ಒಳಗೇನಿದೆ!?

ಹೋಟೆಲ್‌ ಎದುರು ಗಂಟೆಗಟ್ಟಲೆ ನಿಂತಿದ್ದ ಐಷಾರಾಮಿ ಕಾರಲ್ಲಿತ್ತು ಉದ್ಯಮಿಯ ಶವ!

ಹೋಟೆಲ್‌ ಮುಂದೆ ನಿಂತಿರುವ ಕಾರು

ಹೋಟೆಲ್‌ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೋಟೆಲೊಂದರ ಮುಂದೆ ಸುಮಾರು ಐದು ಗಂಟೆಗಳ ಕಾಲ ನಿಂತಿದ್ದ ಐಷಾರಾಮಿ ಕಾರಿನಲ್ಲಿ ಉದ್ಯಮಿಯೊಬ್ಬರ ಶವ ಪತ್ತೆಯಾಗಿದೆ. ಕೋರಮಂಗಲ ಪೊಲೀಸ್​ ಠಾಣೆಯಿಂದ ಸುಮಾರು 400 ಮೀ. ದೂರದಲ್ಲಿ ಈ ಪ್ರಕರಣ ನಡೆದಿದೆ.

ಕೋರಮಂಗಲದ 8ನೇ ಬ್ಲಾಕ್‌ನ ʼಸಾಗರ್​ ಫಾಸ್ಟ್​ಫುಡ್ʼ ಎಂಬ ಹೋಟೆಲ್​ ಮುಂಭಾಗ ನಿಂತಿದ್ದ ʼಆಡಿʼ ಕಾರಿನಲ್ಲಿದ್ದ ಉದ್ಯಮಿ ಸಾವಿಗೀಡಾಗಿ ಕೆಲವು ಗಂಟೆಗಳ ಬಳಿಕ ಇದು ಗಮನ ಸೆಳೆದಿದೆ. ಮೃತಪಟ್ಟ ಉದ್ಯಮಿಯನ್ನು ಮೂಲತಃ ಕೊಡಗು ಜಿಲ್ಲೆಯ ವೀರಾಜಪೇಟೆಯ ಸಲೀಂ ಅಕ್ಬರ್​ (46) ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ರಿಯಲ್​ ಎಸ್ಟೇಟ್​ ಉದ್ಯಮಿಯಾಗಿದ್ದ ಅಕ್ಭರ್‌, ಭಾನುವಾರ ಬೆಳಗಿನ ಜಾವ ಕಾರು ಚಲಾಯಿಸಿಕೊಂಡು ಕೋರಮಂಗಲಕ್ಕೆ ಬಂದಿದ್ದು, ಕಾರಿನಲ್ಲಿ ಕುಳಿತ ಸ್ಥಿತಿಯಲ್ಲೇ ಸಾವಿಗೀಡಾಗಿದ್ದರು.  ಅವರು ಮಲಗಿರಬಹುದು ಎಂದು ಹೋಟೆಲ್​ ಸಿಬ್ಬಂದಿ ಹಾಗೂ ಸ್ಥಳೀಯರು ಭಾವಿಸಿದ್ದರು. ಅಲ್ಲಿಂದ ಕಾರು ತೆರವುಗೊಳಿಸುವ ಸಲುವಾಗಿ ಬೆಳಗ್ಗೆ 8 ಗಂಟೆಗೆ ಅವರನ್ನು ಎಬ್ಬಿಸಲು ಕಾರಿನ ಕಿಟಕಿ ಬಡಿದು ಸಪ್ಪಳ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು.

ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನ ಬಾಗಿಲು ತೆಗೆಸಿದಾಗ ಅದರಲ್ಲಿದ್ದ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ. ಮರಣೋತ್ತರ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಈ ಕಾರು ಬೆಳಗಿನ ಜಾವ 2.30ರ ಸುಮಾರಿಗೆ ಹೋಟೆಲ್‌ ಬಳಿ ಬಂದು ನಿಂತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಸಲೀಂ ಅಕ್ಬರ್‌ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ ಎಂದಿರುವ ಪೊಲೀಸರು, ಕೊಲೆ ಅಥವಾ ಯಾವುದೇ ಶಂಕಾಸ್ಪದ ಕೃತ್ಯವನ್ನು ಅಲ್ಲಗಳೆದಿದ್ದಾರೆ.  

ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..

ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವಿಶ್ಲೇಷಣೆ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಈ ಕುರಿತು ಕೋರಮಂಗಲ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಅಕ್ಬರ್​ ಹಲವು ವರ್ಷಗಳಿಂದ ಬೆಂಗಳೂರಿನ ಎಂ.ಜಿ. ರಸ್ತೆ ಸಮೀಪ ವಾಸವಾಗಿದ್ದು, ರಿಯಲ್​ ಎಸ್ಟೇಟ್​ ವ್ಯವಹಾರ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದೂ ಓದಿ: ಮಾಜಿ ಸಚಿವ ದಿನೇಶ್‌ ಗುಂಡೂರಾವ್‌, ಐಎಎಸ್‌ ಅಧಿಕಾರಿ ಜಗದೀಶ್‌ ಅವರಿಂದ ʼಡರ್ಬಿಸ್‌ ಕ್ಲಬ್‌ ಸಂಡೇಸ್‌ʼ ಉದ್ಘಾಟನೆ

ಇದೂ ಓದಿ:ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ