ಒಳಗೇನಿದೆ!?

ಬೆಂಗಳೂರಿನ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ: ಕೊಳೆತ ತರಕಾರಿ, ಅವಧಿ ಮುಗಿದ ಮಾಂಸ ಜಪ್ತಿ

ಸ್ಟಾರ್‌ ಹೋಟೆಲೊಂದರಲ್ಲಿ ಅಧಿಕಾರಿಗಳಿಂದ ತಪಾಸಣೆ

ಹೋಟೆಲ್‌ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಅವಧಿ ಮುಗಿದ ಹಾಗೂ ಕಳಪೆ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ಮಾರ್ಗದರ್ಶನದಲ್ಲಿ ಆಗಸ್ಟ್‌ 7, 8 ಮತ್ತು 9ರಂದು ಸತತ ಮೂರು ದಿನಗಳ ಕಾಲ ಈ ಕಾರ್ಯಾಚರಣೆ ನಡೆದಿದ್ದು, ಇದಕ್ಕಾಗಿ ಒಟ್ಟು 30 ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು.

ಇದೂ ಓದಿ: ಕೆಲವು ಸ್ಟಾರ್‌ ಹೋಟೆಲ್‌ಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ, ಸ್ವಚ್ಛತೆ ಇರದ ಕಿಚನ್!

ಬೆಂಗಳೂರು ನಗರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಒಟ್ಟು 60 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ, ವ್ಯಾಪಕ ತಪಾಸಣೆ ನಡೆಸಲಾಗಿದೆ. ಈ ವೇಳೆ ಕೋಳಿ-ಕುರಿ ಮಾಂಸ, ಮೀನು, ಬ್ರೆಡ್, ಮಯೋನೇಸ್, ಅಡುಗೆ ಎಣ್ಣೆ, ತಾಜಾ ಎಣ್ಣೆ, ಮೊಸರು ಸೇರಿ ಒಟ್ಟು 77 ಆಹಾರ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಇದೂ ಓದಿ: ಸ್ಟಾರ್‌ ಹೋಟೆಲ್‌ಗಳಿಗೆ ಆಹಾರ ಉತ್ಪನ್ನಗಳನ್ನು ಪೂರೈಸುತ್ತಿದ್ದ ಸಂಸ್ಥೆಗಳ ಮೇಲೆ ದಾಳಿ

ಕಂಡುಬಂದ ಉಲ್ಲಂಘನೆಗಳು
  • ಅವಧಿ ಮೀರಿದ ಪದಾರ್ಥಗಳು: ಎಫ್‌ಎಸ್‌ಎಸ್‌ಎಐ ನಿಯಮಗಳ ಪ್ರಕಾರ ಕೆಲವು ಪದಾರ್ಥಗಳಿಗೆ ಒಂದು ವರ್ಷದ ಅವಧಿ ಇದ್ದರೂ, ಎರಡು ವರ್ಷ ಅವಧಿ ಮೀರಿದ ಮತ್ತು ವಿದೇಶದಿಂದ ಆಮದು ಮಾಡಿಕೊಂಡು ರಿ-ಪ್ಯಾಕಿಂಗ್ ಮಾಡಿದ ಆಹಾರ ಪದಾರ್ಥಗಳೂ ಈ ಹೋಟೆಲ್‌ಗಳಲ್ಲಿ ಸಿಕ್ಕಿವೆ.
  • ಅಶುಚಿ ಹಾಗೂ ನಿರ್ಲಕ್ಷ್ಯ: ಸಸ್ಯಾಹಾರ ಮತ್ತು ಮಾಂಸಾಹಾರ ಪದಾರ್ಥಗಳನ್ನು ಪ್ರತ್ಯೇಕಿಸದೆ ಒಂದೇ ಕಡೆ ಸಂಗ್ರಹಿಸಿರುವುದು ಕೂಡ ಕಂಡುಬಂದಿದೆ.
  • ಕೊಳೆತ ತರಕಾರಿ: ತರಕಾರಿಗಳಲ್ಲಿ ಶಿಲೀಂಧ್ರ (ಫಂಗಸ್) ಬೆಳೆದಿರುವುದು ಹಾಗೂ ಆಹಾರ ತಯಾರಿಕಾ ಪ್ರದೇಶಗಳಲ್ಲಿ ಸ್ವಚ್ಛತೆ ಇಲ್ಲದ ಪರಿಸ್ಥಿತಿ ಪತ್ತೆಯಾಗಿದೆ.
  • ಲೇಬಲಿಂಗ್ ದೋಷ: ಕೃತಕ ಬಣ್ಣಗಳ ಬಳಕೆ, ಮೀನು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಲೋಪಗಳು ಕೂಡ ಪತ್ತೆಯಾಗಿವೆ.

ಇದೂ ಓದಿ:ಬೆಳಗಾವಿಗೆ ಸುಸ್ವಾಗತ: ಐಟಿಸಿ ಹೋಟೆಲ್ಸ್‌ ಸಹಭಾಗಿತ್ವದಲ್ಲಿ ಐಷಾರಾಮಿ ʼವೆಲ್‌ಕಮ್‌ ಹೋಟೆಲ್‌ʼ

ಜಪ್ತಿ ಮಾಡಲಾದ ಆಹಾರ ಪದಾರ್ಥಗಳು
  • ಲೇಬಲ್‌ ಇಲ್ಲದ, ವಾಯಿದೆ ಇರದ, ಅವಧಿ ಮುಗಿದ ಚಿಕನ್‌, ಮಟನ್‌, ಮೀನು: 640 ಕೆ.ಜಿ.
  • ಕೊಳೆತ/ಫಂಗಸ್‌ ಹಿಡಿದ ತರಕಾರಿಗಳು: 276 ಕೆ.ಜಿ.
  • ಅವಧಿ ಮುಗಿದ ಹಾಲು/ಮೊಸಲು: 45 ಲೀಟರ್‌
  • ಅವಧಿ ಮುಗಿದ ಬೇಕರಿ ಉತ್ಪನ್ನಗಳು: 12 ಕೆ.ಜಿ.
  • ಮಿಸ್‌ಲೇಬಲ್‌/ಅವಧಿ ಮುಗಿದ ಧಾನ್ಯಗಳು: 12 ಕೆ.ಜಿ.
  • ನಿಯಮಬಾಹಿರ ಅಡುಗೆ ಎಣ್ಣೆ: 49 ಲೀಟರ್

ಇದೂ ಓದಿ: ವಿತ್ತ ಸಚಿವೆ ಜೊತೆ ಹೋಟೆಲೋದ್ಯಮಿಗಳ ಸಂವಾದ; ಗಮನ ಸೆಳೆದ ಸಂಗತಿ ಇದು…

ಹೋಟೆಲೊಂದರಲ್ಲಿ ಕಂಡುಬಂದ ಅವಧಿಮುಗಿದ ಆಹಾರ ಪದಾರ್ಥ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೂ ತಟ್ಟಿದ ಬಿಸಿ

ಕಿಚನ್ ಸೀಜ್: ತಪಾಸಣೆಯ ಸಂದರ್ಭ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಹೋಟೆಲ್‌ ಸ್ಕೈ, ಯುಬಿ ಸಿಟಿ ಹಾಗೂ ಪೆಗ್ಸ್‌ & ಬಾಟಲ್ಸ್‌ನ ಕಿಚನ್‌ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ತಪಾಸಣೆ: ಗ್ಲೋಬಲ್ ಬ್ರ್ಯಾಂಡ್‌ಗಳಾದ ಕೆಎಫ್‌ಸಿ, ಮೆಕ್‌ ಡೊನಾಲ್ಡ್ಸ್‌, ಸಬ್‌ ವೇ ಮಳಿಗೆಗಳಲ್ಲೂ ತಪಾಸಣೆ ನಡೆಸಲಾಗಿದ್ದು, ಗೋದಾಮುಗಳನ್ನು ಪರಿಶೀಲಿಸಲಾಗಿದೆ ಮತ್ತು ಆಹಾರದ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಮೆಕ್‌ ಡೊನಾಲ್ಡ್ಸ್‌ಗೆ ನೋಟಿಸ್: ಬ್ರಿಗೇಡ್ ರಸ್ತೆಯಲ್ಲಿರುವ ಮೆಕ್‌ಡೊನಾಲ್ಡ್ಸ್ ಘಟಕದಲ್ಲಿ ಕರಿದ ಅಡುಗೆ ಎಣ್ಣೆ ಸಂಸ್ಕರಿಸಲು/ಶುದ್ಧೀಕರಿಸಲು ‘ಮೆಗ್ನೀಷಿಯಂ ಸಲ್ಫೈಟ್’ (Magnesium Sulfite – MgSO3) ಬಳಸುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ನಿಯಮಾನುಸಾರ ನೋಟಿಸ್ ಜಾರಿಗೊಳಿಸಲಾಗಿದೆ. ಕಾನೂನು ಕ್ರಮ: ನಿಯಮ ಉಲ್ಲಂಘಿಸಿರುವ ಸಂಬಂಧಿತ ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದ್ದು, ಮುಂದಿನ ಕಠಿಣ ಕಾನೂನು ಕ್ರಮಕ್ಕಾಗಿ ನ್ಯಾಯ ನಿರ್ಣಯಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಇದೂ ಓದಿ: ಸಮಸ್ಯೆ ಬಗೆಹರಿಯದಿದ್ದರೆ ಆ.15ರಿಂದ ಸ್ವಿಗ್ಗಿ-ಜೊಮ್ಯಾಟೊ ಜೊತೆ ಹೋಟೆಲಿಗರ ವ್ಯವಹಾರ ಸಂಪೂರ್ಣ ಬಂದ್‌

ಇದೂ ಓದಿ:ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಹೋಟೆಲ್‌ ಉದ್ಯಮಿಗಳಿಗೆ ಸ್ಪಂದಿಸಲು ಮೂರು ಸಹಾಯ ಕೇಂದ್ರ ತೆರೆದ ಸ್ವಿಗ್ಗಿ; ಇಲ್ಲಿದೆ ವಿವರ..

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ