ಹೋಟೆಲ್ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ʼದಿ ಆರ್ಟ್ ಆಫ್ ಲಿವಿಂಗ್ʼ ಅಂತಾರಾಷ್ಟ್ರೀಯ ಕೇಂದ್ರವು ಇದೇ ಶನಿವಾರ ಆತಿಥ್ಯ ಕ್ಷೇತ್ರದ ಗಣ್ಯರ ಸಮ್ಮಿಲನಕ್ಕೆ ಸಾಕ್ಷಿ ಆಗಲಿದೆ.
ಅಂದರೆ ಆರ್ಟ್ ಆಫ್ ಲಿವಿಂಗ್‌ನ ಗುರುದೇವ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಅಂದಿನ ಸಂಜೆಯನ್ನು ಆತಿಥ್ಯ ಕ್ಷೇತ್ರದ ಗಣ್ಯರಿಗೆಂದೇ ಮೀಸಲಿರಿಸಿದ್ದಾರೆ.
ಅಂದು ಸಂಜೆ ಸುಮಾರು ಎರಡು ಗಂಟೆಗಳ ಕಾಲ ಅವರು ಭಾರತದ ಹೋಟೆಲ್-ರೆಸ್ಟೋರೆಂಟ್‌ಗಳ ನಾಯಕರ ಜೊತೆ ಸಂವಾದ ನಡೆಸಲಿದ್ದಾರೆ.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ʼಪ್ರತಿ ಅತಿಥಿಗೂ ಮನೆಯ ವಾತಾವರಣದ ಅನುಭವ ನೀಡುವವರಿಗಾಗಿ ಗುರುದೇವ್ ಅವರೊಂದಿಗೆ ಒಂದು ಸಂಜೆʼ ಎಂಬ ಥೀಮ್‌ನಲ್ಲಿ ಈ ಸಂವಾದ ಕಾರ್ಯಕ್ರಮ ಅ.10ರ ಸಂಜೆ 4ರಿಂದ 6 ಗಂಟೆವರೆಗೆ ನಡೆಯಲಿದೆ.
ʼಅಪರಿಚಿತರಿಗೂ ಮನೆಯ ಭಾವನೆ ಮೂಡಿಸುವ ನೀವು, ಈ ಸಂಜೆ ನಮ್ಮ ಅತಿಥಿಗಳು. ಪ್ರತಿದಿನ ನೀವು ಹಿಂದೆಂದೂ ಭೇಟಿಯಾಗದ ಜನರನ್ನು ಸ್ವಾಗತಿಸುತ್ತೀರಿ ಮತ್ತು ಅವರ ಆಯಾಸ ಮರೆಸಿ ಕಳುಹಿಸುತ್ತೀರಿ. ಇಡೀ ಉದ್ಯಮವೇ ಈ ಕೊಡುಗೆಯ ಮೇಲೆ ನಿಂತಿದೆ, ಆದರೆ ಆತಿಥ್ಯ ನೀಡುವವರಿಗಾಗಿಯೇ ಮೀಸಲಾದ ಒಂದು ಸಂಜೆ ಸಿಗುವುದು ತೀರಾ ಅಪರೂಪʼ ಎಂಬುದಾಗಿ ಈ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಲಾಗಿದೆ.
ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..
‘ದಿ ಆರ್ಟ್ ಆಫ್ ಲಿವಿಂಗ್’ ಅಕ್ಟೋಬರ್ 10ರಂದು ತನ್ನ ನಲವತ್ತೈದನೇ ವರ್ಷದ ಆಚರಣೆಯಲ್ಲಿ ಇರುವುದರಿಂದ ಇದನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಗುರುದೇವ್ ಅವರು ಭಾರತದ ಹೋಟೆಲ್-ರೆಸ್ಟೋರೆಂಟ್‌ಗಳ ಮಾಲೀಕರು ಮತ್ತು ನಾಯಕರನ್ನು ಆಹ್ವಾನಿಸಿದ್ದಾರೆ. ಈ ಸಭೆಯು ಸೇವೆ, ಯೋಗಕ್ಷೇಮ ಮತ್ತು ಆತಿಥ್ಯದ ಮಾನವೀಯ ಮೌಲ್ಯಗಳ ಕುರಿತಾಗಿ ಇರಲಿದೆ.
ಹದಿನಾರು ಗಂಟೆಗಳ ಸುದೀರ್ಘ ದಿನದ ಕೊನೆಯಲ್ಲೂ ಉತ್ಸಾಹದಿಂದ ಮತ್ತು ಪ್ರಶಾಂತವಾಗಿರುವ ಬಗೆ, ಸೇವೆಯನ್ನು ಕೇವಲ ಉದ್ಯೋಗವಾಗಿ ನೋಡದೆ ಒಂದು ಜೀವನಶೈಲಿಯಾಗಿ ರೂಢಿಸಿಕೊಳ್ಳುವ ಕುರಿತು ಗುರುದೇವ್ ಅವರ ಆಲೋಚನೆಗಳು, ಹಾಗೂ ದೇಶಾದ್ಯಂತ ಆತಿಥ್ಯ ಉದ್ಯಮವನ್ನು ಮುನ್ನಡೆಸುತ್ತಿರುವ ಸಹೋದ್ಯೋಗಿಗಳ ಜೊತೆಗಿನ ಭೇಟಿಗೆ ಅಂದಿನ ಈ ಸಂಜೆ ವೇದಿಕೆ ಆಗಲಿದೆ.

ಒಕ್ಕೂಟ ಅಸೋಸಿಯೇಷನ್ ಅಂದರೆ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ, ಬೆಂಗಳೂರು ಹೋಟೆಲುಗಳ ಸಂಘ, ನ್ಯಾಷನಲ್ ರೆಸ್ಟೋರೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಇದೂ ಓದಿ: ಎನ್‌ಆರ್‌ಎಐ-ಒಎನ್‌ಡಿಸಿ ಒಡನಾಟದಲ್ಲಿ ಒಡಕು ಮೂಡಿತಾ?; ಎರಡೂ ಕಡೆಯಿಂದ ಹೊರಹೊಮ್ಮಿತು ಸ್ಪಷ್ಟನೆ
ಅಂದಿನ ಸಂಜೆಯ ವಿಶೇಷತೆಗಳು
- ಆತಿಥ್ಯ ಉದ್ಯಮದ ಕುರಿತು ಗುರುದೇವ್ ಅವರ ಭಾಷಣ.
- ಮುಕ್ತ ಸಂವಾದ: ಸೇವೆ, ಜನರು ಮತ್ತು ವಿಸ್ತೃತ ಮಟ್ಟದಲ್ಲಿ ಮಾನವೀಯತೆಯನ್ನು ಉಳಿಸಿಕೊಳ್ಳುವ ಕುರಿತು.
- ಯೋಗಕ್ಷೇಮದ ಸಂಸ್ಕೃತಿಯು ಅತಿಥಿಗಳ ಅನುಭವವನ್ನು ಹೇಗೆ ಹೆಚ್ಚಿಸುತ್ತದೆ, ತಂಡವನ್ನು ಹೇಗೆ ಒಗ್ಗೂಡಿಸುತ್ತದೆ ಮತ್ತು ವ್ಯವಹಾರವನ್ನು ಹೇಗೆ ಬೆಳೆಸುತ್ತದೆ ಎಂಬುದರ ಕುರಿತು ಚರ್ಚೆ.
- ಗುರುದೇವ್ ಅವರೊಂದಿಗೆ ಮಾರ್ಗದರ್ಶಿತ ಧ್ಯಾನ
- ಅನ್ನಪೂರ್ಣ ಅಡುಗೆಮನೆಯಿಂದ ರಾತ್ರಿಯ ಭೋಜನ, ಹಾಗೂ ಸಹ-ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರೊಂದಿಗೆ ವಿಚಾರ ವಿನಿಮಯ.
ಇದೂ ಓದಿ: ಬಿಎಚ್‌ಎನಿಂದ ಹೋಟೆಲ್‌ನವರಿಗಾಗಿ ಮತ್ತೊಂದು FoSTaC ತರಬೇತಿ ಮುಕ್ತಾಯ
ಕಾರ್ಯಕ್ರಮದ ವಿವರ
- ದಿನಾಂಕ ಮತ್ತು ಸಮಯ: ಶನಿವಾರ, 10 ಅಕ್ಟೋಬರ್ 2026, ಸಂಜೆ 4 ರಿಂದ 6 ಗಂಟೆಯವರೆಗೆ
- ಸ್ಥಳ: ವಿಶಾಲಾಕ್ಷಿ ಮಂಟಪ, ದಿ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್, ನೆಲಮಹಡಿ, 21ನೇ ಕಿ.ಮೀ ಕನಕಪುರ ರಸ್ತೆ, ಉದಯಪುರ, ಬೆಂಗಳೂರು 560082
- ಯಾರಿಗಾಗಿ?: ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆತಿಥ್ಯ ಸಮೂಹಗಳ ಮಾಲೀಕರು, ಸಂಬಂಧಿತ ಸಂಘಗಳ ಅಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು ಮತ್ತು ಬಾಣಸಿಗರಿಗಾಗಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
- ಪ್ರವೇಶ: ಆಹ್ವಾನದ ಮೇರೆಗೆ ಮಾತ್ರ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ



