ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಸೂಲಿಗಾಗಿ ಯುಪಿಐ ಪೇಮೆಂಟ್ ಮಾಹಿತಿಯ ಜಾಡು ಹಿಡಿದು ಸರ್ಕಾರ ನೋಟಿಸ್ ಜಾರಿ ಮಾಡಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಇದೀಗ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ(ಎಂಆರ್‌ಪಿ) ಕಡೆಗೂ ಸರ್ಕಾರದ ಗಮನ ಹರಿಸಿದೆ.
ಜಿಎಸ್‌ಟಿ ಸಂಗ್ರಹದಲ್ಲಿ ಕಟ್ಟುನಿಟ್ಟು ತರಲು ಮುಂದಾಗಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಇನ್ನುಮುಂದೆ ಎಂಆರ್‌ಪಿ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಹೀಗಾಗಿ ಎಂಆರ್‌ಪಿ ವಿಚಾರದಲ್ಲಿ ಮುಂದೇನಾಗಬಹುದು ಎಂಬ ಕುತೂಹಲ ಉಂಟಾಗಿದೆ.
ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…
ದೇಶದಲ್ಲಿ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿರುವ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ(ಎಂಆರ್‌ಪಿ) ವ್ಯವಸ್ಥೆಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿ ನಿಧಿ ಖರೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆದಿದೆ.
ಇದೂ ಓದಿ: ರಜತಗಿರಿ ಪ್ಯಾಲೇಸ್‌ನಲ್ಲಿ ವಾರಪೂರ್ತಿ ಹಲಸಿನ ಖಾದ್ಯ ಮೇಳ; ಇಲ್ಲಿದೆ ಪೂರ್ತಿ ವಿವರ..
ಉತ್ಪಾದಕರು ಮತ್ತು ಮಾರಾಟಗಾರರಲ್ಲಿ ಕೆಲವರು ಈಗ ಉತ್ಪನ್ನಗಳ ಮೇಲೆ ಊಹಾತ್ಮಕ ಬೆಲೆ ನಮೂದಿಸುತ್ತಿದ್ದಾರೆ. ಈ ವಿಷಯದಲ್ಲಿ ಯಾವುದೇ ಸ್ಪಷ್ಟ ನಿಯಮಾವಳಿ ಇಲ್ಲದಿರುವುದು ಅವರಿಗೆ ವರವಾಗಿ ಪರಿಣಮಿಸಿದೆ. ಹೀಗಾಗಿ ಎಂಆರ್‌ಪಿಯನ್ನು ಉತ್ಪಾದನಾ ವೆಚ್ಚ ಮತ್ತು ಇತರ ಖರ್ಚುಗಳಿಗೆ ತಾಳೆ ಹಾಕಿ ನಿರ್ಧರಿಸುವುದನ್ನು ಕಡ್ಡಾಯಗೊಳಿಸಲು ಸಭೆಯಲ್ಲಿ ಒಲವು ವ್ಯಕ್ತವಾಗಿದೆ. ಸದ್ಯದಲ್ಲೇ ಈ ಸಂಬಂಧ ಕಠಿಣ ಮಾರ್ಗಸೂಚಿಗಳನ್ನು ರೂಪಿಸಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇದೂ ಓದಿ: ಯುಪಿಐ ವಹಿವಾಟು ನಿಲ್ಲಿಸಿದರೆ ಜಿಎಸ್‌ಟಿಯಿಂದ ಬಚಾವಾಗಬಹುದೇ?; ವರ್ತಕರಿಗಿನ್ನು ಉಳಿದ ದಾರಿ?
ಒಂದೇ ಉತ್ಪನ್ನಕ್ಕೆ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಎಂಆರ್‌ಪಿ ಇರುವುದು ಗ್ರಾಹಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ, ಇದು ಮೋಸಕ್ಕೂ ದಾರಿ ಮಾಡಿಕೊಡುತ್ತಿದೆ. ಇದನ್ನು ತಡೆಯಲು ಕಟ್ಟುನಿಟ್ಟಾದ ಕಾನೂನಿನ ಅಗತ್ಯವಿದೆ. ಹೊಸ ಬದಲಾವಣೆಯಿಂದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ವಸ್ತುಗಳು ಸಿಗಲಿವೆ. ಅಲ್ಲದೆ, ಪಾರದರ್ಶಕತೆ ಉಂಟಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಅಭಿಪ್ರಾಯಪಟ್ಟರು ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಎಂಆರ್‌ಪಿ ವ್ಯವಸ್ಥೆಯಲ್ಲಿ ಭವಿಷ್ಯದಲ್ಲಿ ಪರಿಷ್ಕರಣೆ ಆಗಲಿರುವುದು ನಿಚ್ಚಳವಾಗಿದೆ. ಮತ್ತೊಂದೆಡೆ ಎಂಆರ್‌ಪಿ ವ್ಯವಸ್ಥೆ ಇಲ್ಲವಾಗಿ ಪರ್ಯಾಯವಾಗಿ ಬೇರೆಯದೇ ವ್ಯವಸ್ಥೆ ಬಂದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮ; ಬಿಎಚ್‌ಎ ಅರ್ಜಿ ಸಂಬಂಧ ಹೈಕೋರ್ಟ್ ಮಧ್ಯಂತರ ಆದೇಶ



