ಹೋಟೆಲ್ ಕನ್ನಡ, ಬೆಂಗಳೂರು: ಅಕ್ಕಿ, ಈರುಳ್ಳಿ, ತರಕಾರಿಗಳು ಮತ್ತು ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಕೇರಳಂ ರಾಜ್ಯದಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ನೇರ ಪರಿಣಾಮವಾಗಿ ಸಾಮಾನ್ಯ ಕುಟುಂಬಗಳು ಹೊರಗಡೆ ಊಟ ಮಾಡುವುದನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡಿವೆ ಎಂದು ‘ಕೇರಳಂ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್’ (KHRA) ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಸಂಘಟನೆ ಬಲವಾಗಿ ಆಗ್ರಹಿಸಿದೆ.
ಇದೂ ಓದಿ: 12 ಸಿಬ್ಬಂದಿಗೆ ಕಾರು, 25 ಮಂದಿಗೆ ದ್ವಿಚಕ್ರ ವಾಹನ ಉಡುಗೊರೆ ನೀಡಿದ ಹೋಟೆಲೋದ್ಯಮಿ!
ಕುಟುಂಬಗಳು ಹಬ್ಬ-ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಹೋಟೆಲ್ಗಳಿಗೆ ಭೇಟಿ ನೀಡುವುದನ್ನು ತಗ್ಗಿಸಿವೆ. ಲಕ್ಷಾಂತರ ಕಾರ್ಮಿಕರು, ಪೂರೈಕೆದಾರರು ಮತ್ತು ಕೃಷಿಕರಿಗೆ ಉದ್ಯೋಗ ನೀಡಿರುವ ಹೋಟೆಲ್ ಉದ್ಯಮವನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು. ಎಂದು ಎಂದು ಕೇರಳಂ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ (ಕೆಎಚ್ಆರ್ಎ) ಅಧ್ಯಕ್ಷ ಜಿ.ಜಯಪಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ಅಬ್ದುಲ್ ರಸಾಕ್ ಆಗ್ರಹಿಸಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಅಡುಗೆ ಅನಿಲದ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ದರವನ್ನು ಶೇ.5ಕ್ಕೆ ಇಳಿಸಬೇಕು ಹಾಗೂ ಕೃತಕ ಬೆಲೆ ಏರಿಕೆ ಹಾಗೂ ದಾಸ್ತಾನುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿಯೂ ಅವರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸರಾಸರಿ ಶೇ.8.94ರಷ್ಟಿದ್ದರೆ, ಕೇರಳಂನಲ್ಲಿ ಆಹಾರ ಹಣದುಬ್ಬರ ದರವು ಶೇ.10.92ರಷ್ಟು ದಾಖಲಾಗಿದ್ದು, ಇದು ದೇಶದ ಸರಾಸರಿಗಿಂತ ಶೇ,1.98ರಷ್ಟು ಅಧಿಕ. ಈ ಅಸಮತೋಲನದಿಂದಾಗಿ ಹೋಟೆಲ್ಗಳ ದೈನಂದಿನ ನಿರ್ವಹಣಾ ವೆಚ್ಚ ವಿಪರೀತ ಹೆಚ್ಚಾಗಿದ್ದು, ಅದರಲ್ಲೂ ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್ಗಳು ಉಳಿವಿಗಾಗಿ ಹೆಣಗಾಡುತ್ತಿವೆ. ಅಡುಗೆ ಅನಿಲ ಮತ್ತು ದಿನಸಿ ಪದಾರ್ಥಗಳ ಬೆಲೆ ಏರಿಕೆಯೂ ಈ ಸಂಕಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೂ ಓದಿ: ಶೀಘ್ರದಲ್ಲೇ ಬೆಳಗಾವಿಯಲ್ಲೂ ಎನ್ಆರ್ಎಐ ಶಾಖೆ ಆರಂಭ: ನ.19ರಂದು ಉದ್ಘಾಟನೆ
ಹೋಟೆಲ್ ಮಾಲೀಕರು ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿದ್ದಾರೆ. ಗ್ರಾಹಕರಿಗೆ ಹೊರೆ ಆಗಬಾರದೆಂದು ಮೆನು ಬೆಲೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ, ಜೀವನ ವೆಚ್ಚ ಹೆಚ್ಚಾಗಿರುವುದರಿಂದ ಹೋಟೆಲ್ ಕಾರ್ಮಿಕರು ಹೆಚ್ಚಿನ ವೇತನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ ಹೋಟೆಲ್ ಮಾಲೀಕರು ಆಹಾರದ ಬೆಲೆ ಏರಿಸದೆ ಈ ಬೇಡಿಕೆಗಳನ್ನು ಈಡೇರಿಸುವುದು ಅಸಾಧ್ಯವಾಗಿದ್ದು, ಇದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್ ಕಾರ್ಮಿಕ
ಇದೂ ಓದಿ: ಹೋಟೆಲ್ ಮಾಲೀಕರ ಖಾತೆಗೆ ಜಮೆ ಆಯ್ತು ಲಕ್ಷ ಲಕ್ಷ ಹಣ; ಒಟ್ಟು 3 ಕೋಟಿ ರೂಪಾಯಿಗೂ ಅಧಿಕ ಸಂದಾಯ
ಇದೂ ಓದಿ: ಜಾಗತಿಕ ವಿಸ್ತರಣೆಯತ್ತ A2B: ಅಡ್ಯಾರ್ ಆನಂದ ಭವನದಲ್ಲಿ ಬೋಧಿ ಟ್ರೀನ 1,695 ಕೋಟಿ ರೂ. ಹೂಡಿಕೆ



