ಹೋಟೆಲ್ ಕನ್ನಡ, ಬೆಂಗಳೂರು: ನಂದಿನಿ ಹಾಲಿನ ದರವನ್ನು ಏರಿಕೆ ಮಾಡಲು ಕರ್ನಾಟಕದ ಸಚಿವ ಸಂಪುಟ ನಿರ್ಧರಿಸಿರುವುದರಿಂದ ರಾಜ್ಯದ ಜನತೆ ಮತ್ತೊಂದು ದರ ಏರಿಕೆಯ ಬಿಸಿ ಅನುಭವಿಸುವಂತಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಅ.29ರ ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ.
ನಂದಿನ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಪರಿಷ್ಕೃತ ದರವು ಇದೇ ರಾಜ್ಯೋತ್ಸವದಂದು ಅಂದರೆ ನ.1ರಂದು ಜಾರಿಗೆ ಬರಲಿದೆ.
ಇದೂ ಓದಿ: ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕರಾಗಿ ಬೇಳೂರು ರಾಘವೇಂದ್ರ ಶೆಟ್ಟಿ ನೇಮಕ
ಏರಿಕೆ ಮಾಡಲಾಗುವ 8 ರೂಪಾಯಿಗಳಲ್ಲಿ 7 ರೂಪಾಯಿ ಹಾಲು ಉತ್ಪಾದಕರಿಗೆ ಮತ್ತು 1 ರೂಪಾಯಿ ಹಾಲಿನ ಒಕ್ಕೂಟಗಳಿಗೆ ನೀಡಲಾಗುವುದು ಎಂದು ಸಂಪುಟ ಸಭೆ ಬಳಿಕ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಇದೂ ಓದಿ: ಮಸಾಲಾ ಟೀಯಿಂದ ಕಡುಕಪ್ಪು ಚಹಾದವರೆಗೆ; ಜೀವನವಿಧಾನ..
ಇದು ಸರ್ವಾನುಮತದ ತೀರ್ಮಾನವಾಗಿದ್ದು, ಇನ್ಮುಂದೆ ರೈತರಿಗೆ ಪ್ರತಿ ಲೀಟರ್‌ಗೆ 35 ರೂ. ಬದಲು 42 ರೂ. ಸಿಗಲಿದೆ. ಜೊತೆಗೆ ಪ್ರೋತ್ಸಾಹ ಧನ 5 ರೂ. ಸಿಗುತ್ತಿದ್ದು, ಇನ್ಮುಂದೆ ರೈತರಿಗೆ ಒಂದು ಲೀಟರ್ ಹಾಲಿಗೆ ಒಟ್ಟು 47 ರೂ. ಸಿಗಲಿದೆ ಎಂದು ಮಾಹಿತಿ ನೀಡಿದರು.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ನಂದಿನ ಹಾಲಿನ ದರ ಏರಿಕೆಗೆ ಕಳೆದ ಸಚಿವ ಸಂಪುಟ ಸಭೆಯಲ್ಲೇ ಒಪ್ಪಿಗೆ ನೀಡಲಾಗಿತ್ತು. ಆದರೆ ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದಿದ್ದರಿಂದ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲಾಗಿತ್ತು. ಇದೀಗ ಚುನಾವಣೆ ಮುಗಿದ ಬೆನ್ನಲ್ಲೇ ಹಾಲಿನ ದರ ಏರಿಸಲಾಗಿದೆ.
ಇದೂ ಓದಿ: ಆಹಾರದಲ್ಲಿ ಕೂದಲು: ಪ್ರಶ್ನಿಸಿದ ಕನ್ನಡಿಗರ ಮೇಲೆ ಒಡಿಶಾದ ಪುರಿ ಹೋಟೆಲ್‌ನಲ್ಲಿ ತೀವ್ರ ಹಲ್ಲೆ
ಇದೂ ಓದಿ: ನಾನು ನಂದಿನಿ, ಡೆಲ್ಲೀಲೂ ಸಿಗ್ತೀನಿ; ರಾಷ್ಟ್ರ ರಾಜಧಾನಿಯಲ್ಲೂ ಕೆಎಂಎಫ್ ಹಾಲು!
ಇದೂ ಓದಿ: ಈ ತಿಂಗಳಾಂತ್ಯದಲ್ಲೇ ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಲಗ್ಗೆ?: ಜೊಮ್ಯಾಟೊ-ಸ್ವಿಗ್ಗಿಗೆ ಸವಾಲು..



