ಒಳಗೇನಿದೆ!?

ಫೀನಿಕ್ಸ್‌ನಂತೆ ಮತ್ತೆ ಎದ್ದು ನಿಂತ ‘ಶುದ್ಧ ತಿಂಡಿ’: ಸುಟ್ಟು‌ ಹೋಗಿದ್ದ ಹೋಟೆಲ್‌ ಮರು ಆರಂಭ

ಹೋಟೆಲ್‌ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ನೈಸ್ ರಸ್ತೆಯ ಸೋಂಪುರ ವೃತ್ತ ಸಮೀಪದ ‘ಶುದ್ಧ ತಿಂಡಿ’ ಹೋಟೆಲ್ ಅಕ್ಷರಶಃ ಫೀನಿಕ್ಸ್‌ನಂತೆ ಮತ್ತೆ ಎದ್ದುನಿಂತಿದೆ. ಅರ್ಥಾತ್‌,  ಭಾರಿ ಅಗ್ನಿ ಅನಾಹುತಕ್ಕೆ ಒಳಗಾಗಿ ಬಹುತೇಕ ಸುಟ್ಟು ಹೋಗಿದ್ದ ಈ ಹೋಟೆಲ್‌ ಇದೀಗ ಪುನಃ ಆರಂಭವಾಗಿದೆ.

ಇದೂ ಓದಿ: ಇನ್ಮುಂದೆ ಪಿಎಫ್ ಹಣ ಪೂರ್ತಿ ಹಿಂಪಡೆಯಲು ಅವಕಾಶ: ಕಾರಣ ತಿಳಿಸದಿದ್ದರೂ ಲಭ್ಯ..

ಅಗ್ನಿ ಅವಘಡಕ್ಕೆ ಒಳಗಾಗಿ ಹೋಟೆಲ್‌ ಸಂಪೂರ್ಣ ಸುಟ್ಟುಹೋಗಿದ್ದರೂ ಎದೆಗುಂದದ ಮಾಲೀಕ ನವೀನ್‌, ಒಂದೂವರೆ ತಿಂಗಳೊಳಗೆ ಅದೇ ಸ್ಥಳದಲ್ಲಿ ಮತ್ತೆ ಹೊಸದಾಗಿ ಹೋಟೆಲ್‌ ನಿರ್ಮಾಣ ಮಾಡಿದ್ದಾರೆ. ನೂತನವಾಗಿ ಇನ್ನೊಮ್ಮೆ ನಿರ್ಮಾಣಗೊಂಡ ಶುದ್ಧ ತಿಂಡಿ ಇಂದು ಮತ್ತೆ ಗ್ರಾಹಕರ ಸೇವೆಗೆ ತೆರೆದುಕೊಂಡಿದೆ.

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಉದ್ಘಾಟನೆಯಾಗಿ ಇನ್ನೂ ಒಂದು ತಿಂಗಳು ಕೂಡ ಆಗಿರದ ಶುದ್ಧ ತಿಂಡಿ ಹೋಟೆಲ್‌ ಏಪ್ರಿಲ್‌ 16ರ ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಅಗ್ನಿ ಆಕಸ್ಮಿಕಕ್ಕೆ ಒಳಗಾಗಿತ್ತು. ಅವಘಡದ ತೀವ್ರತೆಗೆ ಇಡೀ ಹೋಟೆಲ್‌ ಧಗಧಗಿಸಿ ಉರಿದು ಬಹುತೇಕ ಎಲ್ಲವೂ ಸುಟ್ಟು ಕರಕಲಾಗಿದ್ದವು. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ನವೀಕೃತ ಹೋಟೆಲ್‌ಗೆ ಮರು ಚಾಲನೆ

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೀಗ ಅದೇ ಸ್ಥಳದಲ್ಲಿ ಶುದ್ಧ ತಿಂಡಿ ಪುನರ್‌ ನಿರ್ಮಾಣಗೊಂಡಿದ್ದು, ಮೊದಲಿನಗಿಂತ ಇನ್ನೂ ವರ್ಣರಂಜಿತವಾಗಿ ಮೂಡಿಬಂದಿದೆ. ಇಂದಿನಿಂದ ಶುದ್ದ ತಿಂಡಿ ಎಂದಿನಂತೆ ಬೆಳಗ್ಗೆ 6.30ರಿಂದ ತಡರಾತ್ರಿ 1ರ ವರೆಗೆ ನಿತ್ಯವೂ ತೆರೆದಿರಲಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ