ಒಳಗೇನಿದೆ!?

ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್‌ ಕಾರ್ಮಿಕ

ಹೋಟೆಲ್‌ ಮಯೂರ/ನವಿತ್

ಹೋಟೆಲ್‌ ಕನ್ನಡ, ಬೆಂಗಳೂರು: ಹೋಟೆಲ್‌ ಕಾರ್ಮಿಕರ ಪ್ರಾಮಾಣಿಕತೆಯ ಉದಾಹರಣೆಗಳನ್ನು ಹೇಳಲು ತೊಡಗಿದರೆ ದೊಡ್ಡ ಪಟ್ಟಿಯೇ ಆಗಿಬಿಡುತ್ತದೆ. ಏಕೆಂದರೆ, ಗ್ರಾಹಕರ ಬೆಲೆಬಾಳುವ ವಸ್ತುಗಳನ್ನು ಹೋಟೆಲ್‌ ಕಾರ್ಮಿಕರು ಮರಳಿ ಸಿಗುವಂತೆ ಮಾಡಿದ ಸಂಗತಿಗಳು ಅವೆಷ್ಟೋ ಇವೆ. ಅಂಥವುಗಳ ಪಟ್ಟಿಗೆ ಇದೊಂದು ತಾಜಾ ಸೇರ್ಪಡೆ.

ಕಾರ್ಕಳ ತಾಲೂಕಿನ ಸೋಮೇಶ್ವರದ ʼಮಯೂರ ಹೋಟೆಲ್‌ʼನ ಸಿಬ್ಬಂದಿ ನವಿತ್‌ ಎಂಬ ಯುವಕ ಹೀಗೊಂದು ಪ್ರಾಮಾಣಿಕತೆ ಮೆರೆಯುವ ಮೂಲಕ ಗಮನ ಸೆಳೆದಿರುವುದಲ್ಲದೆ, ಜನಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಡಾ.ನಟರಾಜ್‌, ಡಾ.ಅನಿತಾ ಮತ್ತು ಕುಟುಂಬಸ್ಥರು ಮೊನ್ನೆ ಮೊನ್ನೆಯಷ್ಟೇ ಹೋಟೆಲ್‌ ಮಯೂರಕ್ಕೆ ತಿಂಡಿ ತಿನ್ನಲು ಹೋಗಿದ್ದವರು, ಅಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ತಮ್ಮ ಚಿನ್ನದ ಸರವನ್ನು ಕಳೆದುಕೊಂಡಿದ್ದರು.

ಪ್ರಾಮಾಣಿಕತೆ ಮೆರೆದ ಹೋಟೆಲ್‌ ಸಿಬ್ಬಂದಿ ನವಿತ್

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಅಲ್ಲಿಂದ ತೆರಳಿದ ಕೆಲವು ಗಂಟೆಗಳ ಬಳಿಕ ಅವರಿಗೆ ಚಿನ್ನದ ಸರ ಕಳೆದುಹೋಗಿರುವುದು ಗಮನಕ್ಕೆ ಬಂದಿತ್ತಾದರೂ ಎಲ್ಲಿ ಕಳೆದುಹೋಯಿತು ಎಂಬ ಬಗ್ಗೆ ಯೋಚಿಸಿದರೂ ಎಲ್ಲಿ ಎಂಬ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆ ಬೇಸರದಲ್ಲಿದ್ದ ಅವರು ಮರಳಿ ಬರುವಾಗ ಅದೇ ಮಯೂರ ಹೋಟೆಲ್‌ಗೆ ಚಹಾ ಸೇವಿಸಲು ತೆರಳಿದ್ದರು.‌ ಆಗ ಅವರ ಬಳಿಗೆ ತೆರಳಿದ್ದ ವೇಟರ್‌ ನವೀನ್‌, ನಿಮ್ಮ ಆಭರಣ ಕಳೆದುಹೋಗಿದೆಯೇ ಎಂಬುದಾಗಿ ವಿಚಾರಿಸಿ, ಅದನ್ನು ಅವರಿಗೆ  ಮರಳಿಸಿದ್ದಾರೆ.

ಹೋಟೆಲ್‌ ಕೆಲಸದಲ್ಲಿ ನಿರತರಾಗಿದ್ದ ನವಿತ್‌, ತಮಗೆ ಸಿಕ್ಕ ಚಿನ್ನದ ಸರವನ್ನು ಕ್ಯಾಷ್‌ ಕೌಂಟರ್‌ನಲ್ಲಿ ಇರಿಸಿದ್ದರು. ಬಳಿಕ ಡಾ.ನಟರಾಜ್‌ ಕುಟುಂಬಸ್ಥರು ಬಂದಾಗ ಅವರನ್ನು ಗುರುತಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಮರಳಿ ಸಿಗುವಂತೆ ಮಾಡಿದ್ದಾರೆ.

ಇದೂ ಓದಿ: ಹೋಟೆಲಿಗರ ಹಣಕಾಸು ಗುಟ್ಟು, ಸ್ವಿಗ್ಗಿ-ಜೊಮ್ಯಾಟೊ ಕೈಯೊಳಗಿನ ಜುಟ್ಟು!: ಭಾರಿ ವಂಚನೆ ಬಹಿರಂಗ

ಡಾ.ನಟರಾಜ್‌ ಅವರ ಕುಟುಂಬದ ಜೊತೆ ನವಿತ್.

ಲೇಖಕಿ ದೀಪಾ ಹಿರೇಗುತ್ತಿ ಅವರು ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದು, ನವಿತ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಹೋಟೆಲ್‌ ಸಿಬ್ಬಂದಿಯ ಪ್ರಾಮಾಣಿಕತೆ ಜನಮೆಚ್ಚುಗೆ ಪಡೆದಿರುವ ಬಗ್ಗೆ ಮಯೂರ ಹೋಟೆಲ್‌ ಮಾಲೀಕ ಪ್ರಜೇಶ್‌ ಭಕ್ತ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..

ಮಲೆನಾಡಿನಿಂದ ಆಗುಂಬೆ ಮಾರ್ಗವಾಗಿ ಉಡುಪಿಗೆ ಸಾಗುವಾಗ ಸೋಮೇಶ್ವರದಲ್ಲಿ ಸಿಗುವ ʼಹೋಟೆಲ್‌ ಮಯೂರʼದಲ್ಲಿನ ನೀರು ದೋಸೆ, ಬನ್ಸ್‌ ಹೆಚ್ಚು ಜನಪ್ರಿಯ. ಒಳ್ಳೆಯ ಸೇವೆ ಹಾಗೂ ತಿಂಡಿ-ತಿನಿಸಿಗೆ ಹೆಸರಾಗಿರುವ ಈ ಹೋಟೆಲ್‌ ಇದೀಗ ತನ್ನ ಸಿಬ್ಬಂದಿಯ ಪ್ರಾಮಾಣಿಕತೆಯಿಂದ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. (ಚಿತ್ರ-ಮಾಹಿತಿ ಕೃಪೆ: ದೀಪಾ ಹಿರೇಗುತ್ತಿ)

ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ‌ ನೇತೃತ್ವ

ಇದೂ ಓದಿ: ಕಾವೇರಿ ಕಾರ್ಸ್‌@34: ಒಂದು ಲ್ಯಾಂಡ್‌ಲೈನ್‌ನಿಂದ ಆರಂಭ, ಇಂದು ಪ್ರತಿಷ್ಠಿತ ಕಾರ್ಪೋರೇಟ್‌ ಸಾರಿಗೆ ಸೇವಾ ಸಂಸ್ಥೆ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ