ಒಳಗೇನಿದೆ!?

ʼಬ್ರಾಹ್ಮಣರ ಕಾಫಿ ಬಾರ್ʼ ನನ್ನ ಬದುಕಿನ ಗತಿ ಬದಲಿಸಿದ ಸ್ಥಳ: ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್

ಹೋಟೆಲ್ ಕನ್ನಡ, ಬೆಂಗಳೂರು: ʼಬ್ರಾಹ್ಮಣರ ಕಾಫಿ ಬಾರ್ʼ ನನ್ನ ಬದುಕಿನ ಗತಿ ಬದಲಿಸಿದ ಸ್ಥಳ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್​ ಸ್ಮರಿಸಿಕೊಂಡಿದ್ದಾರೆ.

ಜಯನಗರದ ಆರ್.ವಿ.ಟೀಚರ್ಸ್​ ಕಾಲೇಜಿನಲ್ಲಿ ರವಿವಾರ ನಡೆದ ವಿನಾಯಕ ಭಟ್​ ತದ್ದಲಸೆ ರಚಿಸಿರುವ ‘ರಾಧಾಕೃಷ್ಣ ಅಡಿಗ: ಇಡ್ಲಿ, ಕಾಫಿ ಪರಂಪರೆ-ಪಯಣ’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದಾರೆ.

ನಾನು 1989ರಲ್ಲಿ ಆಗಷ್ಟೇ ಬೆಂಗಳೂರಿಗೆ ಬಂದಿದ್ದೆ. ಅಂದಿನ ಕನ್ನಡಪ್ರಭ ಸಂಪಾದಕರಾಗಿದ್ದ ವೈಎನ್​ಕೆ ಅವರಲ್ಲಿ ನಾನು ಕೆಲಸ ಕೇಳಿದ್ದೇ ಬ್ರಾಹ್ಮಣರ ಕಾಫಿ ಬಾರ್​ನಲ್ಲಿ. ಈ ಘಟನೆಯನ್ನು ವೈಎನ್​ಕೆ ಕೊನೆಯವರೆಗೂ ನೆನಪಿಸುತ್ತಿದ್ದರು ಎಂದು ವಿಶ್ವೇಶ್ವರ್ ಭಟ್ ಅವರು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಡರು.

ಇದೂ ಓದಿ: ‘ತಾಜಾ ತಿಂಡಿ’ಯೂ‌, ಖ್ಯಾತ ಐರಿಷ್‌ ಕವಿಯೂ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್‌!

ದೇಶದ ವಿವಿಧ ಭಾಗಗಳಿಂದ ಬರುವ ನೂರಕ್ಕೂ ಹೆಚ್ಚಿನ ಸ್ನೇಹಿತರಿಗೆ ‘ಬ್ರಾಹ್ಮಣರ ಕಾಫಿ ಬಾರ್​’ ಪರಿಚಯಿಸಿದ್ದೇನೆ. ಆರಂಭದಲ್ಲಿ ಚಿಕ್ಕ ಹೋಟೆಲ್​ ಎಂಬ ಕಾರಣಕ್ಕೆ ಹಿಂಜರಿಯುವ ಸ್ನೇಹಿತರು ಅಲ್ಲಿನ ರುಚಿ ಸವಿದ ಬಳಿಕ ಪದೇಪದೆ ಅವರೇ ಹುಡುಕಿಕೊಂಡು ಹೋಗುತ್ತಾರೆ. ಅಲ್ಲಿಗೆ ಭೇಟಿ ನೀಡುವುದು ಕೇವಲ ಇಡ್ಲಿ ತಿಂದು ಕಾಫಿ ಕುಡಿಯುವುದಕ್ಕೆ ಮಾತ್ರವಲ್ಲ, ಒಂದಷ್ಟು ಸ್ನೇಹಿತರ ಭೇಟಿಯಾಗುತ್ತದೆ. ಹೊಸ ಸಂಗತಿಗಳನ್ನು ತಿಳಿದಂತಾಗುತ್ತದೆ ಎಂಬುವುದೂ ಅಲ್ಲಿಗೆ ಭೇಟಿ ನೀಡುವ ಕಾರಣಗಳಲ್ಲೊಂದು ಎಂದೂ ಹೇಳಿದರು.

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಬಾಂಬೆ, ದೆಹಲಿ, ಚೆನ್ನೈ ಸೇರಿ ನಾನು ದೇಶದ ವಿವಿಧ ಮಹಾನಗರಗಳನ್ನು ಸುತ್ತಿದ್ದೇನೆ. ಆದರೆ, ಬೆಂಗಳೂರಿನಲ್ಲಿನ ದರ್ಶಿನಿ ಪರಂಪರೆ ಬೇರೆಲ್ಲೂ ಸಿಗುವುದಿಲ್ಲ. ನಮ್ಮ ಮನೆಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ದೋಸೆ ಗಟ್ಟಿ ಆಗಬಹುದು, ಚಟ್ನಿಯಲ್ಲಿ ಖಾರ ಹೆಚ್ಚು ಕಡಿಮೆ ಆಗಬಹುದು. ಆದರೆ, ಬ್ರಾಹ್ಮಣರ ಕಾಫಿ ಬಾರ್​ನಲ್ಲಿ ನಿರಂತರವಾಗಿ ಒಂದೇ ರುಚಿ ನೀಡುತ್ತಿರುವುದೇ ಅದರ ಯಶಸ್ಸಿನ ಗುಟ್ಟು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಬ್ರಾಹ್ಮಣರ ಕಾಫಿ ಬಾರ್​ ಕೇವಲ ಇಡ್ಲಿ-ವಡೆ, ಕಾಫಿ ನೀಡುವ ಜಾಗವಲ್ಲ. ಅದೊಂದು ಸಾಂಸ್ಕೃತಿಕ ಪರಂಪರೆ, ಮೌಲ್ಯಗಳನ್ನು ಬಿತ್ತುವ ಅಡ್ಡೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಉಚ್ಚ ನ್ಯಾಯಾಲಯದ ನ್ಯಾಯಾಧೀಶ ದೇವದಾಸ್​, ಚಿಕ್ಕಪೇಟೆ ಶಾಸಕ ಉದಯ್​ ಗರುಡಾಚಾರ್​, ಹೋಮಿಯೋಪಥಿ ತಜ್ಞ ಡಾ. ಬಿ.ಟಿ. ರುದ್ರೇಶ್​ ಮತ್ತು ಬ್ರಾಹ್ಮಣರ ಕಾಫಿ ಬಾರ್ ಮಾಲೀಕ ರಾಧಾಕೃಷ್ಣ ಅಡಿಗ, ಲೇಖಕ ವಿನಾಯಕ ಭಟ್ ತದ್ದಲಸೆ ಮುಂತಾದರು ಉಪಸ್ಥಿತರಿದ್ದರು.

ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಇದೂ ಓದಿ: ಏನನ್ನು ತಿನ್ನಬೇಕು/ತಿನ್ನಬಾರದು ಅಂತ ಕೂಡ ತಿಳಿಸುತ್ತೆ ಈ ಎಐ!; ಏನಿದು ಬಫೆ-ಜಿಪಿಟಿ?  

ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್‌ ಹೋಟೆಲ್‌ ಎಂಬ ಮೆಚ್ಚುಗೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ