ಒಳಗೇನಿದೆ!?

ಶಿಕ್ಷಕರ ಕ್ಷೇತ್ರದ ಚುನಾವಣೆ: ಡ್ರೈ ಡೇ ರದ್ದುಪಡಿಸಲು ಸಿಎಂಗೆ ಬೆಂಗಳೂರು ಹೋಟೆಲುಗಳ ಸಂಘದ ಮನವಿ

ಹೋಟೆಲ್‌ ಕನ್ನಡ, ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ‘ಡ್ರೈ ಡೇ’ (ಮದ್ಯ ಮಾರಾಟ ನಿಷೇಧ) ಘೋಷಿಸಿರುವುದಕ್ಕೆ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್‌ಎ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಬೆಂಗಳೂರು ಹೋಟೆಲುಗಳ ಸಂಘದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಲಾಗಿದ್ದು, ಈ ಮದ್ಯ ಮಾರಾಟ ನಿಷೇಧದಿಂದ ಆತಿಥ್ಯ ಉದ್ಯಮಕ್ಕೆ ಭಾರಿ ಆರ್ಥಿಕ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಪತ್ರದಲ್ಲಿರುವ ಪ್ರಮುಖ ವಿವರ
  • ದಿನಾಂಕಗಳ ವಿವರ: ಚುನಾವಣೆ ಅಂಗವಾಗಿ ಅಕ್ಟೋಬರ್ 21ರ ಸಂಜೆ 4:00 ಗಂಟೆಯಿಂದ ಅಕ್ಟೋಬರ್ 23ರವರೆಗೆ ಹಾಗೂ ಮತ ಎಣಿಕೆ ದಿನವಾದ ಅಕ್ಟೋಬರ್ 27ರಂದು ‘ಡ್ರೈ ಡೇ’ ಘೋಷಿಸಲಾಗಿದೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

  • ಮತದಾರರ ಸಂಖ್ಯೆ–ವ್ಯಾಪ್ತಿ: ಈ ಚುನಾವಣೆಯಲ್ಲಿ ಬರೀ ಸುಮಾರು 20,000 ಮತದಾರರಿದ್ದು, ಅದರಲ್ಲಿ 15,000ಕ್ಕೂ ಹೆಚ್ಚು ಮಂದಿ ಮಹಿಳೆಯರು. ಇಷ್ಟು ಸೀಮಿತ ಮತದಾರರಿರುವ ಚುನಾವಣೆಗೆ ಇಡೀ ಬೆಂಗಳೂರು ನಗರದಾದ್ಯಂತ ಮದ್ಯ ಮಾರಾಟ ನಿರ್ಬಂಧಿಸಿರುವುದು ಅತಿಥ್ಯ ಉದ್ಯಮಕ್ಕೆ ಹಾಗೂ ಮದ್ಯ ಮಾರಾಟಗಾರರಿಗೆ ಅನಗತ್ಯ ತೊಂದರೆ ಉಂಟುಮಾಡಲಿದೆ.

ಇದೂ ಓದಿ: ಪ್ರವಾಸೋದ್ಯಮ ಸೇವೆಗಳನ್ನು ಒಂದೇ ವೇದಿಕೆಯಡಿ ತರಲು ‘ಡಿಜಿಟಲ್ ಸ್ಟ್ಯಾಕ್’ ಯೋಜನೆ

  • ಆರ್ಥಿಕ ನಷ್ಟದ ಎಚ್ಚರಿಕೆ: ಈ ನಿರ್ಧಾರದಿಂದಾಗಿ ಬಾರ್, ರೆಸ್ಟೋರೆಂಟ್ ಹಾಗೂ ಪಬ್‌ಗಳಿಗೆ ಒಟ್ಟಾರೆಯಾಗಿ 500 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಷ್ಟವಾಗಲಿದ್ದು, ರಾಜ್ಯ ಸರ್ಕಾರದ ಅಬಕಾರಿ ಆದಾಯದ ಮೇಲೂ ಇದು ಗಂಭೀರ ಹೊಡೆತ ನೀಡಲಿದೆ ಎಂದು ಸಂಘ ವಿವರಿಸಿದೆ.

ಇದೂ ಓದಿ: ಪ್ರವಾಸಿ ತಾಣಗಳಲ್ಲಿ ಸದ್ಯದಲ್ಲೇ ಕೆಎಸ್‌ಟಿಡಿಸಿಯ ‘ಮಯೂರ ರುಚಿ ಆನ್ ವೀಲ್ಸ್’ ಆರಂಭ

ಈ ಶಿಕ್ಷಕರ ಕ್ಷೇತ್ರದ ಚುನಾವಣೆ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಜಾರಿಗೊಳಿಸಲು ಘೋಷಿಸಲಾಗಿರುವ ಡ್ರೈ ಡೇ ಆದೇಶವನ್ನು ಆತಿಥ್ಯ ಉದ್ಯಮದ ಹಿತದೃಷ್ಟಿಯಿಂದ ಮರುಪರಿಶೀಲಿಸಿ ಕೂಡಲೇ ಹಿಂಪಡೆಯಬೇಕೆಂದು ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್‌.ಎಸ್.ಸುಬ್ರಹ್ಮಣ್ಯ ಹೊಳ್ಳ  ಹಾಗೂ ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಮನವಿ ಮಾಡಿದ್ದಾರೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ