ಒಳಗೇನಿದೆ!?

ಈಗ ಬೆಂಗಳೂರಲ್ಲೂ ಸಿಗುತ್ತೆ ಮೈಸೂರು ಮೈಲಾರಿ ದೋಸೆ; ಹೋಟೆಲ್‌ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಹೋಟೆಲ್‌ ಕನ್ನಡ, ಬೆಂಗಳೂರು: ಮೈಸೂರಿನಲ್ಲಿ ಈಗಾಗಲೇ ಭಾರಿ ಪ್ರಸಿದ್ಧಿ ಪಡೆದು ಜನಪ್ರಿಯಗೊಂಡಿರುವ ʼಮೈಲಾರಿ ದೋಸೆʼ ಇದೀಗ ರಾಜಧಾನಿ ಬೆಂಗಳೂರಿನಲ್ಲೂ ಸಿಗುತ್ತಿದೆ. ಏಕೆಂದರೆ, ಮೈಸೂರಿನಲ್ಲಿ 1938ರಲ್ಲಿ ಆರಂಭವಾಗಿರುವ ʼಒರಿಜಿನಲ್‌ ವಿನಾಯಕ ಮೈಲಾರಿʼ ದೋಸೆ ಹೋಟೆಲ್‌ ಬೆಂಗಳೂರಿಗೂ ಪ್ರವೇಶಿಸಿದೆ. ಇಂದಿರಾನಗರದ 80 ಅಡಿ ರಸ್ತೆಯ ಹಳೇ ತಿಪ್ಪಸಂದ್ರದಲ್ಲಿ ಈ ನೂತನ ಹೋಟೆಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ.

ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್‌ ಹೋಟೆಲ್‌ ಎಂಬ ಮೆಚ್ಚುಗೆ

ಜನವರಿ 23ರ ಶುಕ್ರವಾರ ಹೊಟೇಲ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಬೆಣ್ಣೆ ಖಾಲಿ ದೋಸೆ ಮತ್ತು ಕಾಶಿ ಹಲ್ವಾ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. 1938ರಲ್ಲಿ ಮೈಸೂರಿನಲ್ಲಿ ಆರಂಭವಾದ ಮೈಲಾರಿ ಹೋಟೆಲ್ ತನ್ನ ರುಚಿ ಹಾಗೂ ಗುಣಮಟ್ಟದ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ನನ್ನ ಕಾಲೇಜು ದಿನಗಳಲ್ಲಿ ಆಗಾಗ್ಗೆ ಈ ಹೋಟೆಲ್‌ಗೆ ಹೋಗುತ್ತಿದ್ದೆ, ಈಗಲೂ ಮೈಸೂರಿಗೆ ಹೋದ ವೇಳೆ ಬಿಡುವಾದಾಗ ಭೇಟಿ ನೀಡುತ್ತೇನೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡ ಸಿಎಂ, ನನ್ನೂರಿನ ಮೈಲಾರಿಯ ರುಚಿಕರ ತಿಂಡಿ ಸವಿಯುವ ಅವಕಾಶ ಬೆಂಗಳೂರಿನ ಜನರಿಗೆ ಈಗ ಸಿಗುತ್ತಿರುವುದು ಖುಷಿಯ ವಿಚಾರ, ಶುಭವಾಗಲಿʼ ಎಂದು ಹಾರೈಸಿದರು.

ಬೆಂಗಳೂರಿನ ನೂತನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿಯುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತಿತರ ಗಣ್ಯರು.

ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ಸಾನ್ನಿಧ್ಯ ವಹಿಸಿದ್ದರು.‌ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಕೂಡ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಗೌರಮ್ಮನವರು ಮೈಸೂರಿನ ನಜರ್‌ಬಾದ್‌ನಲ್ಲಿ 1938ರಲ್ಲಿ ಮೈಲಾರಿ ಹೋಟೆಲ್‌ ಆರಂಭಿಸಿದ್ದರು. ವಿಶೇಷ ರುಚಿಯ ಕಾರಣಕ್ಕೆ ಈ ಹೋಟೆಲ್‌ ಒಂದು ಪರಂಪರೆಯನ್ನೇ ಸೃಷ್ಟಿಸಿದ್ದು, ಅವರ ನಾಲ್ಕನೇ ತಲೆಮಾರಿನ ಸಚಿನ್ ಮತ್ತು ಸಿಂಧು ದಂಪತಿ ಅದನ್ನೀಗ ಬೆಂಗಳೂರಿಗೆ ವಿಸ್ತರಿಸಿದ್ದಾರೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ