ಒಳಗೇನಿದೆ!?

ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮ; ಬಿಎಚ್‌ಎ​ ಅರ್ಜಿ ಸಂಬಂಧ ಹೈಕೋರ್ಟ್‌ ಮಧ್ಯಂತರ ಆದೇಶ

ಬೆಂಗಳೂರು: ಕರ್ನಾಟಕ ಸರ್ಕಾರ 2024ರ ಅಕ್ಟೋಬರ್​ 1ರಂದು ಹೊರಡಿಸಿದ ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳ ಅಧಿಸೂಚನೆ ವಿರುದ್ಧ ಹೈಕೋರ್ಟ್​ನಿಂದ ಮಧ್ಯಂತರ ರಿಲೀಫ್ ಸಿಕ್ಕಿದೆ. ಈ ಅಧಿಸೂಚನೆಯನ್ನು ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ, ಬೆಂಗಳೂರು ಉದ್ಯೋಗದಾತರ ಸಂಘ ಮತ್ತಿತರರು ಸಲ್ಲಿಸಿದ ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ಯಾಮ್ ಪ್ರಸಾದ್ ನೇತೃತ್ವದ ಪೀಠವು ಮಧ್ಯಂತರ ಆದೇಶ ನೀಡಿದೆ.

ಈ ಅಧಿಸೂಚನೆಯು ಉದ್ಯೋಗಿಗಳಿಗೆ ಕಡ್ಡಾಯವಾಗಿ ಗ್ರಾಚ್ಯುಟಿ ವಿಮೆ ಪಡೆಯುವಂತೆ ಸೂಚಿಸುವುದು 1972ರ ಗ್ರಾಚ್ಯುಟಿ ಪಾವತಿ ಕಾಯ್ದೆಯಡಿ ಸಿಂಧುವಾಗಿಲ್ಲ ಎಂದು ಅರ್ಜಿದಾರರು ವಾದಿಸಿದರು. ಉದ್ಯೋಗಿಗಳು ತಮ್ಮ ಸೇವಾ ಅವಧಿಯಿಂದ ಗ್ರಾಚ್ಯುಟಿ ಪಡೆಯಲು ಅರ್ಹರಾಗಿದ್ದರೂ ಈ ನಿಯಮ ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ ಎಂದು ಪ್ರತಿಪಾದಿಸಿದರು.

ಅರ್ಜಿಗಳನ್ನು ಪರಿಗಣಿಸಿದ ಹೈಕೋರ್ಟ್, ರಿಟ್ ಅರ್ಜಿಗಳು ವಿಚಾರಣೆಯಲ್ಲಿ ಇರುವವರೆಗೆ ಕಡ್ಡಾಯ ವಿಮೆ ಪಡೆಯದ ಉದ್ಯೋಗದಾತರ ವಿರುದ್ಧ ಸರ್ಕಾರ ಯಾವುದೇ ಕ್ರಮ ಅಥವಾ ಒತ್ತಡದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಉದ್ಯೋಗದಾತರ ಸಂಘಗಳನ್ನು ಸಿಸಿಐ-ಲೀಗಲ್​ನ ವಕೀಲ ಬಿ.ಕೆ.ಪ್ರಶಾಂತ್ ಪ್ರತಿನಿಧಿಸಿದ್ದರು.

ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್‌ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?

ಇದೂ ಓದಿ:ಸದ್ಯದಲ್ಲೇ ಎಟಿಎಂ-ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವ ವ್ಯವಸ್ಥೆ; ಎಂದಿನಿಂದ ಜಾರಿ?

ಇದೂ ಓದಿ: ಪ್ರವಾಸಿಗರು ಕಡಿಮೆ ಆಗಲು ಇಡ್ಲಿ-ಸಾಂಬಾರ್‌ ಕಾರಣ!; ಹೋಟೆಲಿಗರ ವಿರುದ್ಧ ಶಾಸಕರಿಂದ ಇದೆಂತಹ ಹೇಳಿಕೆ!?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ