ಹೋಟೆಲ್ ಕನ್ನಡ, ಬೆಂಗಳೂರು: ಇತ್ತೀಚೆಗೆ ರಾಜ್ಯಾದ್ಯಂತ ಹೋಟೆಲ್-ರೆಸ್ಟೋರೆಂಟ್ಗಳಲ್ಲಿ ನಡೆದ ತಪಾಸಣೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಸ್ವಚ್ಛತೆ ಇಲ್ಲದಿರುವುದು ಪತ್ತೆಯಾದ್ದರಿಂದ ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ರಾಜ್ಯದ ಎಲ್ಲ ಹೋಟೆಲ್-ರೆಸ್ಟೋರೆಂಟ್ಗಳು, ಢಾಬಾಗಳು ಮತ್ತು ಇತರ ಆಹಾರ ಸೇವಾ ಕೇಂದ್ರಗಳು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಇದೂ ಓದಿ: ಸಮಸ್ಯೆ ಬಗೆಹರಿಯದಿದ್ದರೆ ಆ.15ರಿಂದ ಸ್ವಿಗ್ಗಿ-ಜೊಮ್ಯಾಟೊ ಜೊತೆ ಹೋಟೆಲಿಗರ ವ್ಯವಹಾರ ಸಂಪೂರ್ಣ ಬಂದ್
ಪಾಲಿಸಬೇಕಾದ ಪ್ರಮುಖ ನಿಯಮಗಳು
ಪರವಾನಗಿ ಪ್ರದರ್ಶನ: ಆಹಾರ ವ್ಯವಹಾರದ ಪರವಾನಗಿ ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವಂತೆ ಸಂಸ್ಥೆಯ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸುವುದು ಕಡ್ಡಾಯ.
ಸ್ವಚ್ಛ ಸ್ಥಳ: ಅಡುಗೆ ಮನೆಯನ್ನು ಸದಾ ಸ್ವಚ್ಛವಾಗಿರಿಸಬೇಕು ಹಾಗೂ ಸಾಕಷ್ಟು ಗಾಳಿಯಾಡುವಂತೆ ನಿರ್ವಹಿಸಬೇಕು. ಪಾತ್ರೆಗಳನ್ನು ತೊಳೆಯಲು ಮತ್ತು ಕಚ್ಚಾ ಪದಾರ್ಥಗಳನ್ನು ಸ್ವಚ್ಛಗೊಳಿಸಲು ಪ್ರತ್ಯೇಕ ಸಿಂಕ್ಗಳ ವ್ಯವಸ್ಥೆ ಇರಬೇಕು.
ಇದೂ ಓದಿ: ಹೋಟೆಲ್ ಉದ್ಯಮಿಗಳಿಗೆ ಸ್ಪಂದಿಸಲು ಮೂರು ಸಹಾಯ ಕೇಂದ್ರ ತೆರೆದ ಸ್ವಿಗ್ಗಿ; ಇಲ್ಲಿದೆ ವಿವರ..
ಗುಣಮಟ್ಟದ ಕಚ್ಚಾ ಪದಾರ್ಥ: ಉತ್ತಮ ಗುಣಮಟ್ಟದ ಕಚ್ಚಾ ಪದಾರ್ಥಗಳನ್ನು ಖರೀದಿಸಬೇಕು ಮತ್ತು ಹಣ್ಣು, ತರಕಾರಿಗಳನ್ನು ಬಳಸುವ ಮುನ್ನ ಶುಚಿಯಾಗಿ ತೊಳೆಯಬೇಕು. ಅಗತ್ಯವಿಲ್ಲದ ರಾಸಾಯನಿಕ ಮತ್ತು ಬಣ್ಣಗಳ ಬಳಕೆ ನಿಷೇಧಿಸಲಾಗಿದೆ.
ಪ್ರತ್ಯೇಕ ಅಡುಗೆ-ಸಂಗ್ರಹಣೆ: ಸಸ್ಯಾಹಾರ ಮತ್ತು ಮಾಂಸಾಹಾರ ತಯಾರಿಕೆ ಪ್ರತ್ಯೇಕವಾಗಿ ನಿರ್ವಹಿಸಬೇಕು. ಎರಡಕ್ಕೂ ಬೇರೆ ಬೇರೆ ಚಾಪಿಂಗ್ ಬೋರ್ಡ್ ಮತ್ತು ಪಾತ್ರೆಗಳನ್ನು ಬಳಸಬೇಕು.
ಇದೂ ಓದಿ: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಎಣ್ಣೆ ಮರುಬಳಕೆಗೆ ತಡೆ: ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು ಹಾಗೂ ಬಳಸಿದ ಎಣ್ಣೆಯನ್ನು ಅಧಿಕೃತ ಮಾರ್ಗಗಳ ಮೂಲಕವೇ ವಿಲೇವಾರಿ ಮಾಡಬೇಕು.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಸಿಬ್ಬಂದಿ ನೈರ್ಮಲ್ಯ ಮತ್ತು ಆರೋಗ್ಯ: ಆಹಾರ ನಿರ್ವಹಿಸುವ ಸಿಬ್ಬಂದಿ ಸ್ವಚ್ಛ ಸಮವಸ್ತ್ರ, ಹೇರ್ನೆಟ್/ಕ್ಯಾಪ್ ಮತ್ತು ಅಗತ್ಯವಿದ್ದಲ್ಲಿ ಮಾಸ್ಕ್ ಧರಿಸಬೇಕು. ಸಿಬ್ಬಂದಿಯ ಉಗುರುಗಳು ಕತ್ತರಿಸಿರಬೇಕು ಹಾಗೂ ವಾರ್ಷಿಕ ವೈದ್ಯಕೀಯ ಫಿಟ್ನೆಸ್ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ.
ಇದೂ ಓದಿ: ಏನನ್ನು ತಿನ್ನಬೇಕು/ತಿನ್ನಬಾರದು ಅಂತ ಕೂಡ ತಿಳಿಸುತ್ತೆ ಈ ಎಐ!; ಏನಿದು ಬಫೆ-ಜಿಪಿಟಿ?
ಕುಡಿಯುವ ನೀರು-ಶೌಚಾಲಯ: ಅಡುಗೆಗೆ ಮತ್ತು ಕುಡಿಯಲು ಯೋಗ್ಯವಾದ, ಸುರಕ್ಷಿತ ನೀರನ್ನೇ ಬಳಸಬೇಕು. ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿರಬೇಕು ಹಾಗೂ ಕುದಿಸಿ ಆರಿಸಿದ ನೀರನ್ನು ಕಡ್ಡಾಯವಾಗಿ ನೀಡಬೇಕು. ಗ್ರಾಹಕರಿಗೆ ಉಚಿತ ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಅದನ್ನು ಸದಾ ಸ್ವಚ್ಛವಾಗಿ ಇಟ್ಟಿರಬೇಕು.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಕೀಟ ನಿಯಂತ್ರಣ, ತ್ಯಾಜ್ಯ ನಿರ್ವಹಣೆ: ನಿಯಮಿತವಾಗಿ ಕೀಟ ನಿಯಂತ್ರಣ (Pest Control) ಮಾಡಿಸಬೇಕು. ಕಸದ ಬುಟ್ಟಿಗಳನ್ನು ಮುಚ್ಚಳದೊಂದಿಗೆ ಇಡಬೇಕು ಹಾಗೂ ಅಡುಗೆಮನೆಯ ತ್ಯಾಜ್ಯವನ್ನು ದೀರ್ಘಕಾಲ ಸಂಗ್ರಹಿಸದೆ ವಿಲೇವಾರಿ ಮಾಡಬೇಕು.
ಕಠಿಣ ಕ್ರಮದ ಎಚ್ಚರಿಕೆ
ಈ ಮೇಲ್ಕಂಡ ಆಹಾರ ಸುರಕ್ಷತೆ, ನೈರ್ಮಲ್ಯ ಮತ್ತು ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆಯ ನಿಯಮಗಳನ್ನು ಉಲ್ಲಂಘಿಸಿದರೆ, ಕಳಪೆ ಆಹಾರ ನೀಡಿದರೆ ಅಥವಾ ಸುರಕ್ಷಿತವಲ್ಲದ ನೀರು ಬಳಸಿದರೆ ಅಂಥ ಹೋಟೆಲ್ಗಳು ಮತ್ತು ಢಾಬಾಗಳ ವಿರುದ್ಧ ನಿಯಮಗಳ ಪ್ರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಬೆಂಗಳೂರಿನ 60 ಸ್ಟಾರ್ ಹೋಟೆಲ್ಗಳ ಮೇಲೆ ದಿಢೀರ್ ದಾಳಿ: ಕೊಳೆತ ತರಕಾರಿ, ಅವಧಿ ಮುಗಿದ ಮಾಂಸ ಜಪ್ತಿ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ



