ಒಳಗೇನಿದೆ!?

ದಸರಾ-ದೀಪಾವಳಿ ವೇಳೆ ಆಹಾರ ಕಲಬೆರಕೆ ತಡೆಗೆ ನಿಗಾ ಹೆಚ್ಚಿಸಲು ರಾಜ್ಯಗಳಿಗೆ ಎಫ್‌ಎಸ್‌ಎಸ್‌ಎಐ ಸೂಚನೆ

ಹೋಟೆಲ್‌ ಕನ್ನಡ, ಬೆಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭ ಸಾರ್ವಜನಿಕರ ಆರೋಗ್ಯ ರಕ್ಷಣೆ ಉದ್ದೇಶದಿಂದ, ಕಲಬೆರಕೆ ಮತ್ತು ನಕಲಿ ಆಹಾರ ಪದಾರ್ಥಗಳ ಮಾರಾಟ ತಡೆಯಲು ಮೇಲ್ವಿಚಾರಣೆ ತೀವ್ರಗೊಳಿಸುವಂತೆ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಎಲ್ಲ ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರಿಗೆ ಎಫ್‌ಎಸ್‌ಎಸ್‌ಎಐ ಇತ್ತೀಚೆಗೆ ನೀಡಿರುವ ಸಲಹೆಯಲ್ಲಿ, ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವನ್ನು ಒತ್ತಿ ಹೇಳಲಾಗಿದೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಆಗಮನದೊಂದಿಗೆ ಸಿಹಿ ತಿನಿಸುಗಳು, ಖಾರ, ಪಾನೀಯಗಳು, ಖಾದ್ಯ ತೈಲ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ಹಾಲು, ಹಾಲಿನ ಉತ್ಪನ್ನಗಳು, ಸಿಹಿತಿಂಡಿಗಳು, ತಿಂಡಿಗಳು, ಖಾದ್ಯ ತೈಲ, ಪಾನೀಯಗಳು ಮತ್ತು ತುಪ್ಪದಂಥ ನಕಲಿ ಹಾಗೂ ಅಸುರಕ್ಷಿತ ಆಹಾರ ಪದಾರ್ಥಗಳ ಸಂಚಾರ ತಡೆಗಟ್ಟಲು ಕಟ್ಟುನಿಟ್ಟಿನ ತಪಾಸಣೆ ಮತ್ತು ಜಾರಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..

ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಹಬ್ಬದ ಅವಧಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ತಪಾಸಣೆ ಮತ್ತು ಮಾದರಿ ಸಂಗ್ರಹಣೆ ನಡೆಸುವಂತೆ ಎಫ್‌ಎಸ್‌ಎಸ್‌ಎಐ ಆಹಾರ ಆಯುಕ್ತರಿಗೆ ಕೇಳಿಕೊಂಡಿದೆ.

“ಸಂಚಾರಿ ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ನಿಯೋಜಿಸಬೇಕು. ಇದರಿಂದ ಸ್ಥಳದಲ್ಲೇ ಆಹಾರ ಪರೀಕ್ಷೆ ನಡೆಸಲು, ಕಣ್ಣಾವಲು ಹೆಚ್ಚಿಸಲು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ” ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.

ಇದೂ ಓದಿ: ಆಹಾರದಲ್ಲಿ ಕೂದಲು: ಪ್ರಶ್ನಿಸಿದ ಕನ್ನಡಿಗರ ಮೇಲೆ ಒಡಿಶಾದ ಪುರಿ ಹೋಟೆಲ್‌ನಲ್ಲಿ ತೀವ್ರ ಹಲ್ಲೆ

ಕಳೆದ ಆರು ತಿಂಗಳಲ್ಲಿ, ಆಹಾರ ಉದ್ಯಮ ನಿರ್ವಾಹಕರು ಮತ್ತು ಇ-ಕಾಮರ್ಸ್ ಕಂಪನಿಗಳ ವಿರುದ್ಧ ಎಫ್‌ಎಸ್‌ಎಸ್‌ಎಐ ತನ್ನ ಕಾರ್ಯಾಚರಣೆ ಹಾಗೂ ಜಾರಿ ಕ್ರಮಗಳನ್ನು ತೀವ್ರಗೊಳಿಸಿದೆ.

ಇದೂ ಓದಿ: ಕಲಬೆರಕೆ ಪನೀರ್‌ ಕುರಿತು ವ್ಯಾಪಕ ದೂರು; ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಚಿವ ಜೋಶಿ ಪತ್ರ

ಇದೂ ಓದಿ: ಮಾರುಕಟ್ಟೆಯಿಂದ ‘ಎವರೆಸ್ಟ್ ಜೀರಿಗೆ ಪುಡಿ’ ಹಿಂಪಡೆಯಲು ಎಫ್‌ಎಸ್‌ಎಸ್‌ಎಐ ಆದೇಶ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ