ಬೆಂಗಳೂರು: ಶ್ರೀ ಅನಂತೇಶ್ವರ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ “ಪಾಕಶಾಲ” ಹೋಟೆಲ್ ಸರಣಿಯ ಮತ್ತೊಂದು ನೂತನ ಶಾಖೆ ಜುಲೈ13ರ ಭಾನುವಾರ ಉದ್ಘಾಟನೆಗೊಂಡಿದೆ.
ಕನಕಪುರ ತಾಲೂಕು ಕಸಬಾ ಹೋಬಳಿಯ ರಾಯಸಂದ್ರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಈ ಹೋಟೆಲನ್ನು ಮಾಜಿ ಸಂಸದ, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಡಿ.ಕೆ. ಸುರೇಶ್ ಅವರು ಭಾನುವಾರ ಉದ್ಘಾಟಿಸಿ, ಶುಭ ಹಾರೈಸಿದರು.
ರಾಮನಗರ ಶಾಸಕ ಇಕ್ಬಾಲ್ ಹುಸೇನ್, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಸುಧಾಮ್ ದಾಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಟ್ಟಡ ಮಾಲೀಕರೂ ಆಗಿರುವ ಎಂ.ಆರ್.ರವಿ ಮತ್ತು ಉಷಾ ರವಿ, ಕರ್ನಾಟಕ ಪ್ರದೇಶ ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಅಧ್ಯಕ್ಷ ಜಿ.ಕೆ. ಶೆಟ್ಟಿ, ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಾಕಶಾಲ ತನ್ನ ಗ್ರಾಹಕರಿಗೆ ಎಂದಿನಂತೆ ಶುಚಿ-ರುಚಿಯಾದ ಆಹಾರ ಹಾಗೂ ಗುಣಮಟ್ಟದ ಸೇವೆ ನೀಡಲಿ.
| ಡಿ.ಕೆ.ಸುರೇಶ್, ಅಧ್ಯಕ್ಷರು, ಬೆಂಗಳೂರು ಹಾಲು ಒಕ್ಕೂಟ ಮತ್ತು ಮಾಜಿ ಸಂಸದ.
ಶ್ರೀ ಅನಂತೇಶ್ವರ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಸಿಎಂಡಿ ಕೆ.ಎನ್. ವಾಸುದೇವ ಅಡಿಗ, ಹೋಟೆಲೋದ್ಯಮಿ ರಾಧಾಕೃಷ್ಣ ಅಡಿಗ ಮುಂತಾದವರು ಉಪಸ್ಥಿತರಿದ್ದರು. ಜನಪ್ರಿಯ ಹೋಟೆಲ್ ಸರಣಿ ಆಗಿರುವ ʼಪಾಕಶಾಲʼ ಈಗಾಗಲೇ ಹಲವು ಶಾಖೆಗಳನ್ನು ಹೊಂದಿದ್ದು, ಗ್ರಾಹಕರ ಮೆಚ್ಚುಗೆಯನ್ನು ಗಳಿಸಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?


ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ‘ಬ್ರಾಹ್ಮಣರ ಕಾಫಿ ಬಾರ್’@60; ಬೆಂಗಳೂರು ಹೋಟೆಲುಗಳ ಸಂಘದಿಂದ ಅಭಿನಂದನೆ



