ಹೋಟೆಲ್ ಕನ್ನಡ, ಬೆಂಗಳೂರು: ಕಾರ್ಮಿಕರ ಭವಿಷ್ಯ ನಿಧಿಯ ಹಣ ಹಿಂಪಡೆಯುವ ಕುರಿತು ಕೆಲವು ನಿಯಮಗಳನ್ನು ಸರಳೀಕರಿಸಲಾಗಿದ್ದು, ಇನ್ಮುಂದೆ ಕಾರ್ಮಿಕರು ತಮ್ಮ ಪಿಎಫ್ ಹಣವನ್ನು ಪೂರ್ತಿಯಾಗಿ ಹಿಂಪಡೆಯಬಹುದು. ಇದರಿಂದ ಏಳು ಕೋಟಿಗೂ ಅಧಿಕ ಸದಸ್ಯರಿಗೆ ಪ್ರಯೋಜನವಾಗಲಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತಿಳಿಸಿದೆ.
ಕೇಂದ್ರದ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ನೇತೃತ್ವದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) 13 ನಿಯಮಗಳನ್ನು ಒಂದೇ ಸರಳೀಕೃತ ನಿಯಮವಾಗಿ ವಿಲೀನಗೊಳಿಸಿದ್ದರಿಂದ ಕಾರ್ಮಿಕರಿಗೆ ಇಂಥದ್ದೊಂದು ಅವಕಾಶ ಉಂಟಾಗಿದೆ.
ಇದೂ ಓದಿ: ‘ಹಳ್ಳಿಮನೆ’ ಸಮೂಹದ ಹೊಸ ‘ದೋಸೆ ಕ್ಯಾಂಪ್’ನಲ್ಲಿ ಇನ್ನು 3 ದಿನ ತಿಂಡಿಗಳಿಗೆ 50% ರಿಯಾಯಿತಿ!
ಹಣ ಹಿಂಪಡೆಯುವಿಕೆಗೆ ಅನಾರೋಗ್ಯ, ಶಿಕ್ಷಣ, ಮದುವೆ ಮುಂತಾದ ಅಗತ್ಯ ಅವಶ್ಯಕತೆಗಳು, ವಸತಿ ಅಗತ್ಯಗಳು ಮತ್ತು ವಿಶೇಷ ಸಂದರ್ಭಗಳು ಎಂದು ಮೂರು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ. ಅದರಲ್ಲೂ ವಿಶೇಷ ಸಂದರ್ಭಗಳಲ್ಲಿ ಸದಸ್ಯರು ಯಾವುದೇ ಕಾರಣ ತಿಳಿಸದೆಯೂ ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಶಿಕ್ಷಣಕ್ಕೆ ಹತ್ತು ಸಲ, ಮದುವೆಗೆ ಐದು ಸಲ ಹಣ ಹಿಂಪಡೆಯಲು ಅನುಮತಿ ಒದಗಿಸಲಾಗಿದೆ. ಒಟ್ಟಿನಲ್ಲಿ ಇಪಿಎಫ್‌ಒ ಸದಸ್ಯರು ಈಗ ಉದ್ಯೋಗಿ ಮತ್ತು ಉದ್ಯೋಗದಾತರ ಭಾಗ ಸೇರಿ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದಾಗಿದೆ.
ಇದೂ ಓದಿ: ಇನ್ಮುಂದೆ ಬೆರಳಿಟ್ಟರೂ, ಮುಖ ತೋರಿಸಿದರೂ ಹಣ ಟ್ರಾನ್ಸ್‌ಫರ್: ಏನಿದು ಹೊಸ ಫೀಚರ್?
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಇನ್ನು ಮೂರೇ ವರ್ಷಗಳಲ್ಲಿ ರೆಸ್ಟೋರೆಂಟ್ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧ್ಯತೆ: ಏನದು?



