ಬೆಂಗಳೂರು, ಹೋಟೆಲ್ ಕನ್ನಡ: ರಾಜ್ಯದಲ್ಲಿ ಹೋಟೆಲ್ಗಳಲ್ಲಿನ ತಿಂಡಿ-ತಿನಿಸುಗಳ ಬೆಲೆ ಅನಿವಾರ್ಯವಾಗಿ ಹೆಚ್ಚಿಸುವ ಪರಿಸ್ಥಿತಿ ಎದುರಾಗಿರುವುದರಿಂದ ಭವಿಷ್ಯದಲ್ಲಿ ಹೋಟೆಲ್ ತಿಂಡಿ-ತಿನಿಸುಗಳು ಭಾರಿ ದುಬಾರಿ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪರಿಷ್ಕೃತ ಕಾರ್ಮಿಕರ ಕನಿಷ್ಠ ವೇತನ ಏರಿಕೆ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಒಂದು ಪ್ಲೇಟ್ ಇಡ್ಲಿ ಬೆಲೆ 80 ರೂ., ಮಸಾಲೆ ದೋಸೆ ಬೆಲೆ 150 ಹಾಗೂ ಸಸ್ಯಾಹಾರಿ ಊಟದ ಬೆಲೆ 250ರಿಂದ 300 ಮತ್ತು ಬಿರಿಯಾನಿ ದರ 500 ರೂಪಾಯಿಗೆ ಏರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದೂ ಓದಿ: ಹೋಟೆಲ್ ಮಾಲೀಕರ ಮುಂದೀಗ ಎರಡು ಹೋರಾಟ: ಕೆಎಸ್ಎಚ್ಎ ಅಧ್ಯಕ್ಷ ಜಿ.ಕೆ. ಶೆಟ್ಟಿ
ಅವೈಜ್ಞಾನಿಕ ವೇತನ ಪರಿಷ್ಕರಣೆಯಿಂದ ಹೋಟೆಲ್ ಕ್ಷೇತ್ರಕ್ಕೆ ಸಮಸ್ಯೆ ಆಗಲಿದೆ. ಈಗ ಇರುವ ವೇತನಕ್ಕೆ ಹೋಲಿಸಿದರೆ ಸರ್ಕಾರ ಶೇ.60ಕ್ಕೂ ಅಧಿಕ ಹೆಚ್ಚಳ ಮಾಡಿದೆ, ಇದು ಸಂಕಷ್ಟದಲ್ಲಿರುವ ಉದ್ಯಮಕ್ಕೆ ಭಾರಿ ಹೊಡೆತ ನೀಡಲಿದೆ. ಪರಿಣಾಮವಾಗಿ ಆಹಾರಗಳ ಬೆಲೆ ಏರಿಸುವುದು ಅನಿವಾರ್ಯವಾಗಲಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಜಿ.ಕೆ.ಶೆಟ್ಟಿ ಆಗ್ರಹಿಸಿದ್ದಾರೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಎಲ್ಪಿಜಿ ಸಿಲಿಂಡರ್ಗಳ ಬೆಲೆ 1,884ರೂ. ನಿಂದ 3,152ರೂ.ಗೆ ಏರಿಕೆಯಾಗಿದೆ. ದಿನಸಿ, ವಿದ್ಯುತ್ ದರ ಮತ್ತು ಕಸದ ಸೆಸ್ಗಳೂ ಏರಿಕೆಯಾಗಿವೆ. ಕನಿಷ್ಠ ವೇತನ ಹೆಚ್ಚಳ ಜಾರಿ ಸಂದರ್ಭದಲ್ಲಿ ಕ್ಷೇತ್ರವನ್ನು ಪ್ರತ್ಯೇಕ ವರ್ಗವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಸರ್ಕಾರ ಅದನ್ನು ಪರಿಗಣಿಸಿಲ್ಲ. ಹೋಟೆಲ್ ಮಾಲೀಕರು ಮತ್ತು ಗ್ರಾಹಕರಿಗೆ ಉಂಟಾಗಬಹುದಾದ ನಷ್ಟ ತಡೆಯಲು ಸರ್ಕಾರ ವೇತನ ಪರಿಷ್ಕರಣೆ ಮರು ಪರಿಶೀಲಿಸಬೇಕು ಎಂದು ರಾಜ್ಯ ಹೋಟೆಲ್ಗಳ ಸಂಘ ಮನವಿ ಮಾಡಿಕೊಂಡಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಅವೈಜ್ಞಾನಿಕ ಪರಿಷ್ಕರಣೆ: ಸರ್ಕಾರವು ಕನಿಷ್ಠ ವೇತನವನ್ನು ತಾಲೂಕು ಮಟ್ಟದ (ವಲಯ 3) ಕಾರ್ಮಿಕರಿಗೆ 19,300ರಿಂದ 23,376 ರೂ.ಗೆ, ವಲಯ 1ರಲ್ಲಿ ಅತ್ಯಂತ ಪರಿಣತಿ ಹೊಂದಿದ ಕಾರ್ಮಿಕರಿಗೆ 31,100ರೂ. ತನಕ ವೇತನ ಏರಿಸಿದೆ. ಇದನ್ನು ಭರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹೋಟೆಲ್ ಗಳ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ನೌಕರರಿಗಿವೆ ಹಲವಾರು ಸೌಲಭ್ಯಗಳು: ಹೋಟೆಲ್ ಉದ್ಯಮವು ಈಗಾಗಲೇ ಕಾರ್ಮಿಕರಿಗೆ ಆಹಾರ, ವಸತಿ, ಸಮವಸ್ತ್ರ ಹಾಗೂ ಸ್ವಚ್ಛತಾ ಭತ್ಯೆ ಸೇರಿ ಹಲವು ಸವಲತ್ತುಗಳನ್ನು ನೀಡುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿ ಹೋಟೆಲ್ ಕ್ಷೇತ್ರದಿಂದ ಆಗಿದೆ, ಈ ಅವೈಜ್ಞಾನಿಕ ವೇತನ ಹೆಚ್ಚಳವು ಹೋಟೆಲ್ ಕ್ಷೇತ್ರದ ಮೇಲೆ ಮಾಡಿರುವ ಗದಾಪ್ರಹಾರವಾಗಿದೆ. ವಾಸ್ತವ ಸ್ಥಿತಿ ಪರಿಗಣಿಸಿ ಸರ್ಕಾರ ಪರಿಷ್ಕರಣೆ ಮಾಡಲೇಬೇಕಿದೆ ಎಂದು ಸಂಘ ಒತ್ತಾಯಿಸಿದೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಮುಟ್ಟಿನ ರಜೆಗಾಗಿ ಕೋರ್ಟ್ ಮೆಟ್ಟಿಲೇರಿದ ಹೋಟೆಲ್ ಉದ್ಯೋಗಿ: ಸರ್ಕಾರಕ್ಕೆ ನೋಟಿಸ್ ಜಾರಿ
ಇದೂ ಓದಿ: ʼಬ್ರಾಹ್ಮಣರ ಕಾಫಿ ಬಾರ್ʼ ನನ್ನ ಬದುಕಿನ ಗತಿ ಬದಲಿಸಿದ ಸ್ಥಳ: ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್



