ಹೋಟೆಲ್ ಕನ್ನಡ, ಬೆಂಗಳೂರು: ಆಹಾರ ಮತ್ತು ಔಷಧ ಆಡಳಿತ ಇಲಾಖೆ ಮೂಲಕ ಆಹಾರ-ಔಷಧ ಕ್ಷೇತ್ರದಲ್ಲಿ ಸಾಕಷ್ಟು ಸುರಕ್ಷೆ ತರಲು ಹೊರಟಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹೋಟೆಲಿಗರು ಹಾಗೂ ಔಷಧ ಮಾರಾಟಗಾರರಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ರೆಸ್ಟೋರೆಂಟ್ ಹಾಗೂ ಫಾರ್ಮಸಿಗಳಲ್ಲಿ ಸಾರ್ವಜನಿಕರಿಗೆ ದೂರು ನೀಡಲು ಅನುಕೂಲ ಆಗುವಂತೆ ಆರೋಗ್ಯ ಇಲಾಖೆಯ ಕ್ಯೂಆರ್ ಕೋಡ್ ಕಡ್ಡಾಯವಾಗಿ ಅಳವಡಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ರಾಜ್ಯದಲ್ಲಿ ಆಹಾರ ಸುರಕ್ಷತಾ ಇಲಾಖೆಯು ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ತಯಾರಿಕಾ ಘಟಕಗಳಿಗೆ ತೆರಳಿ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿದೆ. ಇನ್ನು ಪೇಯಿಂಗ್ ಗೆಸ್ಟ್ಗಳಲ್ಲೂ ಇಲಾಖೆ ತಪಾಸಣೆ ನಡೆಸಲಿದೆ. ಕಳಪೆ ಪಡಿತರ ಅಕ್ಕಿ ಹಾಗೂ ಕೆಎಂಎಫ್ ಉತ್ಪನ್ನಗಳನ್ನೂ ತಪಾಸಣೆ ನಡೆಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೂ ಓದಿ: ರಾಜ್ಯದ ಎಲ್ಲ ಹೋಟೆಲ್-ರೆಸ್ಟೋರೆಂಟ್‌ಗಳಲ್ಲಿ ಈ ಕ್ಯೂಆರ್ ಕೋಡ್ ಪ್ರದರ್ಶನ ಕಡ್ಡಾಯ
ಕ್ಯೂಆರ್ ಕೋಡ್ ಮೂಲಕ ಬಂದ ದೂರಿನ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎರಡು ಕಡೆ ದಾಳಿ ನಡೆದಿದೆ. ವ್ಯಾಪಾರ ಬಂದ್ ಮಾಡಿಸಬೇಕೆಂಬುದು ನಮ್ಮ ಉದ್ದೇಶವಲ್ಲ. ಆದರೆ ಜನರಿಗೆ ಮೋಸ ಆಗಬಾರದು. ವ್ಯಾಪಾರಿಗಳೂ ಬದುಕು ಕಟ್ಟಿಕೊಳ್ಳಬೇಕು. ವ್ಯಾಪಾರದ ಮೂಲಕ ಅವರೂ ಸಮಾಜಕ್ಕೆ ಕೊಡುಗೆ ನೀಡಬೇಕು. ಹಾಗಾಗಿ ಇದೀಗ ಪ್ರಥಮ ಹಂತದಲ್ಲಿ ಕನಿಷ್ಠ ದಂಡದ ಮೂಲಕ ಎಚ್ಚರಿಕೆ ನೀಡುವ ಕ್ರಮ ಆಗುತ್ತಿದೆ ಎಂದು ತಿಳಿಸಿದರು.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಸುಸಜ್ಜಿತ ಲ್ಯಾಬ್‌ಗಾಗಿ ಯೋಜನೆ
ಆಹಾರ ಗುಣಮಟ್ಟ ತಪಾಸಣೆ ಸಂಬಂಧ ಸುಸಜ್ಜಿತ ಪ್ರಯೋಗಾಲಯ ಆರಂಭಿಸುವ ಯೋಜನೆ ಪ್ರಾಥಮಿಕ ಹಂತದಲ್ಲಿದೆ. ಕಳಪೆ ಆಹಾರ ಪೂರೈಕೆ ಸಂಬಂಧಿಸಿ ನಡೆಯುವ ದಾಳಿ ವೇಳೆ ಸಿಕ್ಕೀಬಿಳುವ ದೊಡ್ಡ ಕಂಪನಿಗಳು ನ್ಯಾಯಾಲಯದ ಮೂಲಕ ರಕ್ಷಣೆ ಪಡೆ̧̧ದು, ಲ್ಯಾಬ್ ಸರಿ ಇಲ್ಲ ಎಂಬ ಸಬೂಬು ನೀಡಿ ಬಚಾವ್ ಆಗುತ್ತಾರೆ. ಅದಕ್ಕೆ ಅವಕಾಶ ಆಗದಂತೆ ಸುಪ್ರೀಂ ಕೋರ್ಟ್ಗೆ ಹೋದರೂ ಪ್ರಯೋಗಾಲಯದ ವರದಿಯನ್ನು ಎತ್ತಿ ಹಿಡಿಯುವಷ್ಟು ಸುಸಜ್ಜಿತ ಪ್ರಯೋಗಾಲಯ ಅಸ್ತಿತ್ವಕ್ಕೆ ಬರಲಿದೆ ಎಂದು ಸಚಿವ ಖಾದರ್ ಹೇಳಿದರು.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?



