ಹೋಟೆಲ್ ಕನ್ನಡ, ಬೆಂಗಳೂರು: ಮಲೆನಾಡಿನ ವಿಶೇಷ ʼತಂಬುಳಿ ಮನೆʼ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಜನಪ್ರಿಯವಾಗಿದ್ದು, ಇದೀಗ ಸಾಂಸ್ಕೃತಿಕನಗರಿ ಮೈಸೂರಿನಲ್ಲೂ ತೆರೆದುಕೊಂಡಿದೆ.
ಮೈಸೂರಿನ ರಾಮಕೃಷ್ಣನಗರದ ವಿಶ್ವಮಾನವ ಜೋಡಿರಸ್ತೆ ಸ್ಮಾರ್ಟ್ ಪಾಯಿಂಟ್ ಬಳಿ ನಿರ್ಮಾಣಗೊಂಡಿರುವ ʼತಂಬುಳಿ ಮನೆʼ, ಅ.16ರ ಗುರುವಾರ ಸ್ಥಳೀಯ ಸಂಸದರು, ಶಾಸಕರು, ಮಾಜಿ ಶಾಸಕರು ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿದೆ.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, ತಂಬುಳಿಯನ್ನು ಸವಿದು ಶ್ಲಾಘಿಸಿದ್ದಲ್ಲದೆ, ಶುಭ ಹಾರೈಸಿದ್ದಾರೆ.
ಇದೂ ಓದಿ: ಬೆಂಗಳೂರಿಗೂ ಬಂತು ತಂಬುಳಿ: ʼತಂಬುಳಿ ಮನೆʼಗೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ಟರ ಮೆಚ್ಚುಗೆ
ತಂಬುಳಿ ಮನೆಯಲ್ಲಿ ಶುದ್ಧ ಸಸ್ಯಾಹಾರಿ ಖಾದ್ಯಗಳನ್ನು ಹವಾನಿಯಂತ್ರಿತ ವಾತಾವರಣದಲ್ಲಿ ಸವಿಯಬಹುದು. ತಂಬುಳಿ 50 ರೂಪಾಯಿಗೆ ಲಭಿಸುತ್ತದೆ. ಸೊಪ್ಪಿನ ದೋಸೆಗಳು ಬೆಲೆ 70 ರೂಪಾಯಿಂದ ಆರಂಭವಾಗಿದ್ದು, 150ರಿಂದ 200 ರೂ. ಬೆಲೆಯಲ್ಲಿ ವಿವಿಧ ರೀತಿಯ ಊಟಗಳು ಸಿಗುತ್ತವೆ.

ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್
ʼತಂಬುಳಿ ಮನೆʼಯ ಮಾಲೀಕರಾದ ಕಾರ್ತಿಕ್ ಎಚ್. ಶ್ರೀಧರ್, ಕೆ.ಜಿ. ಪ್ರಶಾಂತ, ಅನುಷಾ ಮತ್ತು ಕುಟುಂಬಸ್ಥರು, ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮುಂತಾದ ಗಣ್ಯರು ಹಾಜರಿದ್ದರು.
ಬೆಂಗಳೂರು-ಮಂಗಳೂರಿನಲ್ಲಿ ಜನಪ್ರಿಯತೆ ಪಡೆದಿರುವ ಹೋಟೆಲ್ ʼತಂಬುಳಿ ಮನೆʼ ಇದೀಗ ಮೈಸೂರಿನಲ್ಲಿ ಆರಂಭವಾಗಿರುವುದು ಖುಷಿ ತಂದಿದೆ. ತಂಬುಳಿ ಮನೆ ಪಾರಂಪರಿಕ ಆಹಾರವನ್ನು ಉಣಬಡಿಸಲಿದೆ.
| ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದರು.
ಏನೆಲ್ಲ ಲಭ್ಯ?: ‘ನಮ್ಮಜ್ಜಿ ಹೇಳ್ಕೊಟ್ಟಿದ್ದು’ ಎಂಬ ಟ್ಯಾಗ್ಲೈನ್ ಹೊಂದಿರುವ ತಂಬುಳಿ ಮನೆಯಲ್ಲಿ ಅಂಬೆ ಶುಂಠಿ ತಂಬುಳಿ, ನೆಲ್ಲಿಕಾಯಿ ತಂಬಳಿ, ಸೆಷಲ್ ಅಪ್ಪೆಕಾಯಿ ತಂಬುಳಿ, ಲೆಮನ್ ಗ್ರಾಸ್ ತಂಬುಳಿ, ಒಂದೆಲಗ ತಂಬುಳಿ, ಮೆಂತ್ಯ ತಂಬುಳಿ ಸೇರಿದಂತೆ 50 ಬಗೆಯ ತಂಬುಳಿಗಳು ಲಭ್ಯ ಇವೆ. ವಿವಿಧ ಸೊಪ್ಪಿನ ದೋಸೆಗಳು, ಬಾಳೆ ಎಲೆ ಊಟ, ಅಕ್ಕಿ ರೊಟ್ಟಿ ಊಟ ಮಾತ್ರವಲ್ಲದೆ ವಿವಿಧ ಬಗೆಯ ಭಕ್ಯ್ಷ-ಭೋಜನಗಳೂ ಸಿಗುತ್ತವೆ.
ಇದೂ ಓದಿ: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಮಲೆನಾಡಿನ ಊಟವನ್ನು ರಾಜ್ಯಾದ್ಯಂತ ನೀಡಬೇಕು ಎನ್ನುವ ಉದ್ದೇಶದಿಂದ ತಂಬುಳಿ ಮನೆ ಆರಂಭಿಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 13 ಶಾಖೆಗಳನ್ನು ಹೊಂದಿರುವ ನಾವು ಈ ಮೂಲಕ ಮೈಸೂರಿನಲ್ಲೂ ಶಾಖೆ ತೆರದಿದ್ದೇವೆ. ನಮ್ಮ ಊಟ ಮನೆಯ ಊಟದಂತೆ ಇದ್ದು, ಆರೋಗ್ಯಕ್ಕೆ ಆದ್ಯತೆ ನೀಡುತಿದ್ದೇವೆ. ಗಾಣದಿಂದ ತಯಾರಾದ ಕೊಬ್ಬರಿ-ಶೇಂಗಾ ಎಣ್ಣೆಯಿಂದ ಅಡುಗೆ ಮಾಡುತ್ತಿದ್ದೇವೆ. ಸೋಡಾ, ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ, ಹಸಿ ಮೆಣಸನ್ನು ಬಳಸುವುದಿಲ್ಲ.
| ಕಾರ್ತಿಕ್ ಎಚ್. ಶ್ರೀಧರ್, ತಂಬುಳಿ ಮನೆ ಮಾಲೀಕರು.

ಇದೂ ಓದಿ: ‘ಹಳ್ಳಿಮನೆ’ ಸಮೂಹದ ಹೊಸ ‘ದೋಸೆ ಕ್ಯಾಂಪ್’ನಲ್ಲಿ ಇನ್ನು 3 ದಿನ ತಿಂಡಿಗಳಿಗೆ 50% ರಿಯಾಯಿತಿ!
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ‘ತಾಜಾ ತಿಂಡಿ’ಯೂ, ಖ್ಯಾತ ಐರಿಷ್ ಕವಿಯೂ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್!
ಇದೂ ಓದಿ: ಬೆಂಗಳೂರಿನ ಎಂಟಿಆರ್ ಹೋಟೆಲ್ಗೆ ನಾರ್ವೆ ರಾಯಭಾರಿಯ ಮೆಚ್ಚುಗೆ



