ಹೋಟೆಲ್ ಕನ್ನಡ, ಬೆಂಗಳೂರು: ಇನ್ನು ಮುಂದೆ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ನೀಡುವ ಬಿಲ್‌ನಲ್ಲಿ ‘ಗ್ಯಾಸ್ ಶುಲ್ಕ’ ಅಥವಾ ‘ಇಂಧನ ವೆಚ್ಚ’ ಎಂದು ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ. ಗ್ಯಾಸ್ ಬೆಲೆ ಏರಿಕೆ ನೆಪವೊಡ್ಡಿ ಗ್ರಾಹಕರಿಂದ ಸುಲಿಗೆ ಮಾಡುವ ಹೋಟೆಲ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಸಿಸಿಪಿಎ ಮಾರ್ಗಸೂಚಿಯ ಪ್ರಮುಖ ಅಂಶಗಳು
ಇದು ‘ಅನುಚಿತ ವ್ಯಾಪಾರ‘: ಗ್ರಾಹಕ ಸಂರಕ್ಷಣಾ ಕಾಯ್ದೆ 2019ರಡಿ ಬಿಡುಗಡೆಯಾಗಿರುವ ಹೊಸ ಮಾರ್ಗಸೂಚಿ ಪ್ರಕಾರ, ಬಿಲ್‌ನಲ್ಲಿ ಇಂಧನ ವೆಚ್ಚವನ್ನು ಪ್ರತ್ಯೇಕವಾಗಿ ಸೇರಿಸುವುದು ಕಾನೂನುಬಾಹಿರ ಹಾಗೂ ಇದೊಂದು ಅನುಚಿತ ವ್ಯಾಪಾರ ಪದ್ಧತಿಯಾಗಿದೆ.
ಇದೂ ಓದಿ: ಎಫ್ಎಸ್ಎಸ್ಎಐ ಪ್ರಮಾಣಪತ್ರಗಳಿಗಿನ್ನು ನವೀಕರಣ ಅನಗತ್ಯ; ಒಮ್ಮೆ ಪಡೆದರೆ ಜೀವಿತಾವಧಿ ಮಾನ್ಯತೆ
ಮೆನು ದರದಲ್ಲೇ ಸೇರಿರಬೇಕು: ಹೋಟೆಲ್ ನಡೆಸಲು ಬೇಕಾಗುವ ಅಡುಗೆ ಅನಿಲ, ವಿದ್ಯುತ್ ಹಾಗೂ ಇತರ ಇಂಧನ ವೆಚ್ಚಗಳು ವ್ಯವಹಾರದ ಸಾಮಾನ್ಯ ಕಾರ್ಯಾಚರಣಾ ವೆಚ್ಚಗಳಾಗಿವೆ. ಇವುಗಳನ್ನು ಆಹಾರದ ಮೆನು ದರದಲ್ಲಿಯೇ ಅಳವಡಿಸಿಕೊಳ್ಳಬೇಕು.
ಜಿಎಸ್ಟಿಗಷ್ಟೇ ಅವಕಾಶ: ಗ್ರಾಹಕರು ಆರ್ಡರ್ ಮಾಡಿದ ಆಹಾರದ ಮೆನು ದರ ಮತ್ತು ನಿಯಮಾನುಸಾರ ವಿಧಿಸುವ ಜಿಎಸ್ಟಿ ಹೊರತುಪಡಿಸಿ, ಬೇರೆ ಯಾವುದೇ ರೀತಿಯ ಹಿಡನ್ ಚಾರ್ಜ್‌ಗಳನ್ನು ಅಥವಾ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಶುಲ್ಕ ಹಾಕಿದರೆ ಗ್ರಾಹಕರು ಏನು ಮಾಡಬೇಕು?
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಬಂದ ಸಾಲು ಸಾಲು ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಗ್ರಾಹಕರಿಗೆ ಈ ಕೆಳಗಿನ ಆಯ್ಕೆಗಳನ್ನು ನೀಡಿದೆ.
ಬಿಲ್ ಪರಿಷ್ಕರಿಸಲು ಸೂಚಿಸಿ: ಬಿಲ್‌ನಲ್ಲಿ ‘ಗ್ಯಾಸ್ ಶುಲ್ಕ’ ಸೇರಿಸಿದ್ದರೆ, ಅದನ್ನು ತೆಗೆದು ಹೊಸ ಬಿಲ್ ನೀಡುವಂತೆ ಗ್ರಾಹಕರು ಹೋಟೆಲ್ ಸಿಬ್ಬಂದಿಗೆ ನೇರವಾಗಿ ಸೂಚಿಸಬಹುದು.
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಸಹಾಯವಾಣಿಗೆ ಕರೆ ಮಾಡಿ: ಒಂದು ವೇಳೆ ಹೋಟೆಲ್‌ನವರು ಬಿಲ್ ಪರಿಷ್ಕರಿಸಲು ನಿರಾಕರಿಸಿದರೆ, ಗ್ರಾಹಕರು ತಕ್ಷಣವೇ ಟೋಲ್-ಫ್ರೀ ಸಂಖ್ಯೆ 1915ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು.
ಆನ್‌ಲೈನ್ ದೂರು: ಕೇಂದ್ರ ಸರ್ಕಾರದ ‘ಇ-ಜಾಗೃತಿ’ ಪೋರ್ಟಲ್ ಮೂಲಕವೂ ಗ್ರಾಹಕ ಆಯೋಗಕ್ಕೆ ಅಧಿಕೃತವಾಗಿ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಎಲ್‌ಪಿಜಿಗಾಗಿ ಕಾನೂನು ಮೊರೆ ಹೋದ ಬೆಂಗಳೂರು ಹೋಟೆಲುಗಳ ಸಂಘಕ್ಕೆ ಹೈಕೋರ್ಟ್ ಹೇಳಿದ್ದೇನು?



