ಒಳಗೇನಿದೆ!?

ದೇವಸ್ಥಾನ ನಿರ್ಮಾಣದಿಂದ ಇಲ್ಲಿ ಶೇ.20 ಹೆಚ್ಚಾಯ್ತು ಹೋಟೆಲೋದ್ಯಮದ ವಹಿವಾಟು!

ದಿಘಾ: ದೇವಸ್ಥಾನವೊಂದರ ನಿರ್ಮಾಣದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳಗೊಂಡಿದ್ದಲ್ಲದೆ ಸುತ್ತಮುತ್ತಲ ಹೋಟೆಲೋದ್ಯಮದಲ್ಲೂ ಭಾರಿ ಏರಿಕೆ ಕಂಡುಬಂದಿದೆ. ಪಶ್ಚಿಮಬಂಗಾಳದ ದಿಘಾದಲ್ಲಿ ಈ ಬೆಳವಣಿಗೆ ಉಂಟಾಗಿದೆ.

ಪಶ್ಚಿಮ ಬಂಗಾಳದ ದಿಘಾದ ಹೋಟೆಲ್‌ ಮಾಲೀಕರು ಏಪ್ರಿಲ್‌ನಲ್ಲಿ ಶ್ರೀ ಜಗನ್ನಾಥ ದೇವಾಲಯ ತೆರೆಯುವಿಕೆಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ, ಇದರಿಂದಾಗಿ ಹೋಟೆಲ್‌ಗಳ ಆಕ್ಯುಪೆನ್ಸಿಯಲ್ಲಿ ಸರಾಸರಿ ಶೇ.20 ಹೆಚ್ಚಳವಾಗಿದೆ.

ʼಈ ವರ್ಷ ಏಪ್ರಿಲ್‌ನಲ್ಲಿ ಜಗನ್ನಾಥ ದೇವಾಲಯ ತೆರೆಯುವಿಕೆಯಿಂದಾಗಿ ಎಲ್ಲ ಹೋಟೆಲ್‌ಗಳಲ್ಲಿ ಕೊಠಡಿಗಳ ಆಕ್ಯುಪೆನ್ಸಿ ಸರಾಸರಿ ಶೇ.20 ಏರಿಕೆ ಕಂಡಿದೆ. ಹೆಚ್ಚಿನ ಸಂದರ್ಶಕರು ದಿಘಾಕ್ಕೆ ಸಣ್ಣ ಅವಧಿಯ ವಾಸ್ತವ್ಯಕ್ಕೆ ಬರುತ್ತಿದ್ದಾರೆ. ಸುಮಾರು ಶೇ.90 ಗ್ರಾಹಕರು ಎರಡು ದಿನಗಳ ಕಾಲ ದಿಘಾದಲ್ಲಿ ಉಳಿದುಕೊಂಡು ಪಟ್ಟಣ ವೀಕ್ಷಿಸಲು ಮತ್ತು ಹೊಸ ಜಗನ್ನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬರುತ್ತಿದ್ದಾರೆ. ಈ ಏರಿಕೆ ದೀರ್ಘಕಾಲೀನವಾಗಿರುತ್ತದೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲʼ ಎಂದು ದಿಘಾ ಹೋಟೆಲಿಯರ್ಸ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಬಿಪ್ರದಾಸ್ ಚಟರ್ಜಿ ತಿಳಿಸಿದ್ದಾರೆ.

ʼರಾಜ್ಯಾದ್ಯಂತ ಮತ್ತು ಇತರೆಡೆಯಿಂದ ಲಕ್ಷಾಂತರ ಜಗನ್ನಾಥ ಭಕ್ತರು ಪಟ್ಟಣಕ್ಕೆ ಆಗಮಿಸಿದ್ದಾರೆ. ಏಪ್ರಿಲ್ 30ರಂದು ದೇವಾಲಯ ಉದ್ಘಾಟನೆ ಆದಾಗಿನಿಂದ ಓಲ್ಡ್ ದಿಘಾದ ಸುಮಾರು 115 ಹೋಟೆಲ್‌ಗಳಲ್ಲಿ ಮತ್ತು ನ್ಯೂ ದಿಘಾ, ಶಂಕರಪುರ ಮತ್ತು ತಾಜ್‌ಪುರದ 600 ಹೋಟೆಲ್‌ಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡಿದ್ದಾರೆʼ ಎಂದು ಅವರು ಮಾಹಿತಿ ನೀಡಿದ್ದಾರೆ.

ʼದೇವಾಲಯದ ಉದ್ಘಾಟನೆಯಿಂದ ದಿಘಾದ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಏರಿಕೆ ದೀರ್ಘಕಾಲಿಕವೇ ಅಥವಾ ಇದು ಕೇವಲ ಆರಂಭಿಕ ತಾತ್ಕಾಲಿಕ ಪರಿಣಾಮವೇ ಎಂದು ಆರು ತಿಂಗಳ ನಂತರ ಮೌಲ್ಯಮಾಪನ ಮಾಡಬೇಕಾಗಿದೆʼ ಎಂಬ ಅಭಿಪ್ರಾಯವನ್ನೂ  ಅವರು ವ್ಯಕ್ತಪಡಿಸಿದ್ದಾರೆ. 

ಪಶ್ಚಿಮಬಂಗಾಳದ ದಿಘಾದಲ್ಲಿನ ಶ್ರೀ ಜಗನ್ನಾಥ ದೇವಸ್ಥಾನ

ʼದೇವಾಲಯ ತೆರೆಯುವಿಕೆಯಿಂದ ಕೊಠಡಿ ದರಗಳಲ್ಲಿ ಅಸಾಮಾನ್ಯ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಚಟರ್ಜಿ, ಕೆಲವು ಅನೈತಿಕ ಹೋಟೆಲ್‌ ಮಾಲೀಕರು ಅನುಚಿತ ದರಗಳನ್ನು ವಿಧಿಸಿದ್ದಾರೆ, ಆದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು. ಪಾರದರ್ಶಕತೆ ಮತ್ತು ನ್ಯಾಯಸಮ್ಮತೆಗಾಗಿ ಕೊಠಡಿ ದರಗಳನ್ನು ಪ್ರದರ್ಶನ ಫಲಕದಲ್ಲಿ ತೋರಿಸಲು ಹೋಟೆಲ್‌ ಮಾಲೀಕರಿಗೆ ಸೂಚಿಸಲಾಗಿದೆʼ ಎಂದು ಅವರು ತಿಳಿಸಿದ್ದಾರೆ.

ದೇವಾಲಯದ ಮುಂಭಾಗದ ರಸ್ತೆಯನ್ನು ವಿಶಾಲಗೊಳಿಸಬೇಕಾಗಿದೆ ಎಂದು ಈ ಹಿರಿಯ ಹೋಟೆಲ್‌ ಮಾಲೀಕರೊಬ್ಬರು ಹೇಳಿದರು.  ರಥಯಾತ್ರೆ ಮತ್ತು ಸ್ನಾನ ಯಾತ್ರೆಯಂಥ ಕೆಲವು ಸಂದರ್ಭಗಳಲ್ಲಿ ಜನರ ದಟ್ಟಣೆ ನಿಭಾಯಿಸಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ. ಈ ಬಾರಿ ಉನ್ನತ ಭದ್ರತೆ ಇದೆ, ಆದರೆ ಇದು ವರ್ಷಪೂರ್ತಿ ಇರಬೇಕು ಎಂದು ಅಸೋಸಿಯೇಷನ್‌ನ ಇನ್ನೊಬ್ಬ ಸದಸ್ಯರು ಹೇಳಿದರು. 

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ