ಒಳಗೇನಿದೆ!?

ಬೆಂಗಳೂರು ಹೋಟೆಲುಗಳ ಸಂಘದವರಿಂದ ಆರ್​ಬಿಐ ಅಧಿಕಾರಿ ಜೊತೆ ಮಾತುಕತೆ; ಸಮಸ್ಯೆಯೊಂದು ಶೀಘ್ರದಲ್ಲೇ ಪರಿಹಾರ

ಹೋಟೆಲ್ ಕನ್ನಡ, ಬೆಂಗಳೂರು: ಹೋಟೆಲ್ ಉದ್ಯಮವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯೊಂದರ ಪರಿಹಾರದ ಸಲುವಾಗಿ ಬೆಂಗಳೂರು ಹೋಟೆಲುಗಳ ಸಂಘದವರು ಸೋಮವಾರ ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ಪ್ರಧಾನ ಕಚೇರಿಗೆ ತೆರಳಿ, ಪ್ರಮುಖ ಅಧಿಕಾರಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ.

ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್​ಎ)ದ ಅಧ್ಯಕ್ಷ ಎಚ್​.ಎಸ್.ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ಜಂಟಿ ಕಾರ್ಯದರ್ಶಿಗಳಾದ ಬಿ.ಎಂ. ಧನಂಜಯ, ಕೃಷ್ಣರಾಜ್ ಅವರು ಸೋಮವಾರ ಆರ್​ಬಿಐನ ಇಷ್ಯೂ ಇಲಾಖೆಯ ಡಿಜಿಎಂ ಸಂತೋಷ್ ಕುಮಾರ್ ಅವರ ಜೊತೆ ಚಿಲ್ಲರೆ ಸಮಸ್ಯೆ ಪರಿಹಾರ ಸಲುವಾಗಿ ಚರ್ಚಿಸಿದ್ದಾರೆ.

ಇದೂ ಓದಿ: ವಿತ್ತ ಸಚಿವೆ ಜೊತೆ ಹೋಟೆಲೋದ್ಯಮಿಗಳ ಸಂವಾದ; ಗಮನ ಸೆಳೆದ ಸಂಗತಿ ಇದು…

ರಾಜಧಾನಿ ಬೆಂಗಳೂರಿನ ಹೋಟೆಲುಗಳಲ್ಲಿ ಆಗಾಗ ಕಾಡುತ್ತಿರುವ ಚಿಲ್ಲರೆ ಕೊರತೆ ಸಮಸ್ಯೆ ಮತ್ತೆ ಬಾಧಿಸಲಾರಂಭಿಸಿದ್ದರಿಂದ ಈ ಮಾತುಕತೆ ನಡೆದಿದೆ. ಚಿಲ್ಲರೆ ಕೊರತೆ ಎದುರಿಸಲು ಈ ಹಿಂದೆ ಬೇರೆ ರಾಜ್ಯಗಳಿಂದ ಚಿಲ್ಲರೆ ತರಿಸಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಈಗ ಆ ಮೂಲಕವೂ ಚಿಲ್ಲರೆ ಸರಿಯಾಗಿ ಲಭಿಸದ್ದರಿಂದ ಮತ್ತೆ ಆರ್​​ಬಿಐ ಮೊರೆ ಹೋಗಬೇಕಾಗಿದೆ.

ಆರ್‌ಬಿಐ ಡಿಜಿಎಂ ಸಂತೋಷ್‌ ಕುಮಾರ್‌ ಜೊತೆ ಬಿಎಚ್‌ಎ ಪದಾಧಿಕಾರಿಗಳಾದ ಎಚ್‌.ಎಸ್.ಸುಬ್ರಹ್ಮಣ್ಯ ಹೊಳ್ಳ, ವೀರೇಂದ್ರ ಕಾಮತ್‌, ಬಿ.ಎಂ.ಧನಂಜಯ, ಕೃಷ್ಣರಾಜ್‌ ಅವರ ಮಾತುಕತೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಚಿಲ್ಲರೆ ಸಮಸ್ಯೆ ಕೊರತೆಯಿಂದ ಹೋಟೆಲಿಗರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಿಎಚ್​ಎ ಪದಾಧಿಕಾರಿಗಳು ಡಿಜಿಎಂ ಸಂತೋಷ್ ಅವರ ಗಮನಕ್ಕೆ ತಂದು ಮನವರಿಕೆ ಮಾಡಿಸಿದ್ದು, ಅವರು ಸಮಸ್ಯೆ ಬಗೆಹರಿಸಲು ಆರ್​ಬಿಐ ಕಡೆಯಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ಶೀಘ್ರದಲ್ಲೇ ಜರುಗಿಸುವ ಭರವಸೆ ನೀಡಿದ್ದಾರೆ.

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಯಾವ ಸದಸ್ಯರಿಗೆ ತಮ್ಮ ಬ್ಯಾಂಕ್ ಶಾಖೆಯಿಂದ ಚಿಲ್ಲರೆ ಸಿಗುತ್ತಿಲ್ಲವೋ ಅವರು ತಮ್ಮ ಬ್ಯಾಂಕ್ ಶಾಖೆ-ಖಾತೆ ವಿವರ ಸಹಿತ ಬೆಂಗಳೂರು ಹೋಟೆಲುಗಳ ಸಂಘಕ್ಕೆ ಇ-ಮೇಲ್ (bangalorehotelsassn@gmail.com) ಮಾಡಿದರೆ ಅದನ್ನು ಮುಂದಿನ ಕ್ರಮಕ್ಕಾಗಿ ಆರ್‌ಬಿಐಗೆ ಫಾರ್ವರ್ಡ್ ಮಾಡಲಾಗುವುದು ಎಂದು ಬಿಎಚ್‌ಎ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಫೀನಿಕ್ಸ್‌ನಂತೆ ಮತ್ತೆ ಎದ್ದು ನಿಂತ ‘ಶುದ್ಧ ತಿಂಡಿ’: ಸುಟ್ಟು‌ ಹೋಗಿದ್ದ ಹೋಟೆಲ್‌ ಮರು ಆರಂಭ



ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ