ಹೋಟೆಲ್ ಕನ್ನಡ, ಬೆಂಗಳೂರು: ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳಾದ ಸ್ವಿಗ್ಗಿ-ಜೊಮ್ಯಾಟೊಗಳಿಂದಾಗಿ ನೊಂದಿರುವ ಹೋಟೆಲ್ ಉದ್ಯಮಿಗಳಿಗೆ ಸ್ಪಂದಿಸಲು ಮುಂದಾಗಿರುವ ಸ್ವಿಗ್ಗಿ ಸಂಸ್ಥೆ, ರಾಜಧಾನಿ ಬೆಂಗಳೂರಿನಲ್ಲಿ ಮೂರು ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ. ಬೆಂಗಳೂರು ಹೋಟೆಲುಗಳ ಸಂಘದ ಕಚೇರಿಯಲ್ಲಿ ಮಾತ್ರವಲ್ಲದೆ, ರಾಜಾಜಿನಗರ ಹಾಗೂ ಕೋರಮಂಗಲಗಳಲ್ಲಿ ಈ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಹೋಟೆಲ್ ಉದ್ಯಮಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ವಿಗ್ಗಿ-ಜೊಮ್ಯಾಟೊ ಸಂಸ್ಥೆಗಳವರು ನಮಗೆ ಸ್ಪಂದಿಸದಿದ್ದರೆ ಆ.15ರ ಬಳಿಕ ಸ್ವಿಗ್ಗಿ-ಜೊಮ್ಯಾಟೊ ಜೊತೆ ವ್ಯವಹಾರ ಸಂಪೂರ್ಣ ಕಡಿತಗೊಳಿಸುವುದಾಗಿ ಹೋಟೆಲ್ ಉದ್ಯಮಿಗಳು ಎಚ್ಚರಿಕೆ ನೀಡಿದ ಬಳಿಕ ನಡೆದ ಮಾತುಕತೆ ನಂತರ ಈ ಸಹಾಯ ಕೇಂದ್ರಗಳು ಸ್ಥಾಪನೆಯಾಗಿವೆ.
ಇದೂ ಓದಿ: ಸಮಸ್ಯೆ ಬಗೆಹರಿಯದಿದ್ದರೆ ಆ.15ರಿಂದ ಸ್ವಿಗ್ಗಿ-ಜೊಮ್ಯಾಟೊ ಜೊತೆ ಹೋಟೆಲಿಗರ ವ್ಯವಹಾರ ಸಂಪೂರ್ಣ ಬಂದ್
ಬೆಂಗಳೂರು ಹೋಟೆಲುಗಳ ಸಂಘ, ಕೋರಮಂಗಲ ಹಾಗೂ ರಾಜಾಜಿನಗರದಲ್ಲಿ ತೆರೆಯಲಾಗಿರುವ ಸ್ವಿಗ್ಗಿ ಹೆಲ್ಪ್‌ಡೆಸ್ಕ್‌ಗಳು ಆ.14ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿವೆ. ಹೋಟೆಲ್ ಉದ್ಯಮಿಗಳು ಈ ಸಹಾಯ ಕೇಂದ್ರಗಳಿಗೆ ಬಂದು ಸ್ವಿಗ್ಗಿ ಪ್ರತಿನಿಧಿಗಳಿಗೆ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಸ್ವಿಗ್ಗಿಯ ಪ್ರತಿನಿಧಿ ತಮೀಮ್ ಅಹಮದ್ ತಿಳಿಸಿದ್ದಾರೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಸ್ವಿಗ್ಗಿ ಸಹಾಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಅವುಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹೋಟೆಲ್ ಉದ್ಯಮಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಮತ್ತು ಗೌರವ ಕಾರ್ಯದರ್ಶಿ ಎನ್. ವೀರೇಂದ್ರ ಕಾಮತ್ ವಿನಂತಿಸಿಕೊಂಡಿದ್ದಾರೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಸಹಾಯ ಕೇಂದ್ರಗಳ ಲೊಕೇಷನ್ ಪಡೆಯಲು ಈ ಕೆಳಗಿನ ಹೆಸರುಗಳ ಮೇಲೆ ಕ್ಲಿಕ್ ಮಾಡಿ.
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ʼಬ್ರಾಹ್ಮಣರ ಕಾಫಿ ಬಾರ್ʼ ನನ್ನ ಬದುಕಿನ ಗತಿ ಬದಲಿಸಿದ ಸ್ಥಳ: ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್
ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ



