ಹೋಟೆಲ್ ಕನ್ನಡ, ಬೆಂಗಳೂರು: ಬೆಂಗಳೂರು ಹೋಟೆಲುಗಳ ಸಂಘದ 90ನೇ ವಾರ್ಷಿಕ ಸರ್ವಸದಸ್ಯರ ಸಭೆ ಹಾಗೂ ಬಿ2ಬಿ ಕಾನ್‌ಕ್ಲೇವ್ ಅ.28ರ ಮಂಗಳವಾರ ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆಯಲಿದೆ.
ಬಿ2ಬಿ ಸಮಾವೇಶವು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಯಾಗಲಿದ್ದು ಎಫ್‌ಎಸ್‌ಎಸ್‌ಎಐ ಆಯುಕ್ತ ಕೆ.ಶ್ರೀನಿವಾಸ್, ಎಚ್‌ಸಿಜಿ ಆಸ್ಪತೆಯ ಕ್ಯಾನ್ಸರ್‌ತಜ್ಞ ಡಾ.ವಿಶಾಲ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಐದರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮ ಕ್ಷೇತ್ರದ ವಿವಿಧ ವಿಷಯಗಳ ಕುರಿತು ಸಂವಾದ-ಸಮಾಲೋಚನೆಗಳು ನಡೆಯಲಿವೆ.
ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಬಿ2ಬಿ ಕಾನ್‌ಕ್ಲೇವ್‌ನ ಸಮಾರೋಪ ಸಮಾರಂಭ ಸಂಜೆ 5 ಗಂಟೆಗೆ ನಡೆಯಲಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ಬಿ2ಬಿ ಕಾನ್‌ಕ್ಲೇವ್ ಅಧ್ಯಕ್ಷ ಬಿ.ರಾಮಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.




ಇದೂ ಓದಿ: ಬೆಂಗಳೂರಿನ ಎಂಟಿಆರ್ ಹೋಟೆಲ್‌ಗೆ ನಾರ್ವೆ ರಾಯಭಾರಿಯ ಮೆಚ್ಚುಗೆ
ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ಉಪಾಧ್ಯಕ್ಷರಾದ ಶಕೀರ್ ಹಕ್, ಎ. ಶಂಕರ್ ಕುಂದರ್, ಜಂಟಿ ಕಾಯದರ್ಶಿಗಳಾದ ಬಿ.ಎಂ.ಧನಂಜಯ, ಎ.ಎಲ್.ರಾಕೇಶ್, ಎಸ್.ಪಿ.ಕೃಷ್ಣರಾಜ್, ಶೇಖರ್ ನಾಯ್ಡು, ಖಜಾಂಚಿ ಜಿ.ಸುಧಾಕರ್ ಶೆಟ್ಟಿ ಅವರ ಉಪಸ್ಥಿತಿ ಇರಲಿದೆ. ಸಮಾರೋಪ ಸಮಾರಂಭದ ಬಳಿಕ ಬೆಂಗಳೂರು ಹೋಟೆಲುಗಳ ಸಂಘದ 90ನೇ ವಾರ್ಷಿಕ ಸರ್ವಸದಸ್ಯರ ಸಭೆ ನಡೆಯಲಿದೆ.


ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ



