ಹೋಟೆಲ್ ಕನ್ನಡ, ಬೆಂಗಳೂರು: ಗ್ರಾಹಕರ ಹಿತರಕ್ಷಣೆ ನಿಟ್ಟಿನಲ್ಲಿ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಹತ್ವದ ಹೆಜ್ಜೆ ಇಟ್ಟಿದ್ದು, ಹಾಲಿನಿಂದ ತಯಾರಿಸದ ಉತ್ಪನ್ನಗಳನ್ನು ‘ಪನೀರ್’ ಎಂದು ಮಾರಾಟ ಮಾಡುವುದನ್ನು ನಿಷೇಧಿಸಲು ಮುಂದಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಸೆ.22ರ ಮಂಗಳವಾರ ಕರಡು ಅಧಿಸೂಚನೆ ಪ್ರಕಟಿಸಿದೆ.
ಅಂದರೆ, ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) ತಿದ್ದುಪಡಿ ನಿಯಮಾವಳಿಗಳು, 2026 ತರಲು ಉದ್ದೇಶಿಸಲಾಗಿದೆ. ಈ ತಿದ್ದುಪಡಿ ಅನ್ವಯ, 2011ರ ಮೂಲ ನಿಯಮದ 2.1ರ ಉಪ-ನಿಯಮ 2.1.1ರಲ್ಲಿ 11ನೇ ಷರತ್ತಿನ ನಂತರ ಹೊಸದಾಗಿ 12ನೇ ಷರತ್ತು ಸೇರಿಸಲಾಗುತ್ತದೆ. ಅದರ ಪ್ರಕಾರ “ಹಾಲಿನಿಂದ ಪಡೆಯದ ಘಟಕಗಳಿಂದ ಮಾಡಿದ ಪನೀರ್” (paneer made of constituents not derived from milk) ಮಾರಾಟ ಮತ್ತು ಉತ್ಪಾದನೆಯನ್ನು ನಿರ್ಬಂಧಿಸಲಾಗುತ್ತದೆ.
ಇದೂ ಓದಿ: ಆಹಾರ ತಯಾರಕರಿಗೆ ಎಫ್‌ಎಸ್‌ಎಸ್‌ಎಐನಿಂದ ಮತ್ತೊಂದು ಮಹತ್ವದ ಆದೇಶ
ನಿರ್ಬಂಧಕ್ಕೆ ಕಾರಣ: ಮಾರುಕಟ್ಟೆಯಲ್ಲಿ ಹಾಲು ಹೊರತಾದ ವಸ್ತುಗಳಿಂದ (ಅನಲಾಗ್ ಉತ್ಪನ್ನಗಳು) ತಯಾರಿಸಿದ ಉತ್ಪನ್ನಗಳನ್ನು ಪನೀರ್ ಎಂದು ಮಾರಾಟ ಮಾಡಲಾಗುತ್ತಿರುವುದನ್ನು ತಡೆಯಲು ಈ ತಿದ್ದುಪಡಿ ತರಲಾಗುತ್ತಿದೆ ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ.
ಇದೂ ಓದಿ: ಎಫ್ಎಸ್ಎಸ್ಎಐ ಪ್ರಮಾಣಪತ್ರಗಳಿಗಿನ್ನು ನವೀಕರಣ ಅನಗತ್ಯ; ಒಮ್ಮೆ ಪಡೆದರೆ ಜೀವಿತಾವಧಿ ಮಾನ್ಯತೆ
ಈಗಾಗಲೇ ‘ಡೇರಿ ಸಂದರ್ಭದಲ್ಲಿ ಅನಲಾಗ್’ (Analogue in Dairy Context) ವಿಭಾಗದಡಿ ಪರವಾನಗಿ ಪಡೆದ ಅಥವಾ ನೋಂದಾಯಿತವಾಗಿರುವ ಉತ್ಪನ್ನಗಳು ಇನ್ನು ಮುಂದೆ ತಮ್ಮ ನಾಮಕರಣ, ಲೇಬಲಿಂಗ್ ಅಥವಾ ಮಾರ್ಕೆಟಿಂಗ್‌ನಲ್ಲಿ “ಪನೀರ್” ಎಂಬ ಪದ ಬಳಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಾರ್ವಜನಿಕರ ಸಲಹೆಗೆ ಆಹ್ವಾನ
ಈ ಕರಡು ನಿಯಮಾವಳಿಗಳ ಕುರಿತು ಸಾರ್ವಜನಿಕರು ಅಥವಾ ಇದರಿಂದ ಬಾಧಿತರಾಗುವ ಯಾವುದೇ ವ್ಯಕ್ತಿಗಳು ತಮ್ಮ ಆಕ್ಷೇಪಣೆಗಳು ಅಥವಾ ಸಲಹೆಗಳೇನಾದರೂ ಇದ್ದರೆ ಅಧಿಸೂಚನೆ ಪ್ರಕಟವಾದ 60 ದಿನಗಳ ಒಳಗೆ ಸಲ್ಲಿಸಬಹುದು.
ಇದೂ ಓದಿ: ಆಹಾರೋದ್ಯಮ ಸ್ಥಗಿತಗೊಳಿಸಿದರೆ ಮುಕ್ತಾಯ ವರದಿ ಸಲ್ಲಿಕೆ ಕಡ್ಡಾಯ!; ಎಫ್‌ಎಸ್‌ಎಸ್‌ಎಐ ನಿಯಮ
ನವದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ಎಫ್‌ಡಿಎ ಭವನದಲ್ಲಿರುವ ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಖುದ್ದಾಗಿ ಅಥವಾ regulation@fssai.gov.in ಇಮೇಲ್ ಮೂಲಕವೂ ಸಲಹೆ ಮತ್ತು ಆಕ್ಷೇಪಣೆಗಳನ್ನು ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇದೂ ಓದಿ: ಇನ್ಮುಂದೆ ಬೆರಳಿಟ್ಟರೂ, ಮುಖ ತೋರಿಸಿದರೂ ಹಣ ಟ್ರಾನ್ಸ್‌ಫರ್: ಏನಿದು ಹೊಸ ಫೀಚರ್?
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಬಿಬಿಎಚ್‌ಎನಿಂದ 500ಕ್ಕೂ ಅಧಿಕ ಮಂದಿಗೆ ಎಫ್‌ಎಸ್‌ಎಸ್ಎಐ ಫಾಸ್ಟ್ಯಾಕ್ ಟ್ರೇನಿಂಗ್



