ಒಳಗೇನಿದೆ!?

ಮಾಜಿ ಸಚಿವ ದಿನೇಶ್‌ ಗುಂಡೂರಾವ್‌, ಐಎಎಸ್‌ ಅಧಿಕಾರಿ ಜಗದೀಶ್‌ ಅವರಿಂದ ʼಡರ್ಬಿಸ್‌ ಕ್ಲಬ್‌ ಸಂಡೇಸ್‌ʼ ಉದ್ಘಾಟನೆ

ದಿನೇಶ್‌ ಗುಂಡೂರಾವ್‌ ಅವರಿಂದ ಉದ್ಘಾಟನೆ

ಹೋಟೆಲ್‌ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ʼಡರ್ಬಿಸ್‌ ಕ್ಲಬ್‌ ಸಂಡೇಸ್‌ʼ ಹಾಗೂ ʼಕುತ್ಪಾಡಿಸ್‌ ಕೇಕ್‌ ಡರ್ಬಿʼಯನ್ನು ಮಾಜಿ ಸಚಿವ, ಶಾಸಕರೂ ಆಗಿರುವ ದಿನೇಶ್‌ ಗುಂಡೂರಾವ್‌ ಹಾಗೂ ಬೆಂಗಳೂರು ಸೆಂಟ್ರಲ್‌ ಸಿಟಿ ಕಾರ್ಪೊರೇಷನ್‌ ಆಯುಕ್ತ ಜಿ. ಜಗದೀಶ್‌ ಅವರು ಉದ್ಘಾಟಿಸಿದ್ದಾರೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್‌ನ ಎನ್.ಎಸ್. ಅಯ್ಯಂಗಾರ್ ರಸ್ತೆಯಲ್ಲಿ ನೆಹರೂ ವೃತ್ತ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ‘ಡರ್ಬಿಸ್ ಕ್ಲಬ್ ಸಂಡೇಸ್’ (Derby’s Club Sundaes) ಮತ್ತು ‘ಕೇಕ್ ಡರ್ಬಿ’ (Cake Derby) ಉದ್ಘಾಟನೆ ಸೆ.13ರ ಶನಿವಾರ ವಿಶೇಷವಾಗಿ ನೆರವೇರಿತು.

ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ಅವರಿಂದ ʼಡರ್ಬಿಸ್‌ ಕೇಕ್‌ ಸಂಡೇಸ್‌ʼ ಉದ್ಘಾಟನೆ.

ಈ ಶುಭ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಿದ ಮಾಜಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಆಯುಕ್ತರಾದ ಜಿ.ಜಗದೀಶ್‌ ಅವರು, ಕುತ್ಪಾಡಿ ಕುಟುಂಬದ ಈ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹಾಗೂ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಬ್ಯಾಂಕ್ ಆಫ್ ಇಂಡಿಯಾದ ವಲಯ ಪ್ರಬಂಧಕಿ ಅನಿತಾ ನಾಯರ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಮಿಲ್ಕ್ ಕಾಲನಿ ಶಾಖೆಯ ಮುಖ್ಯ ಪ್ರಬಂಧಕ ಜಿ.ಎಂ.ಯೋಗೀಶ ಮುಂತಾದವರು ಶುಭ ಕೋರಿದರು.

ಆಯುಕ್ತ ಜಗದೀಶ್‌ ಅವರಿಂದ ಉದ್ಘಾಟನೆ.

ಈ ಕೇಕ್‌-ಐಸ್‌ಕ್ರೀಮ್‌ ಸಂಸ್ಥೆಯ ಮಾಲೀಕರಾದ ಸುಚಿತ್ರಾ ಮತ್ತು ಕೆ.ಪ್ರಕಾಶ್‌ಚಂದ್ರ ಕುತ್ಪಾಡಿ ಹಾಗೂ ಅಭೀತ್ ಕುತ್ಪಾಡಿ, ಅನ್ವಿತ್ ಕುತ್ಪಾಡಿ ಅವರು ಗಣ್ಯರನ್ನು ಸ್ವಾಗತಿಸಿ ತಮ್ಮ ಸಂಸ್ಥೆಯ ವಿಶೇಷತೆಯನ್ನು ವಿವರಿಸಿದರು.  

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ಹಲವಾರು ಗಣ್ಯರು, ಬಂಧು-ಮಿತ್ರರು ಹಾಗೂ ಗ್ರಾಹಕರು ಭಾಗವಹಿಸಿ, ಕೇಕ್‌-ಐಸ್‌ಕ್ರೀಮ್‌ ಮುಂತಾದ ತಿನಿಸುಗಳನ್ನು ಆಸ್ವಾದಿಸಿ ಮೆಚ್ಚುಗೆ ಸೂಚಿಸಿದರು.

ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಅವರಿಂದ ಉದ್ಘಾಟನೆ

ಶುಚಿರುಚಿಯಾದ ಬಗೆಬಗೆಯ ಕೇಕ್‌, ವಿವಿಧ ಫ್ಲೇವರ್‌ಗಳ ಐಸ್‌ಕ್ರೀಮ್‌ಗಳನ್ನು ಸವಿಯಲು, ಸ್ನೇಹಿತರು-ಆತ್ಮೀಯರೊಂದಿಗೆ ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಕುಳಿತು ತಿಂಡಿ-ತಿನಿಸುಗಳನ್ನು ಆಸ್ವಾದಿಸಲು ಇದು ಆಕರ್ಷಕ ಕೇಂದ್ರವಾಗಿದೆ ಎಂದು ಆಗಮಿಸಿದವರು ಶ್ಲಾಘಿಸಿ, ಶುಭ ಹಾರೈಸಿದರು.

ಆಯುಕ್ತ ಜಗದೀಶ್‌ ಅವರ ಜೊತೆ ಪ್ರಕಾಶ್ಚಂದ್ರ ಕುತ್ಪಾಡಿ ಕುಟುಂಬ.

ವಾರದ ಎಲ್ಲ ದಿನಗಳಲ್ಲೂ ಬೆಳಗ್ಗೆ ಹತ್ತರಿಂದ ಮಧ್ಯರಾತ್ರಿ 12 ಗಂಟೆಯವರೆಗೂ ʼಕ್ಲಬ್‌ ಸಂಡೇಸ್‌ʼ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ನೀಡಲಾದ ಇ-ಮೇಲ್‌ (derbyfoodclub@gmail.com), ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಸಂಪರ್ಕ ಸಂಖ್ಯೆಗಳು: 9916031199, 9916051199

ಇದೂ ಓದಿ:ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ