ಹೋಟೆಲ್ ಕನ್ನಡ, ಬೆಂಗಳೂರು: ಆನ್‌ಲೈನ್ ಫುಡ್ ಆರ್ಡರ್ ವೇದಿಕೆಗಳಾದ ಸ್ವಿಗ್ಗಿ-ಜೊಮ್ಯಾಟೊಗಳಿಂದ ತೀವ್ರ ತೊಂದರೆಗೆ ಒಳಗಾಗಿ ಇತ್ತೀಚೆಗೆ ಅವುಗಳಿಗೆ ಬಹಿಷ್ಕಾರ ಹಾಕುವ ಮಟ್ಟಿಗೆ ಸಿಡಿದೆದ್ದಿದ್ದ ಹೋಟೆಲಿಗರಿಗೆ ಅವುಗಳಿಂದ ಇದೀಗ ಇನ್ನೊಂದು ಆತಂಕ ಎದುರಾಗಿದೆ.
ಏಕೆಂದರೆ ಆದಾಯ ತೆರಿಗೆ ಇಲಾಖೆಯು ಸ್ವಿಗ್ಗಿ-ಜೊಮ್ಯಾಟೊ ದತ್ತಾಂಶಗಳನ್ನು ಬಳಸಿಕೊಂಡು ಹೋಟೆಲಿಗರ ಭಾರಿ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದೆ. ಇದರಿಂದಾಗಿ ಹೋಟೆಲಿಗರ ಹಣಕಾಸು ಗುಟ್ಟು, ಸ್ವಿಗ್ಗಿ-ಜೊಮ್ಯಾಟೊ ಕೈಯೊಳಗಿನ ಜುಟ್ಟು ಎಂಬಂತಾಗಿದೆ.
ಇದೂ ಓದಿ: ಆನ್‌ಲೈನ್ ಕಂಪನಿ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು: ಜಂಟಿ ಹೋರಾಟಕ್ಕೆ ಕರೆ
ಅಂದರೆ, ಆದಾಯ ತೆರಿಗೆ ಇಲಾಖೆಯು ರೆಸ್ಟೋರೆಂಟ್‌ಗಳಿಂದ ಭಾರಿ ಪ್ರಮಾಣದ ತೆರಿಗೆ ವಂಚನೆ ಪತ್ತೆಹಚ್ಚಿದ್ದು, ಅದರ ಮೊತ್ತ 25,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಸುಮಾರು 8,000 ರೆಸ್ಟೋರೆಂಟ್‌ಗಳು ತಮ್ಮ ಹೆಸರಿನಲ್ಲಿ ಟಿಡಿಎಸ್ (TDS) ಕಡಿತಗೊಂಡಿದ್ದರೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಇದರಿಂದಲೇ ಸುಮಾರು 7,500 ಕೋಟಿ ರೂ. ವಂಚನೆಯಾಗಿದೆ ಎಂದು ಅಂದಾಜಿಸಲಾಗಿದೆ.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
2021-22ರಿಂದ 2024-25ರವರೆಗಿನ ನಾಲ್ಕು ವರ್ಷಗಳ ಸ್ವಿಗ್ಗಿ (Swiggy) ಮತ್ತು ಜೊಮ್ಯಾಟೊ (Zomato) ದತ್ತಾಂಶಗಳ ವಿಶ್ಲೇಷಣೆಯಿಂದಾಗಿ ಈ ವಂಚನೆ ಪತ್ತೆಯಾಗಿದೆ.
ಪತ್ತೆಯಾದ ಪ್ರಮುಖ ಅಂಶಗಳು
- 2024-25ರ ಆರ್ಥಿಕ ವರ್ಷದಲ್ಲಿಯೇ ಈ ರೆಸ್ಟೋರೆಂಟ್‌ಗಳು ಸುಮಾರು 2,700 ಕೋಟಿ ರೂ. ಆದಾಯ ಗಳಿಸಿದ್ದು, ಅದರಲ್ಲಿ ಸುಮಾರು 25 ಕೋಟಿ ರೂಪಾಯಿಗಳಷ್ಟು ತೆರಿಗೆ ಕಡಿತಗೊಳಿಸಲಾಗಿದೆ.
- ಆಹಾರ ವಿತರಣಾ ಆ್ಯಪ್‌ಗಳ ಮೂಲಕ ಆರ್ಡರ್ ಮಾಡಿದಾಗ ಬಿಲ್ ಮೊತ್ತದ ಶೇ. 0.1ರಷ್ಟು (ಹಿಂದೆ ಇದು ಶೇ. 1ರಷ್ಟಿತ್ತು) ಟಿಡಿಎಸ್ ಆಗಿ ಕಡಿತಗೊಳ್ಳುತ್ತದೆ.
ಇದೂ ಓದಿ: ಹೋಟೆಲ್ ಉದ್ಯಮಿಗಳಿಗೆ ಸ್ಪಂದಿಸಲು ಮೂರು ಸಹಾಯ ಕೇಂದ್ರ ತೆರೆದ ಸ್ವಿಗ್ಗಿ; ಇಲ್ಲಿದೆ ವಿವರ..
- ಡೈನ್-ಇನ್ (ರೆಸ್ಟೋರೆಂಟ್‌ಗೆ ಭೇಟಿ ನೀಡಿ ಊಟ ಮಾಡುವ) ಗ್ರಾಹಕರಿಗೆ ಟಿಡಿಎಸ್ ಅನ್ವಯಿಸುವುದಿಲ್ಲ. ಇದು ಸಾಮಾನ್ಯವಾಗಿ ಫುಡ್ ಡೆಲಿವರಿಗಿಂತ 3 ರಿಂದ 4 ಪಟ್ಟು ಹೆಚ್ಚು ಆದಾಯ ತರುತ್ತದೆ. ಹೀಗಾಗಿ, ವಾಸ್ತವ ಆದಾಯವು ಟಿಡಿಎಸ್ ಮೂಲಕ ತೋರಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚಿರುತ್ತದೆ.
- 2021-22ರಿಂದ ಆರಂಭಗೊಂಡು ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರವು ಟಿಡಿಎಸ್ ರೂಪದಲ್ಲಿ ಸುಮಾರು 75 ಕೋಟಿ ರೂ. ಸಂಗ್ರಹಿಸಿದೆ ಮತ್ತು ಈ ಅವಧಿಯಲ್ಲಿ ಇಂತಹ ರೆಸ್ಟೋರೆಂಟ್‌ಗಳ ಸಂಖ್ಯೆ ಶೇ. 65ರಷ್ಟು ಹೆಚ್ಚಾಗಿದೆ.
ಆದಾಯ ಮರೆಮಾಚಲು ನಾನಾ ಕಸರತ್ತು
ಆದಾಯವನ್ನು ಮರೆಮಾಚುವವರನ್ನು ಪತ್ತೆಹಚ್ಚಲು ಇಲಾಖೆಯು ‘ನಡ್ಜ್ ಕ್ಯಾಂಪೇನ್’ (nudge campaign) ಮೂಲಕ ಎಚ್ಚರಿಕೆ ನೀಡಿ ತೆರಿಗೆ ಪಾವತಿಸುವಂತೆ ಸೂಚಿಸುತ್ತಿದೆ. ಕಳೆದ ವರ್ಷ ನಡೆಸಿದ 1.8 ಲಕ್ಷ ರೆಸ್ಟೋರೆಂಟ್‌ಗಳ ಸಮೀಕ್ಷೆಯಲ್ಲಿ ಸರಾಸರಿ ಶೇ. 30-35ರಷ್ಟು ಆದಾಯ ಕಡಿಮೆ ತೋರಿಸಿರುವುದು ಕಂಡುಬಂದಿದೆ. ತೆರಿಗೆ ಅಧಿಕಾರಿಗಳು ಸುಮಾರು 70 ಕಡೆ ಸಮೀಕ್ಷೆ ನಡೆಸಿದ್ದು, 60,000ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿಗೆ ಬಾಕಿ ತೆರಿಗೆ ಪಾವತಿಸುವಂತೆ ಪತ್ರ ಬರೆದಿದ್ದಾರೆ.
ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..
ಕ್ಲೌಡ್ ಆಧಾರಿತ ಬಿಲ್ಲಿಂಗ್ ವ್ಯವಸ್ಥೆಗಳಲ್ಲಿ ಬಿಲ್‌ಗಳು ಕಣ್ಮರೆಯಾಗುವ ಮೂಲಕ ಸುಮಾರು 70,000 ಕೋಟಿ ರೂ. ಆದಾಯವನ್ನು ಕಡಿಮೆ ತೋರಿಸಲಾಗಿದೆ ಎಂದು ಮಾರ್ಚ್ 9ರಂದು ಟೈಮ್ಸ್ ಆಫ್ ಇಂಡಿಯಾ (TOI) ವರದಿ ಮಾಡಿತ್ತು. ಅಲ್ಲದೆ, ಆದಾಯ ಮರೆಮಾಚಲು ನಗದು ವಹಿವಾಟಿನ ಜೊತೆಗೆ ವೇಟರ್‌ಗಳು ಮತ್ತು ಕಾರ್ಮಿಕರ ಖಾತೆಗಳ ಮೂಲಕವೂ ಹಣ ಪಾವತಿಸಿಕೊಳ್ಳಲಾಗಿದೆ.
ಈಗ ತೆರಿಗೆ ಅಧಿಕಾರಿಗಳು ಪ್ರಮುಖ ನಗರಗಳಲ್ಲಿ 2 ರಿಂದ 5 ಕೋಟಿ ರೂ. ಆದಾಯ ಹೊಂದಿರುವ ರೆಸ್ಟೋರೆಂಟ್‌ಗಳನ್ನು ಗುರುತಿಸುತ್ತಿದ್ದು, ಮೆಟ್ರೋ ನಗರಗಳಲ್ಲಿ ಈ ಸಂಖ್ಯೆ ಇನ್ನಷ್ಟು ದೊಡ್ಡದಾಗಿದೆ.
ಇದೂ ಓದಿ: ಮಾಜಿ ಸಚಿವ ದಿನೇಶ್ ಗುಂಡೂರಾವ್, ಐಎಎಸ್ ಅಧಿಕಾರಿ ಜಗದೀಶ್ ಅವರಿಂದ ʼಡರ್ಬಿಸ್ ಕ್ಲಬ್ ಸಂಡೇಸ್ʼ ಉದ್ಘಾಟನೆ
ಇದೂ ಓದಿ: ಕಾವೇರಿ ಕಾರ್ಸ್@34: ಒಂದು ಲ್ಯಾಂಡ್‌ಲೈನ್‌ನಿಂದ ಆರಂಭ, ಇಂದು ಪ್ರತಿಷ್ಠಿತ ಕಾರ್ಪೋರೇಟ್ ಸಾರಿಗೆ ಸೇವಾ ಸಂಸ್ಥೆ
ಇದೂ ಓದಿ: ಬಿಎಚ್‌ಎ ಆಯೋಜಿಸಿದ್ದ FoSTaC ಕಾರ್ಯಾಗಾರದಲ್ಲಿ ನೂರು ಮಂದಿ ಭಾಗಿ



