ಹೋಟೆಲ್ ಕನ್ನಡ, ಬೆಂಗಳೂರು: ಹೊಸ ಕಾನೂನಿನ ಅನುಷ್ಠಾನ ಕುರಿತು ಕಾರ್ಮಿಕರ ರಾಜ್ಯ ವಿಮಾ ನಿಗಮ(ಇಎಸ್‌ಐಸಿ)ದ ಪ್ರಾದೇಶಿಕ ನಿರ್ದೇಶಕರ ಜೊತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ) ಪದಾಧಿಕಾರಿಗಳು ಸಂವಾದ ನಡೆಸಿದರು. ಎಫ್‌ಕೆಸಿಸಿಐ ಗುರುವಾರ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಇಎಸ್‌ಐಸಿಗೆ ಅನ್ವಯವಾಗುವ ಸಾಮಾಜಿಕ ಭದ್ರತಾ ಸಂಹಿತೆ 2020ರ ಅಡಿಯಲ್ಲಿನ ಹೊಸ ವೇತನ ವ್ಯಾಖ್ಯಾನದ ಅನುಷ್ಠಾನದ ಕುರಿತು ಇಎಸ್‌ಐಸಿ ಪ್ರಾದೇಶಿಕ ನಿರ್ದೇಶಕ ಮನೋಜ್ ಕುಮಾರ್ ಅವರ ಜೊತೆ ಸಂವಾದ ನಡೆಸಲಾಯಿತು.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಈ ವೇಳೆ ಹೊಸ ವೇತನ ವ್ಯಾಖ್ಯಾನದ ಪ್ರಮುಖ ಅಂಶಗಳನ್ನು ಇಎಸ್‌ಐಸಿ ಅಧಿಕಾರಿಗಳು ವಿವರಿಸಿದ್ದಲ್ಲದೆ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಸಭೆಯು ಮಾಹಿತಿಯುಕ್ತ ಮತ್ತು ಉದ್ಯಮದ ಪಾಲುದಾರರಿಗೆ ಪ್ರಯೋಜನಕಾರಿಯಾಗಿತ್ತು ಎಂಬ ಅಭಿಪ್ರಾಯ ಹೊರಹೊಮ್ಮಿದೆ.
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಪ್ರಯೋಜನಗಳನ್ನು ಹೆಚ್ಚಿಸುವ ಗುರಿ ಹೊಂದಿರುವ ಇಎಸ್ಐಸಿಯ ಪೂರ್ವಭಾವಿ ಉಪಕ್ರಮಗಳು ಮತ್ತು ಬಹು ಕಲ್ಯಾಣ ಆಧಾರಿತ ಯೋಜನೆಗಳನ್ನು ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ತಮ್ಮ ಸ್ವಾಗತ ಭಾಷಣದಲ್ಲಿ ಪ್ರಸ್ತಾಪಿಸಿದರು.
ಇದೂ ಓದಿ: ‘ಬ್ರಾಹ್ಮಣರ ಕಾಫಿ ಬಾರ್’@60; ಬೆಂಗಳೂರು ಹೋಟೆಲುಗಳ ಸಂಘದಿಂದ ಅಭಿನಂದನೆ

ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷ ಬಿ. ಪಿ. ಶಶಿಧರ್, ಮಾಜಿ ಅಧ್ಯಕ್ಷ ಬಿ. ವಿ. ಗೋಪಾಲ್ ರೆಡ್ಡಿ ಮತ್ತು ಕಾರ್ಮಿಕ ಸಮಿತಿ ಅಧ್ಯಕ್ಷ, ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷರೂ ಆಗಿರುವ ಪಿ. ಸಿ. ರಾವ್ ಹಾಗೂ ಎಫ್‌ಕೆಸಿಸಿಐ ನಿರ್ದೇಶಕರು ಜೊತೆಯಾಗಿ ಮನೋಜ್ ಕುಮಾರ್ ಮತ್ತು ಇಎಸ್‌ಐಸಿ ಅಧಿಕಾರಿಗಳನ್ನು ಸನ್ಮಾನಿಸಿದರು.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಸರ್ಕಾರಿ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ಹೋಟೆಲುಗಳ ಸಂಘ
ಇದೂ ಓದಿ: ಪಿ.ಸಿ.ರಾವ್ @ 70: ಅರಮನೆ ಮೈದಾನದಲ್ಲಿ ಜನ್ಮದಿನದ ಅದ್ಧೂರಿ ಸಂಭ್ರಮ



