ಒಳಗೇನಿದೆ!?

ಹೋಟೆಲ್ ಉದ್ಯಮಿ ರಾಧಾಕೃಷ್ಣ ಅಡಿಗರ ಯಶೋಗಾಥೆ ರವಿವಾರ ಲೋಕಾರ್ಪಣೆ

ಹೋಟೆಲ್ ಕನ್ನಡ, ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರದ ಶಂಕರನಾರಾಯಣದಿಂದ ದಶಕಗಳ ಹಿಂದೆ ರಾಜಧಾನಿ ಬೆಂಗಳೂರಿಗೆ ವಲಸೆ ಬಂದು, ತಮ್ಮ ಕಠಿಣ ಪರಿಶ್ರಮದಿಂದ ಹೋಟೆಲ್ ಉದ್ಯಮದಲ್ಲಿ ಹೊಸ ಇತಿಹಾಸ ಬರೆದ ರಾಧಾಕೃಷ್ಣ ಅಡಿಗ ಅವರ ಜೀವನಗಾಥೆ ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ.

ರಾಧಾಕೃಷ್ಣ ಅಡಿಗ: ಇಡ್ಲಿ ಕಾಫಿ ಪರಂಪರೆ – ಪಯಣ‘ ಎಂಬ ವಿಶೇಷ ಕೃತಿಯ ಲೋಕಾರ್ಪಣೆ ಸಮಾರಂಭ ಇದೇ ಏಪ್ರಿಲ್ 19ರ ರವಿವಾರದಂದು ಬೆಂಗಳೂರಿನ ಜಯನಗರದ ಆರ್.ವಿ. ಟೀಚರ್ಸ್ ಕಾಲೇಜ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಇದೂ ಓದಿ: ‘ಬ್ರಾಹ್ಮಣರ ಕಾಫಿ ಬಾರ್‌’@60; ಬೆಂಗಳೂರು ಹೋಟೆಲುಗಳ ಸಂಘದಿಂದ ಅಭಿನಂದನೆ

ಗಣ್ಯರ ಉಪಸ್ಥಿತಿ: ಮಂತ್ರಾಲಯದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ದೇವದಾಸ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪತ್ರಿಕೋದ್ಯಮಿ ಹಾಗೂ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಕೃತಿಯ ಕುರಿತು ಅವಲೋಕನ ನಡೆಸಿಕೊಡಲಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಪ್ರಮುಖ ಅತಿಥಿಗಳು: ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವ ಜಿ. ಪರಮೇಶ್ವರ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಖ್ಯಾತ ಹೋಮಿಯೋಪಥಿ ತಜ್ಞ ನಾಡೋಜ ಡಾ.ಬಿ.ಟಿ. ರುದ್ರೇಶ್, ಬ್ರಾಹ್ಮಣರ ಕಾಫಿ ಬಾರ್ ಮಾಲೀಕ ಶ್ರೀ ರಾಧಾಕೃಷ್ಣ ಅಡಿಗ ಹಾಗೂ ಗ್ರಂಥಕರ್ತ ವಿನಾಯಕ ಭಟ್ ತದ್ದಲಸೆ ಉಪಸ್ಥಿತರಿರಲಿದ್ದಾರೆ.

ಏನಿದು ಪುಸ್ತಕದ ವಿಶೇಷ?: ಹೋಟೆಲ್ ಉದ್ಯಮದಲ್ಲಿ ಸ್ಮರಣೀಯ ಪರಂಪರೆ ಹುಟ್ಟುಹಾಕಿದ ರಾಧಾಕೃಷ್ಣ ಅಡಿಗ ಅವರ ಬದುಕಿನ ಏಳುಬೀಳುಗಳು, ಕುಂದಾಪುರದಿಂದ ಬೆಂಗಳೂರಿನವರೆಗಿನ ಅವರ ಸವಾಲಿನ ಹಾದಿ ಮತ್ತು ಇಡ್ಲಿ-ಕಾಫಿ ಪರಂಪರೆಯನ್ನು ಬೆಳೆಸಿದ ಅಪೂರ್ವ ಕಥನವನ್ನು ಈ ಪುಸ್ತಕ ಒಳಗೊಂಡಿದೆ.

ಇದೂ ಓದಿ: ಇನ್ಮುಂದೆ ಪಿಎಫ್ ಹಣ ಪೂರ್ತಿ ಹಿಂಪಡೆಯಲು ಅವಕಾಶ: ಕಾರಣ ತಿಳಿಸದಿದ್ದರೂ ಲಭ್ಯ..

ಇದೂ ಓದಿ: ಇನ್ಮುಂದೆ ಬೆರಳಿಟ್ಟರೂ, ಮುಖ ತೋರಿಸಿದರೂ ಹಣ ಟ್ರಾನ್ಸ್‌ಫರ್: ಏನಿದು ಹೊಸ ಫೀಚರ್?‌

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ