ಒಳಗೇನಿದೆ!?

ಬೇಕರಿ-ಕಾಂಡಿಮೆಂಟ್ಸ್‌ ಮಾಲೀಕರ ಪರ ಹಮ್ಮಿಕೊಂಡಿರುವ ಬೃಹತ್‌ ಸಭೆಗೆ ಬಂಟರ ಸಂಘದ ಬೆಂಬಲ

ಬೇಕರಿ-ಕಾಂಡಿಮೆಂಟ್ಸ್‌ ಪರ ಬೃಹತ್‌ ಸಭೆಗೆ ಬಂಟರ ಸಂಘದ ಸದಸ್ಯರ ಆಹ್ವಾನ

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಬೇಕರಿ ಹಾಗೂ ಕಾಂಡಿಮೆಂಟ್ಸ್‌ ಮತ್ತು ಅವುಗಳ ಮಾಲೀಕರ ಮೇಲೆ ಪದೇಪದೆ ದಾಳಿ ನಡೆಯುತ್ತಿರುವುದರಿಂದ ಬೇಸತ್ತು, ಅದರ ವಿರುದ್ಧ ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಜೂನ್‌ 17ರಂದು ಮಂಗಳವಾರ ಬೃಹತ್‌ ಸಭೆ ಹಮ್ಮಿಕೊಳ್ಳಲಾಗಿದ್ದು, ಅದಕ್ಕೆ ಬೆಂಗಳೂರು ಬಂಟರ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ.

ಡಾ.ರವಿ ಶೆಟ್ಟಿ ಬೈಂದೂರು ಅವರ ʼಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತುʼ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಈ ಬೃಹತ್‌ ಸಭೆ ಬೆಂಗಳೂರಿನ ವಸಂತನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಜೂ.17ರ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯಾದ್ಯಂತದ ಇರುವ ಬೇಕರಿ-ಕಾಂಡಿಮೆಂಟ್ಸ್‌ ಮಾಲೀಕರು ದೊಡ್ಡ ಸಂಖ್ಯೆಯಲ್ಲಿ ಸೇರಲಿದ್ದಾರೆ.

ʼಈ ಬೃಹತ್‌ ಸಭೆಗೆ ಬೆಂಗಳೂರು ಬಂಟರ ಸಂಘದ ಬೆಂಬಲ ಇದೆʼ ಎಂಬುದಾಗಿ ಬಂಟರ ಸಂಘದ ಸೇವಾದಳದ ಅಧ್ಯಕ್ಷ ಡಿ.ಬಿ.ಪ್ರತಾಪ್‌ ಶೆಟ್ಟಿ ತಿಳಿಸಿದ್ದಾರೆ. ಜೊತೆಗೆ ವಿವಿಧ ಜಾತಿ-ಸಮುದಾಯಗಳ ಸಂಘಗಳು, ಕನ್ನಡಪರ ಸಂಘಟನೆಗಳು ಕೂಡ ಈ ಬೃಹತ್‌ ಸಭೆಗೆ ಬೆಂಬಲ ಸೂಚಿಸಿವೆ.

ಬೇಕರಿ ಹಾಗೂ ಕಾಂಡಿಮೆಂಟ್ಸ್‌ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಜೊತೆಗೆ ಇಂಥವುಗಳನ್ನು ಶಾಶ್ವತವಾಗಿ ನಿವಾರಿಸುವ ಸಲುವಾಗಿ ಸರ್ಕಾರ ಮಟ್ಟದಲ್ಲಿ ಕಾನೂನಾತ್ಮಕವಾಗಿ ಏನು ಮಾಡಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆಯೂ ಈ ಸಭೆಯಲ್ಲಿ ವ್ಯಾಪಕ ಚರ್ಚೆ ಆಗಲಿದೆ.

ಬೇಕರಿ-ಕಾಂಡಿಮೆಂಟ್ಸ್‌ ಮಾಲೀಕರ ಪ್ರಮುಖ ಸಮಸ್ಯೆಗೆ ಖಾಯಂ ಪರಿಹಾರ ಕೈಗೊಳ್ಳುವ ನಿರ್ಣಾಯಕ ಸಭೆ ಇದಾಗಿರಲಿದ್ದು, ಈ ಸಭೆಗೆ ಬೇಕರಿ-ಕಾಂಡಿಮೆಂಟ್ಸ್‌ ಮಾಲೀಕರು ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.

ಬೃಹತ್‌ ಸಭೆ ಬಗ್ಗೆ ಬಂಟರ ಸಂಘದ ಸದಸ್ಯರ ಆಹ್ವಾನ

ಇದೂ ಓದಿ: ಸುಖ್‌ ಸಾಗರ್‌ ಗ್ರೂಪ್‌ ಆಫ್‌ ಹೋಟೆಲ್ಸ್‌ ಸಂಸ್ಥಾಪಕ ಸುರೇಶ್‌ ಎಸ್.‌ ಪೂಜಾರಿ ವಿಧಿವಶ

ಇದೂ ಓದಿ:ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ