ಒಳಗೇನಿದೆ!?

ಹೋಟೆಲುಗಳ ಪ್ರತಿನಿಧಿಗಳ ಜೊತೆ ಆರೋಗ್ಯ ಸಚಿವರ ಮಹತ್ವದ ಸಭೆ; ಇಲ್ಲಿದೆ ವಿವರ…

U T Khader
Health Minister U T Khader

ಹೋಟೆಲ್‌ ಕನ್ನಡ, ಬೆಂಗಳೂರು:  ರಾಜ್ಯದಲ್ಲಿನ ಪ್ರಮುಖ ಹೋಟೆಲ್‌ಗಳ ಪ್ರತಿನಿಧಿಗಳು ಮತ್ತು ಹೋಟೆಲುಗಳ ಸಂಘದವರ ಜೊತೆ ಸಭೆ ನಡೆಸಿ ಚರ್ಚಿಸಿರುವ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರು, ಸಾರ್ವಜನಿಕರ ಆರೋಗ್ಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಆಹಾರ ಸುರಕ್ಷಾ ತಪಾಸಣೆ ಅಭಿಯಾನದಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ, ಬೆಂಗಳೂರು ಹೋಟೆಲುಗಳ ಸಂಘದ ಪದಾಧಿಕಾರಿಗಳು ಮತ್ತು ಬೆಂಗಳೂರಿನ ಪ್ರಮುಖ ಹೋಟೆಲ್‌ಗಳ ಪ್ರತಿನಿಧಿಗಳೊಂದಿಗೆ ಅವರು ಆರೋಗ್ಯ ಸೌಧದಲ್ಲಿ ಶುಕ್ರವಾರ ತುರ್ತು ಸಭೆ ನಡೆಸಿದರು.

ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..

ರಾಜ್ಯಾದ್ಯಂತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕು. ವಾಣಿಜ್ಯ ಹಿತಾಸಕ್ತಿಗಳಿಗಾಗಿ ಸಾರ್ವಜನಿಕರ ಆರೋಗ್ಯ ವಿಚಾರದಲ್ಲಿ ರಾಜಿ ಇಲ್ಲ ಎಂದು ಸಚಿವರು ಈ ವೇಳೆ ತಿಳಿಸಿದರು.

ಇದೂ ಓದಿ: ಹೋಟೆಲ್‌-ರೆಸ್ಟೋರೆಂಟ್‌ಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಸರ್ಕಾರ: ಇಲ್ಲಿದೆ ವಿವರ..

ಹೋಟೆಲ್‌ ಕ್ಷೇತ್ರದವರ ಸಮಸ್ಯೆಗಳನ್ನು ಆಲಿಸಲು ಮತ್ತು ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲು ಸರ್ಕಾರ ಬದ್ಧವಾಗಿದೆ. ಆದರೆ, ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟದ ವಿಷಯದಲ್ಲಿ ರಾಜಿ ಆಗುವುದಿಲ್ಲಎಂದು ಸ್ಪಷ್ಟಪಡಿಸಿದರು.

ಇದೂ ಓದಿ: ಹೋಟೆಲ್‌ ಉದ್ಯಮಿ, ʼವೀಣಾ ಸ್ಟೋರ್ಸ್‌ʼ ಸಂಸ್ಥಾಪಕ ಸೂರ್ಯನಾರಾಯಣ ಹೆಗಡೆ ವಿಧಿವಶ

ಪ್ರತಿದಿನ ಲಕ್ಷಾಂತರ ಜನರು ಹೋಟೆಲ್‌-ರೆಸ್ಟೋರೆಂಟ್‌ ಆಹಾರ ಅವಲಂಬಿಸಿ ಬರುತ್ತಾರೆ. ಹೀಗಾಗಿ ಸ್ಟಾರ್‌ ಹೋಟೆಲ್‌ಗಳಿಂದ ಸಣ್ಣಪುಟ್ಟ ತಿನಿಸುಗಳನ್ನು ಮಾರಾಟ ಮಾಡುವವರೂ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆಯೂ ಗಮನಹರಿಸಬೇಕು ಎಂದರು.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಶುಕ್ರವಾರ ರಾಜ್ಯದ ಹೋಟೆಲುಗಳ ಸಂಘದ ಪದಾಧಿಕಾರಿಗಳು ಮತ್ತು ಬೆಂಗಳೂರಿನ ಪ್ರಮುಖ ಹೋಟೆಲ್‌ಗಳ ಪ್ರತಿನಿಧಿಗಳೊಂದಿಗೆ ಆರೋಗ್ಯ ಸಚಿವ ಯು.ಟಿ. ಖಾದರ್‌ ಸಭೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಆಹಾರ ಸುರಕ್ಷತೆಯನ್ನು ಕೇವಲ ವ್ಯವಹಾರದ ಅವಶ್ಯಕತೆಯಾಗಿ ಪರಿಗಣಿಸದೆ ಸಾಮಾಜಿಕ ಜವಾಬ್ದಾರಿಯಾಗಿ ಪರಿಗಣಿಸಬೇಕೆಂದು ಅವರು ಹೋಟೆಲ್‌ ನಿರ್ವಾಹಕರಿಗೆ ಸೂಚಿಸಿದ ಸಚಿವರು, ಹೋಟೆಲ್‌-ರೆಸ್ಟೋರೆಂಟ್‌ ಗಳು ವೈಜ್ಞಾನಿಕ ಶೇಖರಣಾ ಸೌಲಭ್ಯಗಳನ್ನು ಕಾಪಾಡಿಕೊಳ್ಳಲು ಮತ್ತು ತಮ್ಮ ಅಡುಗೆಮನೆಗಳಲ್ಲಿ ಬಳಸುವ ಪ್ರತಿ ಆಹಾರ ಪದಾರ್ಥವು ಉತ್ಪಾದನೆ ಮತ್ತು ಮುಕ್ತಾಯ ದಿನಾಂಕಗಳಂಥ ವಿವರಗಳನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೂ ಓದಿ:ರಾಜ್ಯದ ಎಲ್ಲ ಹೋಟೆಲ್‌-ರೆಸ್ಟೋರೆಂಟ್‌ಗಳಲ್ಲಿ ಈ ಕ್ಯೂಆರ್‌ ಕೋಡ್‌ ಪ್ರದರ್ಶನ ಕಡ್ಡಾಯ

ರೇಟಿಂಗ್‌ಗೂ ಇರಲಿ ಕ್ಯೂಆರ್‌ ಕೋಡ್ ವ್ಯವಸ್ಥೆ

ಗ್ರಾಹಕರು ಆಹಾರ ಗುಣಮಟ್ಟ ಮತ್ತು ನೈರ್ಮಲ್ಯ ಕುರಿತು ದೂರು ನೀಡಲು ಈಗಾಗಲೇ ಇರುವ ಕ್ಯೂಆರ್‌ ಕೋಡ್‌ ನಲ್ಲಿಯೇ ಉತ್ತಮ, ಸರಾಸರಿ ಅಥವಾ ಕಳಪೆ ಎಂದು ರೇಟಿಂಗ್‌ ಮಾಡಲು ಅನುವು ಮಾಡಿಕೊಡಬೇಕು ಎಂದು ಹೋಟೆಲ್‌ ನಿರ್ವಹಣಾ ಸಂಘದ ಪ್ರಸ್ತಾಪನೆಯನ್ನು ಸಚಿವರು ಪರಿಶೀಲಿಸಿದರು. ಗ್ರಾಹಕರು ಮತ್ತು ಹೋಟೆಲ್‌ ನಿರ್ವಾಹಕರು ಕಲಬೆರಕೆ ಅಥವಾ ಕಳಪೆ ಕಚ್ಚಾವಸ್ತುಗಳ ಪ್ರಕರಣಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಖಾದರ್‌ ತಿಳಿಸಿದರು.

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸಲಹೆ-ತಾಕೀತು..

ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ಗ್ರಾಹಕರ ವಿಶ್ವಾಸ ಹೆಚ್ಚಿಸಲು ಅಡುಗೆಮನೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ಪರಿಗಣಿಸಬೇಕು. ಅಡುಗೆಮನೆ ಮತ್ತು ಆಹಾರ ತಯಾರಿಸುವ ಪ್ರದೇಶಗಳನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಕಚ್ಚಾ ವಸ್ತುಗಳ ಗುಣಮಟ್ಟ ಖಚಿತಪಡಿಸಿಕೊಳ್ಳಬೇಕು. ಆಹಾರ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಬಳಸಬಾರದು. ಹೋಟೆಲ್‌ ಸಿಬ್ಬಂದಿಗೆ ಆಹಾರ ಸುರಕ್ಷತೆ ಮತ್ತು ಆಹಾರ ನಿರ್ವಹಣೆಯಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ನಿಯಮಿತ ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಮಧುಕರ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್.ವೀರೇಂದ್ರ ಕಾಮತ್‌, ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್‌.ಎಸ್.ಸುಬ್ರಹ್ಮಣ್ಯ ಹೊಳ್ಳ, ಹೋಟೆಲ್‌ ಉದ್ಯಮಿಗಳಾದ ರಾಧಾಕೃಷ್ಣ ಅಡಿಗ ಮುಂತಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ:ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ:ಕೆಲವು ಸ್ಟಾರ್‌ ಹೋಟೆಲ್‌ಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ, ಸ್ವಚ್ಛತೆ ಇರದ ಕಿಚನ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ