ಹೋಟೆಲ್ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ನೈಸ್ ರಸ್ತೆಯ ಸೋಂಪುರ ವೃತ್ತದ ಬಳಿ ಇರುವ ‘ಶುದ್ಧ ತಿಂಡಿ’ ಹೋಟೆಲ್ ಭಾರಿ ಅಗ್ನಿ ಅನಾಹುತಕ್ಕೆ ಒಳಗಾಗಿದೆ.
ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಹೋಟೆಲ್ ಬಹುತೇಕ ಸುಟ್ಟು ಹೋಗಿದೆ. ಈ ಅವಘಡದಿಂದ ಅಂದಾಜು 10 ಲಕ್ಷ ರೂ. ಮೊತ್ತದ ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಉದ್ಘಾಟನೆಯಾಗಿ ಇನ್ನೂ ಒಂದು ತಿಂಗಳು ಕೂಡ ಆಗಿರದ ಈ ಹೋಟೆಲ್‌ನಲ್ಲಿ ಧಗಧಗಿಸುತ್ತಿದ್ದ ಬೆಂಕಿಯ ಜ್ವಾಲೆಯನ್ನು ಅಂಜನಾಪುರದ ಅಗ್ನಿಶಾಮಕ ದಳದವರು ಧಾವಿಸಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸಿದ್ದಾರೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಅದೃಷ್ಟವಶಾತ್ ಅವಘಡ ವೇಳೆ ಯಾವ ಪ್ರಾಣಾಪಾಯ ಸಂಭವಿಸಿಲ್ಲ. ಸಮಯ ಪ್ರಜ್ಞೆಯಿಂದ ಎಲ್ಲರೂ ಪಾರಾಗಿದ್ದಾರೆ. ಅಡುಗೆ ಒಲೆಯ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಇದೂ ಓದಿ: ಏನನ್ನು ತಿನ್ನಬೇಕು/ತಿನ್ನಬಾರದು ಅಂತ ಕೂಡ ತಿಳಿಸುತ್ತೆ ಈ ಎಐ!; ಏನಿದು ಬಫೆ-ಜಿಪಿಟಿ?
ಬಿಎಚ್‌ಎ ನೈತಿಕ ಬೆಂಬಲ: ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಶುಕ್ತವಾರ ʼಶುದ್ಧ ತಿಂಡಿʼ ಹೋಟೆಲ್‌ಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದಲ್ಲದೆ, ಹೋಟೆಲ್ ಮಾಲೀಕ ನವೀನ್ ಅವರನ್ನು ಭೇಟಿಯಾಗಿ ಸಂತೈಸಿ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.


ಇಂದು ನಾವು ಅನಿರೀಕ್ಷಿತ ಹಿನ್ನಡೆ ಎದುರಿಸಿದ್ದೇವೆ. ಆದರೆ ನಾವು ಫೀನಿಕ್ಸ್‌ನಂತೆ ಬಲಶಾಲಿಯಾಗಿ ಪುಟಿದೇಳುತ್ತೇವೆ. ಉತ್ತಮವಾಗಿ ಸೇವೆ ಮಾಡಲು ನಾವು ಇನ್ನಷ್ಟು ಪ್ರೀತಿಯೊಂದಿಗೆ ಶೀಘ್ರದಲ್ಲೇ ಮರಳುತ್ತೇವೆ ಎಂದು ‘ಶುದ್ಧ ತಿಂಡಿ’ ಆಡಳಿತ ಮಂಡಳಿ ತಿಳಿಸಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಹೋಟೆಲ್-ರೆಸ್ಟೋರೆಂಟ್ ಬಿಲ್‌ನಲ್ಲಿ ‘ಗ್ಯಾಸ್ ಶುಲ್ಕ’ ವಿಧಿಸುವಂತಿಲ್ಲ: ಸಿಸಿಪಿಎ ಖಡಕ್ ಎಚ್ಚರಿಕೆ
ಇದೂ ಓದಿ: ‘ಬ್ರಾಹ್ಮಣರ ಕಾಫಿ ಬಾರ್’@60; ಬೆಂಗಳೂರು ಹೋಟೆಲುಗಳ ಸಂಘದಿಂದ ಅಭಿನಂದನೆ



