ಹೋಟೆಲ್ ಕನ್ನಡ, ಬೆಂಗಳೂರು: ಆನ್ಲೈನ್ ಆಹಾರ ವಿತರಣಾ ವೇದಿಕೆಗಳಾದ ಸ್ವಿಗ್ಗಿ-ಜೊಮ್ಯಾಟೊಗಳಿಂದಾಗಿ ನೊಂದಿರುವ ಹೋಟೆಲ್ ಉದ್ಯಮಿಗಳು ಆ.15ರ ಬಳಿಕ ಸ್ವಿಗ್ಗಿ-ಜೊಮ್ಯಾಟೊ ಜೊತೆ ವ್ಯವಹಾರ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದರಿಂದ ಸ್ವಿಗ್ಗಿ ಸಂಸ್ಥೆಯವರು ಬೆಂಗಳೂರು ಹೋಟೆಲುಗಳ ಸಂಘದವರ ಜೊತೆ ಮಾತುಕತೆ ನಡೆಸಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್ಎ)ದ ಪದಾಧಿಕಾರಿಗಳ ಜೊತೆ ಸೋಮವಾರ ಮಾತುಕತೆ ನಡೆಸಿದ ಸ್ವಿಗ್ಗಿ ಸಂಸ್ಥೆಯ ಪ್ರತಿನಿಧಿಗಳು ಬಿಎಚ್ಎ ಕಚೇರಿಯಲ್ಲಿ ಮಂಗಳವಾರದಿಂದ ಹೆಲ್ಪ್ಡೆಸ್ಕ್ ತೆರೆದಿದ್ದಾರೆ. ಈ ಸ್ವಿಗ್ಗಿ ಸಹಾಯ ಕೇಂದ್ರದ ಕುರಿತು ಮಾಹಿತಿ ನೀಡಿರುವ ಬಿಎಚ್ಎ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಹೋಟೆಲಿಗರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದಾಗಿ ವಿನಂತಿಸಿಕೊಂಡಿದ್ದಾರೆ.
ಇದೂ ಓದಿ: ಸಮಸ್ಯೆ ಬಗೆಹರಿಯದಿದ್ದರೆ ಆ.15ರಿಂದ ಸ್ವಿಗ್ಗಿ-ಜೊಮ್ಯಾಟೊ ಜೊತೆ ಹೋಟೆಲಿಗರ ವ್ಯವಹಾರ ಸಂಪೂರ್ಣ ಬಂದ್
ಸ್ವಿಗ್ಗಿಗೆ ಸಂಬಂಧಿಸಿದಂತೆ ಪಾವತಿ, ಪ್ರಚಾರ, ಜಾಹೀರಾತು, ಖಾತೆ ಸಂಬಂಧಿತ ಸಮಸ್ಯೆಗಳು ಅಥವಾ ಇತರ ಯಾವುದೇ ಕಾರ್ಯಾಚರಣಾ ತೊಂದರೆಗಳು ಇದ್ದಲ್ಲಿ, ಸಂಬಂಧಿತ ದಾಖಲೆಗಳೊಂದಿಗೆ ಬಿಎಚ್ಎ ಕಚೇರಿಯಲ್ಲಿರುವ ಸ್ವಿಗ್ಗಿ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಸಂಘದ ಸದಸ್ಯರು ಹಾಗೂ ಹೋಟೆಲ್ ಮಾಲೀಕರಿಗೆ ಸುಬ್ರಹ್ಮಣ್ಯ ಹೊಳ್ಳ ಅವರು ತಿಳಿಸಿದ್ದಾರೆ.
ಇದೂ ಓದಿ: ಆಹಾರ ತಯಾರಕರಿಗೆ ಎಫ್ಎಸ್ಎಸ್ಎಐನಿಂದ ಮತ್ತೊಂದು ಮಹತ್ವದ ಆದೇಶ
ಸಹಾಯ ಕೇಂದ್ರದಲ್ಲಿ ನಿಯೋಜಿಸಲಾದ ಸ್ವಿಗ್ಗಿ ಪ್ರತಿನಿಧಿಗಳು ಕಾರ್ಯನಿರ್ವಾಹಕರು ಅಥವಾ ಸಂಪರ್ಕಾಧಿಕಾರಿಗಳು ಆಗಿದ್ದು, ಅವರಿಗೆ ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸುವ ಅಥವಾ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲ. ಅವರು ಹೋಟೆಲಿಗರ ದೂರುಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಂಡು, ಅವುಗಳನ್ನು ಕ್ರೋಢೀಕರಿಸಿ ಸ್ವಿಗ್ಗಿಯ ಸಂಬಂಧಿತ ವಿಭಾಗಗಳಿಗೆ ತಲುಪಿಸಿ, ಸಾಧ್ಯವಾದಷ್ಟು ಬೇಗ ಪರಿಹಾರ ದೊರಕಿಸಲು ನೆರವಾಗುತ್ತಾರೆ ಎಂದು ಸುಬ್ರಹ್ಮಣ್ಯ ಹೊಳ್ಳ ಅವರು ತಿಳಿಸಿದ್ದಾರೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್ ದೇವತಾ ಕಾರ್ಯ, ನೀಲನಕ್ಷೆ ಅನಾವರಣ
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?



