷ್ಟ್ರೀಯ ವಿಮಾನ ತಯಾರಕ ಸಂಸ್ಥೆಗಳಿಗೆ ಸಂಬಂಧಿಸಿದ ಸಾರಿಗೆ ಸೇವೆಗಳಲ್ಲಿಯೂ ಕಾವೇರಿ ಕಾರ್ಸ್‌ ತೊಡಗಿಸಿಕೊಂಡಿದೆ. ಫ್ರಾನ್ಸ್‌ನ ದಸಾಲ್ಟ್‌ ಏವಿಯೇಷನ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗ್ರಾಹಕರಿಗೆ ಸೇವೆ ನೀಡಿರುವುದಾಗಿ ಸಂಸ್ಥೆ ತಿಳಿಸಿದೆ.

ಪ್ರಶಸ್ತಿ ಪುರಸ್ಕಾರ

ಕಾವೇರಿ ಕಾರ್ಸ್ ಸಂಸ್ಥೆಗೆ ಹಲವು ಪ್ರಶಸ್ತಿಗಳು ಬಂದಿದ್ದು, ಅದರ ಸಂಸ್ಥಾಪಕರಾದ ರಾಧಾಕೃಷ್ಣ ಹೊಳ್ಳ ಅವರು ಕೂಡ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.  ಆ ಪೈಕಿ ನ್ಯೂಸ್‌ಪೇಪರ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಗೌರವ, ಶ್ರೀ ನರಸಿಂಹ ಪ್ರಶಸ್ತಿ, ಕರಾವಳಿಯ ಉಜ್ವಲ ಉದ್ಯಮಿ ಪ್ರಶಸ್ತಿ, ಐಕಾನ್ಸ್‌ ಆಫ್‌ ಇಂಡಿಯನ್‌ ಬಿಜಿನೆಸ್‌ ಗೌರವ, ಐಕಾನ್ಸ್‌ ಆಫ್‌ ಟ್ರಾನ್ಸ್‌ಪೋರ್ಟ್‌ ಇಂಡಸ್ಟ್ರಿ ಗೌರವ,  ಬಿಜಿನೆಸ್‌ ಎಕ್ಸೆಲೆನ್ಸ್‌ ಅವಾರ್ಡ್‌, ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಸ್ವೀಕರಿಸಿದ ಗ್ಲೋಬಲ್‌ ಅಚೀವರ್ಸ್‌ ಅವಾರ್ಡ್‌  ಪ್ರಮುಖವಾದವು.

ಇದೂ ಓದಿ: ಎಫ್‌ಕೆಸಿಸಿಐ ಚುನಾವಣೆಯಲ್ಲಿ ಆತಿಥ್ಯ ಕ್ಷೇತ್ರದ ನಾಲ್ವರು ನಿರ್ದೇಶಕರಾಗಿ ಆಯ್ಕೆ

ನಮ್ಮ ಸಿಬ್ಬಂದಿ, ಚಾಲಕರು, ಗ್ರಾಹಕರು ಮತ್ತು ಟ್ರಾವೆಲ್ ಪಾಲುದಾರರ ವಿಶ್ವಾಸವೇ ಸಂಸ್ಥೆಯ ಬೆಳವಣಿಗೆಗೆ ಕಾರಣ. ಮುಂದೆಯೂ ಇದೇ ವಿಶ್ವಾಸ ಉಳಿಸಿಕೊಂಡು ಗುಣಮಟ್ಟದ ಸೇವೆ ನೀಡುತ್ತೇವೆ.
| ಕೆ. ರಾಧಾಕೃಷ್ಣ ಹೊಳ್ಳ, ಸಂಸ್ಥಾಪಕರು, ಕಾವೇರಿ ಕಾರ್ಸ್‌

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಪುತ್ರ ಶ್ರವಣ್‌ ಹಾಗೂ ಕಾವೇರಿ ಕಾರ್ಸ್‌ ಸಿಬ್ಬಂದಿ ಜೊತೆ ಸಂಸ್ಥಾಪಕ ಲಯನ್‌ ಕೆ. ರಾಧಾಕೃಷ್ಣ ಹೊಳ್ಳ.

ʼಕಾವೇರಿ ಕಾರ್ಸ್‌ʼ ಮೂಲಕ ಉದ್ಯಮದಲ್ಲಿ ಯಶಸ್ವಿಯಾಗಿರುವ ಲಯನ್ ಕೆ. ರಾಧಾಕೃಷ್ಣ ಹೊಳ್ಳ ಅವರು ತಮ್ಮ ಉದ್ಯಮ ಸಂಬಂಧಿತ ಸಂಘ-ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದಾರೆ.  ಪ್ರಸ್ತುತ ಅವರು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (ಕೆಎಸ್‌ಟಿಒಎ) ಅಧ್ಯಕ್ಷ, ಎಫ್‌ಕೆಸಿಸಿಐ ವ್ಯವಸ್ಥಾಪನಾ ಸಮಿತಿ ಸದಸ್ಯ, ಕರ್ನಾಟಕ ಟೂರಿಸಂ ಸೊಸೈಟಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಸದಸ್ಯ, ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.

ಇದೂ ಓದಿ: ಹೋಟೆಲ್‌ ಎದುರು ಗಂಟೆಗಟ್ಟಲೆ ನಿಂತಿದ್ದ ಐಷಾರಾಮಿ ಕಾರಲ್ಲಿತ್ತು ಉದ್ಯಮಿಯ ಶವ!

ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..

ಇದೂ ಓದಿ: ಪ್ರವಾಸೋದ್ಯಮ ಸೇವೆಗಳನ್ನು ಒಂದೇ ವೇದಿಕೆಯಡಿ ತರಲು ‘ಡಿಜಿಟಲ್ ಸ್ಟ್ಯಾಕ್’ ಯೋಜನೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ