ಹೋಟೆಲ್ ಕನ್ನಡ, ಬೆಂಗಳೂರು: ಭಾರತದ ಆನ್‌ಲೈನ್ ಆಹಾರ ವಿತರಣಾ (ಫುಡ್ ಡೆಲಿವರಿ) ಮಾರುಕಟ್ಟೆಯಲ್ಲಿ ಜೊಮ್ಯಾಟೊ ಮತ್ತು ಸ್ವಿಗ್ಗಿ ಕಂಪನಿಗಳ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ವಾಲ್‌ಮಾರ್ಟ್ ಒಡೆತನದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಸದ್ದಿಲ್ಲದೆ ಸಜ್ಜಾಗುತ್ತಿದೆ.
ಅಕ್ಟೋಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಈ ಸೇವೆಯನ್ನು ಅಧಿಕೃತವಾಗಿ ಮುಕ್ತಗೊಳಿಸಲು ಫ್ಲಿಪ್‌ಕಾರ್ಟ್ ಯೋಜಿಸಿದ್ದು, ವರ್ಷಾಂತ್ಯಕ್ಕೆ ಪ್ರಮುಖ ಐದಾರು ನಗರಗಳಿಗೆ ವಿಸ್ತರಿಸುವ ಗುರಿ ಹೊಂದಿದೆ. ದ್ವಿಸ್ವಾಮ್ಯದ ಪೈಪೋಟಿ ಮಧ್ಯೆ ಸದ್ಯದಲ್ಲೇ ಹೊಸ ಕಂಪನಿಯ ಪ್ರವೇಶ ಭಾರತೀಯ ಆಹಾರ ಪ್ರಿಯರಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ಹೊಸ ಆಯ್ಕೆಗಳನ್ನು ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ತನ್ನ ಆಹಾರ ವಿತರಣಾ ಸೇವೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದ್ದು, ಅದಕ್ಕಾಗಿ ತನ್ನ ಸುಮಾರು 8,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಈ ಸೇವೆ ಒದಗಿಸಿದೆ. ಜೊತೆಗೆ, ತನ್ನದೇ ಆದ ‘ಇ-ಕಾರ್ಟ್’ ಲಾಜಿಸ್ಟಿಕ್ಸ್ ಮೂಲಕ ಪ್ರತ್ಯೇಕ ಡೆಲಿವರಿ ಸಿಬ್ಬಂದಿಯನ್ನೂ ನಿಯೋಜಿಸಿದೆ.
ಇದೂ ಓದಿ: ಆಹಾರದಲ್ಲಿ ಕೂದಲು: ಪ್ರಶ್ನಿಸಿದ ಕನ್ನಡಿಗರ ಮೇಲೆ ಒಡಿಶಾದ ಪುರಿ ಹೋಟೆಲ್‌ನಲ್ಲಿ ತೀವ್ರ ಹಲ್ಲೆ
ಬೆಂಗಳೂರಿನ ರಸ್ತೆಗಳಲ್ಲಿ “Eat-in by Minutes” ಬ್ರಾಂಡ್‌ನ ಟಿ-ಶರ್ಟ್ ಧರಿಸಿದ ಡೆಲಿವರಿ ಬಾಯ್‌ಗಳು ಈಗಾಗಲೇ ಆಹಾರ ವಿತರಣೆ ಆರಂಭಿಸಿದ್ದಾರೆ. ಫ್ಲಿಪ್‌ಕಾರ್ಟ್ ಆ್ಯಪ್‌ನಲ್ಲಿ ‘ಮಿನಿಟ್ಸ್’ ಜೊತೆಗೆ ಪ್ರತ್ಯೇಕ ವಿಭಾಗವಾಗಿ ಇದು ಲಭ್ಯವಿದ್ದು, ಸರ್ಕಾರದ ‘ಒಎನ್‌ಡಿಸಿ’ (ONDC) ಜಾಲ ಹಾಗೂ ನೇರವಾಗಿ ಒಪ್ಪಂದ ಮಾಡಿಕೊಂಡ ರೆಸ್ಟೋರೆಂಟ್‌ಗಳಿಂದ ಆಹಾರ ಒದಗಿಸಲಾಗುತ್ತಿದೆ.
ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..
ಪ್ರಸ್ತುತ ಜೊಮ್ಯಾಟೊ ಮತ್ತು ಸ್ವಿಗ್ಗಿ ವಾರ್ಷಿಕ ಸುಮಾರು 8.5ರಿಂದ 9.5 ಕೋಟಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದು, ಮಾರುಕಟ್ಟೆಯ ಸಿಂಹಪಾಲನ್ನು ಹೊಂದಿವೆ. ಹಿಂದೆ ಅಮೆಜಾನ್, ಗೂಗಲ್ ಮತ್ತು ಉಬರ್ ಫುಡ್ ಡೆಲಿವರಿ ವಲಯಕ್ಕೆ ಪ್ರವೇಶಿಸಿ ವಿಫಲವಾಗಿದ್ದವು. ಆದರೆ, ಫ್ಲಿಪ್‌ಕಾರ್ಟ್ ತನ್ನ ಬಲವಾದ ಇ-ಕಾಮರ್ಸ್ ನೆಟ್‌ವರ್ಕ್ ಮತ್ತು ‘ಕ್ವಿಕ್ ಕಾಮರ್ಸ್’ ಮೂಲಸೌಕರ್ಯ ಬಳಸಿಕೊಂಡು ಹೆಜ್ಜೆ ಇಡುತ್ತಿರುವುದು ಇದಕ್ಕೆ ಪ್ಲಸ್ ಪಾಯಿಂಟ್ ಎನ್ನಲಾಗಿದೆ.
ಇದೂ ಓದಿ: ಹೋಟೆಲಿಗರ ಹಣಕಾಸು ಗುಟ್ಟು, ಸ್ವಿಗ್ಗಿ-ಜೊಮ್ಯಾಟೊ ಕೈಯೊಳಗಿನ ಜುಟ್ಟು!: ಭಾರಿ ವಂಚನೆ ಬಹಿರಂಗ
ರೆಸ್ಟೋರೆಂಟ್‌ಗಳಿಗೆ ಜೊಮ್ಯಾಟೊ ಮತ್ತು ಸ್ವಿಗ್ಗಿ ವಿಧಿಸುವ ಶೇ.20ರಿಂದ ಶೇ.25 ಕಮಿಷನ್‌ಗೆ ಹೋಲಿಸಿದರೆ, ಫ್ಲಿಪ್‌ಕಾರ್ಟ್ ಕೇವಲ ಶೇ.10 ಮೂಲ ಕಮಿಷನ್ ವಿಧಿಸಲು ಮುಂದಾಗಿದೆ. ಇದರಿಂದ ರೆಸ್ಟೋರೆಂಟ್‌ಗಳಿಗೆ ಹೆಚ್ಚಿನ ಲಾಭ ಸಿಗಲಿದ್ದು, ಅವುಗಳಿಗೆ ಹೊಸ ಪರ್ಯಾಯ ವೇದಿಕೆ ಸಿಕ್ಕಂತಾಗುತ್ತದೆ ಎಂದು ಭಾರತೀಯ ರೆಸ್ಟೋರೆಂಟ್ ಅಸೋಸಿಯೇಷನ್ (NRAI) ಹರ್ಷ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಇದೂ ಓದಿ: ಹೋಟೆಲ್ ಎದುರು ಗಂಟೆಗಟ್ಟಲೆ ನಿಂತಿದ್ದ ಐಷಾರಾಮಿ ಕಾರಲ್ಲಿತ್ತು ಉದ್ಯಮಿಯ ಶವ!
ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್ ಕಾರ್ಮಿಕ
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?



